ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

12ನೇ ತರಗತಿ ಕಲಿತವನಿಂದ ದಿನಕ್ಕೆ 5 ಕೋಟಿಗೂ ಹೆಚ್ಚು ವ್ಯವಹಾರ..! ಈತನ ತಾಂತ್ರಿಕ ಜ್ಞಾನಕ್ಕೆ ಬೆಚ್ಚಿಬಿದ್ದ ಪೊಲೀಸರು!

ನ್ಯೂಸ್ ನಾಟೌಟ್ : 12ನೇ ತರಗತಿಗೆ ವಿದ್ಯಾಭ್ಯಾಸ ಬಿಟ್ಟು ಸೈಬರ್ ಅಪರಾಧಗಳ ಮೂಲಕ ತನ್ನ ಖಾತೆಯಲ್ಲಿ ದಿನಕ್ಕೆ 5 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದ ಕಿಂಗ್‌ಪಿನ್‌ನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯಂತೆ ನಟಿಸಿ ದೇಶಾದ್ಯಂತ ಜನರ ಹಣ ದೋಚುತ್ತಿದ್ದ ಸೈಬರ್ ಕ್ರಿಮಿನಲ್‌ಗಳ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದು, ಸೀಮಿತ ಶಿಕ್ಷಣದ ಹೊರತಾಗಿಯೂ ಉತ್ತಮ ತಾಂತ್ರಿಕ ಜ್ಞಾನ ಹೊಂದಿದ್ದ 49 ವರ್ಷದ ಶ್ರೀನಿವಾಸ್ ರಾವ್ ದಾದಿ ಎಂಬಾತನನ್ನು ಬಂಗೂರ್ ನಗರ ಪೊಲೀಸ್ ಠಾಣೆಯ ತಂಡವು ಹೈದರಾಬಾದ್‌ನ ಐಷಾರಾಮಿ ಹೋಟೆಲ್‌ನಿಂದ ಕಸ್ಟಡಿಗೆ ತೆಗೆದುಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶ್ರೀನಿವಾಸ್ ರಾವ್ ದಾದಿ ಜೊತೆಗೆ ಥಾಣೆಯಲ್ಲಿ ಇಬ್ಬರು ಮತ್ತು ಕೋಲ್ಕತ್ತಾದ ಕೆಲವರು ಸೇರಿದಂತೆ ಆತನ ಗ್ಯಾಂಗ್‌ನ ಇನ್ನೂ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿಸಿದ್ದು. ಆತ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವಂತೆ ನಟಿಸುತ್ತಿದ್ದನು ಎಮದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಈತ ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಮಾತ್ರ ಸಂವಹನ ನಡೆಸುತ್ತಿದ್ದ, ಜೊತೆಗೆ ಪೊಲೀಸರು ಇದುವರೆಗೆ ಆತ ಬಳಸಿದ 40 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಆತನಿಂದ 1.5 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Related posts

ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಟಿಪ್ಪರ್ ! ಏನಿದರ ವಿಶೇಷತೆ ?

ಹಿರಿಯ ನಟಿ ಲೀಲಾವತಿ ಮನೆಗೆ ಬಂದ ಶಿವಣ್ಣ..! ಆರೋಗ್ಯ ವಿಚಾರಿಸಿದ ಡಾ.ರಾಜ್ ಕುಮಾರ್ ಪುತ್ರ

ಸಲ್ಮಾನ್‌ ಖಾನ್‌ನನ್ನು ಕೊಂದೇ ತೀರುವುದಾಗಿ ಹೇಳಿಕೆ ನೀಡಿದ ಗ್ಯಾಂಗ್​ಸ್ಟರ್ ! ದೇವಸ್ಥಾನಕ್ಕೆ ತೆರಳಿ ಕ್ಷಮೆ ಕೇಳಬೇಕು ಎಂದು ಆಗ್ರಹ..!