ನ್ಯೂಸ್ ನಾಟೌಟ್ : ಒಂದು ಬಿಲ್ಡಿಂಗ್ ಕಟ್ಟಿ ಮುಗಿಸೋಕೆ ದುಡ್ಡು, ಅದಕ್ಕೆ ಬೇಕಾದ ಸಾಮಗ್ರಿಗಳು ರೆಡಿ ಇದ್ರೆ ಒಂದು ವರ್ಷದಲ್ಲಿ ಮುಗಿಸಬಹುದು.ಬಿಲ್ಡಿಂಗ್ ದೊಡ್ಡದಾಗಿ ಇದ್ರೆ ಇನ್ನೂ ಕೆಲ ವರ್ಷಗಳು ಬೇಕಾಗಬಹುದು.ಆದರೆ ಇಲ್ಲೊಂದು ಚರ್ಚ್ ಇದೆ ಬರೋಬ್ಬರಿ ೧೪೧ ವರ್ಷಗಳಿಂದ ಕಟ್ಟುತ್ತಿದ್ದರೂ ಕೂಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ವಂತೆ..! ಅರೆ! ಇದೇನಿದು? ಇಷ್ಟೊಂದು ಟೈಮ್ ಯಾಕೆ ತಕೊಳ್ತಿದೆ ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ಓದಿ…
ಇದು ಸ್ಪೇನ್‌ನ ಸಗ್ರಾಡಾ ಫ್ಯಾಮಿಲಿಯಾ ಬಾರ್ಸಿಲೋನಾ ಎಂಬುದು ಸ್ಪೇನ್‌ನಲ್ಲಿರುವ ರೋಮನ್ ಕ್ಯಾಥೊಲಿಕ್ ಚರ್ಚ್ ಆಗಿದೆ. ಈ ಚರ್ಚ್ ಅನ್ನು 141 ವರ್ಷಗಳಿಂದ ಕಟ್ಟುತ್ತಿದ್ದರೂ ಕಾಮಗಾರಿ ಇನ್ನೂ ಮುಗಿದಿಲ್ಲವೆನ್ನೋದು ಆಶ್ಚರ್ಯಕರ ಸಂಗತಿ. ಇದನ್ನು ಬೆಸಿಲಿಕಾ ಐ ಟೆಂಪಲ್ ಎಕ್ಸ್‌ಪಿಯಾಟೋರಿ ಡಿ ಲಾ ಸಗ್ರಾಡಾ ಫ್ಯಾಮಿಲಿಯಾ ಎಂದೂ ಕರೆಯಲಾಗುತ್ತದೆ. ಇದಕ್ಕೆ ಇನ್ನೂ ಕೆಲವು ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅಂದ್ರೆ 2026 ಅಥವಾ 2032 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದು ವಿಶ್ವದಲ್ಲೇ ನಿರ್ಮಾಣವಾಗುತ್ತಿರುವ ಅತಿದೊಡ್ಡ ಕ್ಯಾಥೋಲಿಕ್ ಚರ್ಚ್ ಆಗಿದ್ದು,ಈ ಕುರಿತು ವೈರಲ್ ಆಗುತ್ತಿರುವ ವೀಡಿಯೊ ನೋಡಿದರೆ ಒಮ್ಮೆ ರೋಮಾಂಚನವಾಗುತ್ತದೆ.
ಈ ಚರ್ಚ್‌ನ ನಿರ್ಮಾಣ ಕಾರ್ಯ ಮಾರ್ಚ್ 19, 1882 ರಂದು ಪ್ರಾರಂಭವಾಯಿತು. ಇದರ ನಿರ್ಮಾಣವು ಹಲವು ಕಾರಣಗಳಿಂದ ಇನ್ನೂ ಪೂರ್ಣಗೊಂಡಿಲ್ಲ. ಆದಾಗ್ಯೂ, ಪೂರ್ಣಗೊಂಡಾಗ, ಇದು ಯುರೋಪಿನ ಅತಿ ಎತ್ತರದ ಧಾರ್ಮಿಕ ಕಟ್ಟಡವಾಗಲಿದೆ ಎಂದು ಹೇಳಲಾಗಿದೆ. ಚರ್ಚ್ ಅನ್ನು ಆಂಟೋನಿ ಗೌಡಿ (1852-1926) ವಿನ್ಯಾಸಗೊಳಿಸಿದರು, ಆದರೆ ಅದರ ವಿನ್ಯಾಸವನ್ನು ನಂತರ ಬದಲಾಯಿಸಲಾಯಿತು. ಈ ಚರ್ಚ್ ಅನ್ನು UNESCO ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.ಇದು ನಿರ್ಮಾಣವಾಗಿ ಎದ್ದು ನಿಂತ್ರೆ ಅತ್ಯಂತ ಆಕರ್ಷಕ ಚರ್ಚ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
1882 ರಿಂದ ನಿರ್ಮಾಣ ಹಂತದಲ್ಲಿದೆ ಎನ್ನಲಾದ ಈ ಚರ್ಚ್ ಇನ್ನೂ ಪೂರ್ಣಗೊಳ್ಳದಿರಲು ಕಾರಣವೇನು? ಇದು 2026 ಅಥವಾ 2032 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ ಇದು ನಿಜನಾ? ಈ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ. ವಿನ್ಯಾಸ ಬದಲಾವಣೆಗಳು, ಹಣಕಾಸಿನ ಸವಾಲುಗಳು, ಬಾಹ್ಯ ಘಟನೆಗಳು, ಸ್ಪ್ಯಾನಿಷ್ ಅಂತರ್ಯುದ್ಧ ಮತ್ತು COVID-19 ಸಾಂಕ್ರಾಮಿಕವು ಈ ಚರ್ಚ್ ಅನ್ನು ಇನ್ನೂ ನಿರ್ಮಿಸದಿರಲು ಕೆಲವು ಕಾರಣಗಳಾಗಿವೆ. ಈಗ ದೇಣಿಗೆ ಮತ್ತು ಟಿಕೆಟ್ ಶುಲ್ಕದಿಂದ ಬಂದ ಹಣದಲ್ಲಿ ಚರ್ಚ್ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಚರ್ಚ್ ಅಪೂರ್ಣವಾಗಿದ್ದರೂ ಕೂಡ ನೋಡೋದಕ್ಕೆ ಅದ್ಭುತವಾಗಿದೆ. ಇದು ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆ ಎಂದು ಪರಿಗಣಿಸಲಾಗಿದೆ. ಇದು ಬಾರ್ಸಿಲೋನಾದ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ ಮತ್ತು ಸ್ಪೇನ್‌ನಲ್ಲಿ ಹೆಚ್ಚು ಭೇಟಿ ನೀಡುವ ತಾಣವಾಗಿದೆ. ಕ್ರಿಸ್‌ಮಸ್‌ನಲ್ಲಿ, ಈ ಚರ್ಚ್‌ನ ಅಲಂಕಾರಗಳು ಮತ್ತು ಅದರ ಗೋಪುರಗಳು ನೋಡಲು ಎರಡು ಕಣ್ಣು ಸಾಲದು ಎಂದು ಪ್ರವಾಸಿಗರು ಅಭಿಪ್ರಾಯ ಪಡುತ್ತಾರೆ.