ಕ್ರೈಂವೈರಲ್ ನ್ಯೂಸ್

10 ವರ್ಷದ ಹುಡುಗನ ಕೈಯಿಂದ ಒಂದು ವರ್ಷದ ಮಗುವನ್ನು ಅಪಹರಿಸಿದ ಅಪರಿಚಿತ..! ಕುಡಿದ ಮತ್ತಿನಲ್ಲಿ ಘಟನೆ ನಡೆದಿರುವ ಶಂಕೆ..!

ನ್ಯೂಸ್‌ ನಾಟೌಟ್‌: ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗುವನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಿಸಿದ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ರಾಮೇಶ್ವರಿ ತನ್ನ ಇಬ್ಬರು ಮಕ್ಕಳೊಂದಿಗೆ, ತಾಯಿ ಪದ್ಮಾ ಪವಾರ್ ಜೊತೆಗೆ ವಿಜಯಪುರಕ್ಕೆ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ತಾಯಿ ಪದ್ಮಾ ಪವಾರ್ ಆರೋಗ್ಯ ಕೆಟ್ಟಿದೆ. ಹೀಗಾಗಿ ಮೂರು ದಿನಗಳ ಹಿಂದೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನವೆಂಬರ್ 23ರ ಬೆಳಿಗ್ಗೆ 10-30ರಿಂದ 11ಗಂಟೆಯೊಳಗೆ ರಾಮೇಶ್ವರಿ ತಾಯಿ ಪದ್ಮಾಳ ಕಫದ ಪರೀಕ್ಷೆಗಾಗಿ ತಾಯಿ ಬಳಿ 1ವರ್ಷದ ಮಗು ಸಂದೀಪ್ ನನ್ನು ಬಿಟ್ಟು ಹೋಗಿದ್ದಳು.

ಈ ವೇಳೆ ಸಂದೀಪ್ ಎದ್ದು ಅಳಲಿಕ್ಕೆ ಶುರು ಮಾಡಿದಾಗ ಮತ್ತೋರ್ವ ಪರಿಚಿತ 10 ವರ್ಷದ ಹುಡುಗ ಮಗುವನ್ನು ಎತ್ತಿ ಆಟವಾಡಿಸುತ್ತಿದ್ದ. ಇದನ್ನೇ ಗಮನಿಸಿದ ಅಪರಿಚಿತ ವ್ಯಕ್ತಿ ವಾರ್ಡ್ ನೊಳಗೆ ಬಂದು ಮಗುವನ್ನು ಎತ್ತಿ ಆಡಿಸಿದ್ದಾನೆ. ಆ ಬಳಿಕ ಮಗುವನ್ನು ಹೊರಗೆ ತೆಗೆದುಕೊಂಡು ಹೋಗಿ ವ್ಯಕ್ತಿ ಮಗುವನ್ನು ಅಪಹರಿಸಿದ್ದಾನೆ. ಅಪರಿಚಿತ ವ್ಯಕ್ತಿ ಕುಡಿದ ಮತ್ತಿನಲ್ಲಿದ್ದ ಎಂದು ತಿಳಿದು ಬಂದಿದೆ.

ಅಪರಿಚಿತ ವ್ಯಕ್ತಿ ಇದೇ ವಾರ್ಡ್ ನ ಹೊರಗಡೆ ರಾತ್ರಿ ಮಲಗಿಕೊಂಡಿದ್ದ ಎನ್ನಲಾಗಿದ್ದು, ಯಾರೋ ರೋಗಿಯ ಸಂಬಂಧಿ ಇರಬೇಕು ಎಂದು ಶಂಕಿಸಲಾಗಿದೆ. ಈ ಬಗ್ಗೆ ಮಗುವಿನ ತಾಯಿ ರಾಮೇಶ್ವರಿ ಜಿಲ್ಲಾಸ್ಪತ್ರೆಯಲ್ಲಿರುವ ಪೊಲೀಸರಿಗೆ ಹಾಗೂ ವೈದ್ಯರಿಗೂ ತಿಳಿಸಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/11/kannada-news-lovers-issue-viral-news-bengaluru/

Related posts

ಬಿಜೆಪಿ ಸಂಸದನಿಗೆ ಬಿದ್ದು ಗಾಯ, ರಾಹುಲ್ ಗಾಂಧಿ ತಳ್ಳಿ ಗಾಯಗೊಳಿಸಿದ್ದಾರೆ ಎಂದ ಸಂಸದ..! ಇಲ್ಲಿದೆ ವಿಡಿಯೋ

ದೇವರು ಕೊಡುವ ಬದಲು ಪೂಜಾರಿಯೇ ವರ ಕೊಟ್ಟ..! ಮಕ್ಕಳಾಗಿಲ್ಲ ಎಂದು ದೇವರ ಬಳಿ ಬಂದವಳು ಪೂಜಾರಿ ಜೊತೆಯೇ ಎಸ್ಕೇಪ್! ಏನಿದು ರೋಚಕ ಸ್ಟೋರಿ?

ಹತ್ಯೆಯಾದ ಬಿಜೆಪಿ ನಾಯಕನನ್ನು ಸ್ಮರಿಸಿ ಕಣ್ಣೀರಿಟ್ಟ ಮೋದಿ..! ಯಾರು ಆ ಮುಖಂಡ..?