ಬೆಂಗಳೂರುವೈರಲ್ ನ್ಯೂಸ್

ಬೆಂಗಳೂರಿನ ಖ್ಯಾತ ಹೋಟೆಲ್‌ ಮುಂದೆ ನಿಂತು ಅದೇ ಹೋಟೆಲ್ ನಿಂದ ಝೊಮ್ಯಾಟೊದಲ್ಲಿ ಬೆಣ್ಣೆ ದೋಸೆ ಆರ್ಡರ್‌ ಮಾಡಿದ ಮಹಿಳೆ..! ಏನಿದು ವೈರಲ್ ಪೋಸ್ಟ್..?

216

ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ಹಲವಾರು ಪ್ರಸಿದ್ಧ ಹೋಟೆಲ್‌ ಗಳಿವೆ. ಅಂತಹ ಹೋಟೆಲ್‌ಗಳಲ್ಲಿ CTR (ಶ್ರೀ ಸಾಗರ್‌ ಸೆಂಟ್ರಲ್ ಟಿಫಿನ್ ರೂಮ್)‌ ಕೂಡಾ ಒಂದು. ಮಲ್ಲೇಶ್ವರಂನಲ್ಲಿರುವ ಈ ಹೋಟೆಲ್‌ ರುಚಿಕರವಾದ ಮಾಸಾಲೆ ದೋಸೆಗೆ ಹೆಸರುವಾಸಿಯಾಗಿದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನವರರೆಗೆ ಹೆಚ್ಚಿನವರು ದಕ್ಷಿಣ ಭಾರತೀಯ ಭಕ್ಷ್ಯಗಳನ್ನು ಸವಿಯಲು ಇಲ್ಲಿಗೆ ಭೇಟಿ ನೀಡುತ್ತಾರೆ. ಮತ್ತು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ತಮ್ಮಿಷ್ಟದ ಖಾದ್ಯ ಸವಿದು ಹೋಗ್ತಾರೆ. ಇಲ್ಲೊಬ್ರು ಮಹಿಳೆ CTR ಮುಂದೆ ಯಾರಪ್ಪಾ ಗಂಟೆಗಟ್ಟಲೆ ಕಾಯ್ತರೆ ಎನ್ನುತ್ತಾ ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ CTR ಮುಂದೆ ನಿಂತು ಅದೇ ಹೋಟೆಲ್‌ ನಿಂದ ಥಟ್ಟನೆ ಝೊಮ್ಯಾಟೊದಿಂದ ಬೆಣ್ಣೆ ದೋಸೆ ಆರ್ಡರ್‌ ಮಾಡಿ . ಈ ಕುರಿತ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಸಾಮಾನ್ಯವಾಗಿ CTR ಮುಂದೆ ಜನ ಕ್ಯೂನಲ್ಲಿ ನಿಂತಿರ್ತಾರೆ. ಹೀಗೆ ಕಾದು ಕಾದು ಹೋಟೆಲ್‌ಗೆ ಹೋದ್ರು ಆರ್ಡರ್‌ ಮಾಡಿದ ದೋಸೆ ಬರೋದಕ್ಕೆ ಸುಮಾರು 40 ನಿಮಿಷಗಳಾದ್ರೂ ತಗುಲುತ್ತದೆ. ಹೀಗಾದ್ರೆ ಖಂಡಿತವಾಗಿಯೂ ನಾವು ಸಿನಿಮಾ ಥಿಯೇಟರ್‌ ಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಿಲ್ಲ ಎಂದು ಬುದ್ಧಿವಂತಿಕೆಯನ್ನು ಉಪಯೋಗಿಸಿದ ಮಹಿಳೆಯೊಬ್ಬರು CTR ಮುಂದೆಯೇ ನಿಂತು ಝೊಮ್ಯಾಟೊದಲ್ಲಿ ಬೆಣ್ಣೆ ದೋಸೆ ಆರ್ಡರ್‌ ಮಾಡಿ ಸವಿದಿದ್ದಾರೆ.

ಆರ್ಡರ್‌ ಮಾಡಿದ ಕೇವಲ 20 ನಿಮಿಷಗಳ ಒಳಗೆ ಬೆಣ್ಣೆ ದೋಸೆ ಡೆಲಿವರಿ ಆಗಿದ್ದು, ಸ್ನೇಹಿತರೊಂದಿಗೆ ಕಾರಿನಲ್ಲಿ ಕುಳಿತು ಆಕೆ ಬೆಣ್ಣೆ ದೋಸೆ ಸವಿದಿದ್ದಾರೆ.
arbyahbuna ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ 1ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ ಗಳನ್ನು ಪಡೆದುಕೊಂಡಿದೆ.

Click

https://newsnotout.com/2024/12/job-vacancy-at-engineering-collages-of-govt-of-karnataka/
https://newsnotout.com/2024/12/commando-kannada-news-kodagu-ponch-kashmir-d/
https://newsnotout.com/2024/12/dulicate-bith-cirtificate-kannada-news-viral-news-case/
https://newsnotout.com/2024/12/yamuna-river-manmhan-singh-kannada-news-v/
See also  ಅಧಿಕಾರಿಯ ಲಂಚದಾಹಕ್ಕೆ ಬೇಸತ್ತು ಆತನ ಮೇಲೆ ನೋಟಿನ ಸುರಿಮಳೆಗೈದು ಪ್ರತಿಭಟಿಸಿದ ಜನ..! ಇಲ್ಲಿದೆ ವೈರಲ್ ವಿಡಿಯೋ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget