ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

12ರ ಬಾಲಕಿಯನ್ನು 5 ಲಕ್ಷಕ್ಕೆ ಮಾರಿದ ತಂದೆ..! 72 ರ ಮುದುಕನ ಜೊತೆ ಮದುವೆ..!

ನ್ಯೂಸ್ ನಾಟೌಟ್: ತಂದೆಯೊಬ್ಬ ತನ್ನ 12 ವರ್ಷದ ಮಗಳನ್ನು 72 ವರ್ಷದ ವ್ಯಕ್ತಿಗೆ ಮಾರಾಟ ಮಾಡಿ ಮದುವೆ ಮಾಡಲು ಯತ್ನಿಸಿದ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ನಡೆದಿದೆ. ಆದರೆ ಇದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆ ಮದುವೆಯನ್ನು ನಿಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ 72ರ ಮುದುಕನನ್ನು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ತಂದೆಯನ್ನು ಆಲಂ ಸೈಯದ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಬಾಲಕಿಯ ತಂದೆ ಸೈಯದ್ ತನ್ನ ಮಗಳನ್ನು 5 ಲಕ್ಷಕ್ಕೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಗೆ ಮುನ್ನ ಇಷ್ಟು ಹಣ ಸಿಗದಿದ್ದರೆ ಮದುವೆ ಮಾಡಿಕೊಡುವುದಿಲ್ಲ ಎಂದು ಸೈಯದ್ ಹೇಳಿದ್ದಾನೆ. ಪೊಲೀಸರು ಮಧ್ಯ ಪ್ರವೇಶಿಸಿ ಮದುವೆಗೂ ಮುನ್ನ ತಡೆದಿದ್ದಾರೆ.

ಇದಲ್ಲದೆ, ಬಾಲಕಿಯನ್ನು ಮದುವೆಯಾಗಲು ಹೊರಟಿದ್ದ ಮುದುಕ ವರ ಹಬೀಬ್ ಖಾನ್ ಮತ್ತು ಮದುವೆ ನಡೆಸಲು ಮುಂದಾದ ಇತರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಪೊಲೀಸರು ಎಂಟ್ರಿಯಾಗುತ್ತಿದ್ದಂತೆ ಬಾಲಕಿಯ ತಂದೆ ಸೈಯದ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರಿಂದ ಬಾಲಕಿ ತಂದೆ, ವರ ಮತ್ತು ನಿಕಾಹ್ ಖಾವಾನ್ ವಿರುದ್ಧ ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Click 👇

https://newsnotout.com/2024/06/darshan-and-gang-issue-gold-kannada-news
https://newsnotout.com/2024/06/hair-cutting-shop-owner-misbehaviour-police-issue
https://newsnotout.com/2024/06/viral-news-company-interview-kannada-news
https://newsnotout.com/2024/06/darshan-and-gang-issue-accued-and-his-father-nomore

Related posts

ಕಾಸರಗೋಡು: ದೇವಸ್ಥಾನದ ಎದುರೇ ಹಿಂದೂಗಳನ್ನ ನೇಣಿಗೆ ಹಾಕ್ತೇವೆ ಘೋಷಣೆ, ಕೇರಳ ಮುಸ್ಲಿಂ ಲೀಗ್ ಜಾಥಾದಲ್ಲಿ ಇದೇನಿದು ವಿವಾದಾತ್ಮಕ ಘೋಷಣೆ..?

ಮಹಿಳೆಯ ಸ್ತನ ಶಸ್ತ್ರಚಿಕಿತ್ಸೆಯ ವಿಡಿಯೋ ಚಿತ್ರೀಕರಿಸಿ ವೈರಲ್‌ ಮಾಡಿದ ಕಿಡಿಗೇಡಿಗಳು.! ರೊಚ್ಚಿಗೆದ್ದ ಮಹಿಳೆ ಮಾಡಿದ್ದೇನು..?

9 ಅಕ್ರಮ ಮಸೀದಿಗಳು ನೆಲಸಮ..! 103 ಎಕರೆ ಸರ್ಕಾರಿ ಭೂಮಿಯ ಅತಿಕ್ರಮಣದ ವಿರುದ್ಧ ಕಾರ್ಯಾಚರಣೆ..!