Uncategorized

1996ರ ಬಳಿಕ ಮೊದಲ ಬಾರಿಗೆ ಕರ್ನಾಟಕ ಹೈಕೋರ್ಟ್ ಗೆ ಕನ್ನಡಿಗ ಮುಖ್ಯ ನ್ಯಾಯಮೂರ್ತಿ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಎ.ಹಕೀಮ್​ ಬಳಿಕ, ಅಂದರೆ ಸರಿಸುಮಾರು 27 ವರ್ಷಗಳ ನಂತರ ರಾಜ್ಯದಲ್ಲೇ ಕಾನೂನು ಪದವಿ ಪಡೆದು, ವಕೀಲರಾಗಿ ಸೇವೆ ಸಲ್ಲಿಸಿದ ನಂತರ ಇದೀಗ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನ್ಯಾ.ಪಿ.ಎಸ್.ದಿನೇಶ್ ನೇಮಕಗೊಂಡಿದ್ದಾರೆ ಎನ್ನಲಾಗಿದೆ.

ಕನ್ನಡಿಗ ನ್ಯಾಯಮೂರ್ತಿ ಪಿ.ಎಸ್​.ದಿನೇಶ್‌ ಕುಮಾರ್​ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ನ್ಯಾ.ಎಸ್‌.ಎ.ಹಕೀಮ್​ 1996ರ ಮೇ 3ರಿಂದ 9ರವರೆಗೆ ಕೇವಲ ಆರು ದಿನಗಳ ಕಾಲ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಇವರ ನಂತರ ಕನ್ನಡಿಗರೊಬ್ಬರು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾದ ಉದಾಹರಣೆ ಇಲ್ಲ. ಕೇವಲ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದು, ನಿವೃತ್ತರಾದ ಹಾಗೂ ಬೇರೊಂದು ರಾಜ್ಯದ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾದ ನಿದರ್ಶನವಿದೆ. ಆದರೀಗ 27 ವರ್ಷಗಳ ನಂತರ ಕನ್ನಡಿಗರಾದ ಪಿ.ಎಸ್‌.ದಿನೇಶ್‌ ಕುಮಾರ್​ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದಾರೆ.

1996ರ ಮೇ 10ರ(ಎಸ್‌.ಎ.ಹಕೀಮ್‌ ) ನಂತರ ಈವರೆಗೂ ಒಟ್ಟು 15 ಮಂದಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಅವರಲ್ಲಿ ಯಾರೊಬ್ಬರೂ ಕರ್ನಾಟಕದವರಾಗಿರಲಿಲ್ಲ. ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ (ಹಾಲಿ ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿ) ಪ್ರಸನ್ನ ಬಿ.ವರಾಳೆ ಮೂಲತಃ ಬೆಳಗಾವಿಯ ನಿಪ್ಪಾಣಿಯರಾದವರೂ ಮುಂಬೈನಲ್ಲಿ ಕಾನೂನು ಪದವಿ ಪಡೆದವರು. ಅಲ್ಲಿನ ಕೋರ್ಟ್‌ ನ್ಯಾಯಮೂರ್ತಿಯಾಗಿ 2022ರ ಅ.15ರಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

ಸುಮಾರು 16 ತಿಂಗಳ ಕಾಲ ಕರ್ನಾಟಕ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿ, 2024ರ ಜ.24ರಂದು ಸುಪ್ರಿಂ ಕೋರ್ಟ್‌ಗೆ ಪದೋನ್ನತಿ ಪಡೆದರು. ಅವರಿಂದ ತೆರವಾದ ಸ್ಥಾನಕ್ಕೆ ಪಿ.ಎಸ್‌.ದಿನೇಶ್‌ ಕುಮಾರ್‌ ನೇಮಕಗೊಂಡಿದ್ದಾರೆ.

1985ರ ನಂತರ..: 1984ರ ಮುನ್ನ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಸಂಪ್ರದಾಯವಿದ್ದು, ನಂತರ ಅದಕ್ಕೆ ಬ್ರೇಕ್​ ಬಿದ್ದಿತ್ತು. 1984ರ ಫೆ.6ರಿಂದ 1985ರ ಸೆ.16ರವರೆಗೆ ಕನ್ನಡಿಗರೇ ಆದ ವಿ.ಎಸ್‌.ಮಳೀಮಠ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, ನಂತರ ಕೇರಳ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದರು. ತದನಂತರ ನ್ಯಾ.ಎಸ್‌.ಎ.ಹಕೀಮ್‌ 1996ರ ಮೇ 3ರಿಂದ 1996ರ ಕೊನೆಯವರೆಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಕರ್ನಾಟಕ ಹೈಕೋರ್ಟ್​ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಸಂಪ್ರದಾಯ ನಿಂತಿತ್ತು.

https://newsnotout.com/2024/02/ram-mandir-muslim-leader/

Related posts

ಕಾಂತಾರ ಸಿನಿಮಾಕ್ಕೂ ಶ್ರೀ ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯಕ್ಕೂ ಇರುವ ನಂಟೇನು?

ಮಾ.28 ರಿಂದ ಎಸ್‌ ಎಸ್ ಎಲ್ ಸಿ ಪರೀಕ್ಷೆ, ಹಿಜಾಬ್ ಧರಿಸಿದವರಿಗೆ ಪರೀಕ್ಷೆ ಇಲ್ಲ

ಈ ಕೋಳಿಗೆ ಭರ್ಜರಿ ಫುಡ್‌, ದಿನದ 24 ಗಂಟೆ ಪೊಲೀಸ್ ಭದ್ರತೆ..!ಅರೆ..! ಇದೇನಿದು? ಅಚ್ಚರಿ ಪಡುತ್ತಿದ್ದೀರಾ?ಕೋಳಿಯೊಂದು ವಿಐಪಿ ಆದ ರೋಚಕ ಕಥೆ ಇಲ್ಲಿದೆ ಓದಿ..