ದೇಶ-ಪ್ರಪಂಚರಾಜಕೀಯ

14 ಮಂದಿ ಮಕ್ಕಳಿದ್ದರೂ ನನ್ನ ಆಸ್ತಿಯನ್ನು ಪ್ರಧಾನಿ ಮೋದಿ ಹೆಸರಿಗೇ ಬರೆಯೋದು ಎಂದ ಅಜ್ಜಿ..! 100 ವರ್ಷದ ಅಜ್ಜಿ ಹೀಗೆ ಹೇಳಿದ್ಯಾಕೆ?

ನ್ಯೂಸ್ ನಾಟೌಟ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನ ಮೆಚ್ಚುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.ವಿದೇಶಗಳಲ್ಲಿಯೂ ಈ ನಾಯಕನಿಗೆ ಅಭಿಮಾನಿಗಳಿದ್ದಾರೆ. ಇಲ್ಲೊಬ್ಬರು ವೃದ್ಧೆ ಇದ್ದಾರೆ. ಅವರಿಗೂ ಮೋದಿ ಅಂದರೆ ಇಷ್ಟ.ಮೋದಿಯ ದೊಡ್ಡ ಅಭಿಮಾನಿಗಳಲ್ಲಿ ವೃದ್ದೆ ಕೂಡ ಒಬ್ಬರು.ಎಷ್ಟರ ಮಟ್ಟಿಗೆ ಅಭಿಮಾನಿ ಅಂದರೆ ಅವರ ಬಳಿಯಿರುವ ಜಮೀನನ್ನೇ ಕೊಡುವಷ್ಟರ ಮಟ್ಟಿಗೆ.

ಅಂದ ಹಾಗೆ ಈ ಅಜ್ಜಿಗೆ ಮಕ್ಕಳೇ ಇಲ್ವೇನೋ ಅಂದ್ಕೋಬೇಡಿ.ಇವರಿಗೆ 14 ಮಂದಿ ಮಕ್ಕಳಿದ್ದಾರೆ. ಆದರೂ ಪ್ರಧಾನಿ ಮೋದಿಯವರನ್ನು ತನ್ನ 15ನೇ ಮಗ ಎಂದು ಭಾವಿಸಿಕೊಂಡಿದ್ದಾರಂತೆ. ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯ ಹರಿಪುರ ಗ್ರಾಮದಲ್ಲಿ ವಾಸವಾಗಿರುವ ಈ ಅಜ್ಜಿಗೆ ಇದೀಗ 100 ವರ್ಷ. ಹೆಸರು ಮಂಗಿಬಾಯಿ ತನ್ವಾರ್​.

ಮೋದಿಯವರು ದೇಶಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ.ಈ ದೇಶಕ್ಕೆ ಅವರ ಕೊಡುಗೆ ಅಪಾರ ಎನ್ನುವ ಅಜ್ಜಿ ತಮ್ಮ 25 ಎಕರೆ ಜಮೀನನ್ನು ಮೋದಿಗೆ ನೀಡುತ್ತೇನೆಂದು 100 ವರ್ಷದ ಮಂಗಿಬಾಯಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಈ ಕುರಿತಾಗಿ ಮಾತನಾಡಿದ ವೃದ್ಧೆ, ಮೋದಿಯನ್ನು ಟಿವಿಯಲ್ಲಿ ಹಲವು ಬಾರಿ ನೋಡಿದ್ದೇನೆ. ಮೋದಿ ನನಗೆ ಮನೆ ಕೊಟ್ಟರು. ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಮೋದಿ ಅಷ್ಟೊಂದು ಕೊಟ್ಟಿದ್ದರಿಂದ ಹಣ ಉಳಿಸಿ ತೀರ್ಥಯಾತ್ರೆಗೆ ತೆರಳಲು ಸಾಧ್ಯವಾಯಿತು. ಅವಕಾಶ ಸಿಕ್ಕರೆ ಸ್ವತಃ ಮೋದಿಯವರನ್ನು ಭೇಟಿ ಮಾಡುತ್ತೇನೆಂದು ಹೇಳಿದ್ದಾರೆ.

Related posts

ಚುನಾವಣೆ ಬಳಿಕ ರಾಹುಲ್ ಗಾಂಧಿ ಬಂಧನ..! ಭವಿಷ್ಯ ನುಡಿದ ಅಸ್ಸಾಂ ಸಿಎಂ..!

ಪುತ್ತೂರು: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು..! ಪೊಲೀಸರ ವಿರುದ್ಧವೂ ದೂರು ನೀಡಿದ ಮಹಿಳೆ..!

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರಿಗೆ ಮಾತೃ ವಿಯೋಗ