Latestರಾಜ್ಯವೈರಲ್ ನ್ಯೂಸ್

ಏ. 24 ರಂದು ಶೂನ್ಯ ನೆರಳಿನ ದಿನ..! ಈ ವಿದ್ಯಮಾನದ ಬಗ್ಗೆ ವಿಜ್ಞಾನಿಗಳು ಹೇಳಿದ್ದೇನು..?

1.3k

ನ್ಯೂಸ್‌ ನಾಟೌಟ್‌: ಏಪ್ರಿಲ್ 24 ರಂದು ಮಧ್ಯಾಹ್ನ 12.17 ಕ್ಕೆ ಬೆಂಗಳೂರಿನಲ್ಲಿ ಶೂನ್ಯ ನೆರಳಿನ ದಿನ(Zero Shadow Day) ಅಥವಾ ಲಹೈನಾ ನೂನ್ ಎಂದು ಕರೆಯಲ್ಪಡುವ ಆಕರ್ಷಕ ಘಟನೆ ನಡೆಯಲಿದೆ. ಈ ಅಪರೂಪದ ಕ್ಷಣದಲ್ಲಿ ಸೂರ್ಯನು ನೇರವಾಗಿ ತಲೆಯ ಮೇಲೆ ಇರುತ್ತಾನೆ, ಇದರಿಂದಾಗಿ ನಿಮ್ಮ ನೆರಳು ನಿಮಗೆ ಕಾಣುವುದಿಲ್ಲ ಎಂದು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ (IIA)ವಿಜ್ಞಾನಿಗಳು ತಿಳಿಸಿದ್ದಾರೆ.

IIA ನಲ್ಲಿ ವಿಜ್ಞಾನ ಸಂವಹನ, ಸಾರ್ವಜನಿಕ ಸಂಪರ್ಕ ಮತ್ತು ಶಿಕ್ಷಣ (SCOPE) ವಿಭಾಗದ ನೇತೃತ್ವ ವಹಿಸಿರುವ ಡಾ. ನಿರುಜ್ ಮೋಹನ್ ರಾಮಾನುಜಂ, ಸೂರ್ಯನು ಆಕಾಶದಲ್ಲಿ ತನ್ನ ಅತ್ಯುನ್ನತ ಬಿಂದುವನ್ನು ತಲುಪಿದಾಗ ಈ ವಿದ್ಯಮಾನ ಸಂಭವಿಸುತ್ತದೆ. ಪರಿಣಾಮವಾಗಿ, ನೆರಳುಗಳು ನೇರವಾಗಿ ವಸ್ತುಗಳ ಕೆಳಗೆ ಬೀಳುತ್ತವೆ ಮತ್ತು ಮಾನವ ಕಣ್ಣಿಗೆ ಅಗೋಚರವಾಗಿರುತ್ತವೆ ಎಂದು ವಿವರಿಸಿದ್ದಾರೆ.

ವಾಸ್ತವವಾಗಿ, ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ (ASI) ಪ್ರಕಾರ, +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವಿನ ಎಲ್ಲಾ ಸ್ಥಳಗಳಿಗೆ ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ. ಎ.24ಕ್ಕೆ ಶೂನ್ಯ ನೆರಳು ದಿನ ಬೆಂಗಳೂರು, ಚೆನ್ನೈ ಮತ್ತು ಮಂಗಳೂರು ಮುಂತಾದ ಕೆಲ ಸ್ಥಳಗಳನ್ನು ಒಳಗೊಂಡಂತೆ ಸಮಭಾಜಕ ವೃತ್ತ ಮತ್ತು ಕರ್ಕಾಟಕ ವೃತ್ತದ ನಡುವೆ ಇರುವ ಎಲ್ಲಾ ನಗರಗಳಲ್ಲಿ ನಡೆಯುತ್ತದೆ.

“ನೀನ್ ಹೊರಗೆ ಸಿಗು ನೋಡ್ಕೊತೀನಿ….”ಎಂದು ಎಲ್ಲರೆದುರು ಕೋರ್ಟ್ ನಲ್ಲಿ ನ್ಯಾಯಾಧೀಶೆಗೆ ಜೀವ ಬೆದರಿಕೆ..! ನಿವೃತ್ತ ಶಿಕ್ಷಕನಿಗೆ 1.10 ವರ್ಷ ಜೈಲು..!

ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಪ್ರೇಮಿಗಳು ಕಾಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ..! ಪಿಯುಸಿ ಫಲಿತಾಂಶ ಬಂದ ದಿನದಿಂದ ನಾಪತ್ತೆಯಾಗಿದ್ದ ಜೋಡಿ..!

ಮಗಳ ಮಾವನ ಜೊತೆ ನಾಲ್ಕು ಮಕ್ಕಳ ತಾಯಿ ಪರಾರಿ..! ದೂರು ದಾಖಲಿಸಿದ ಗಂಡ..!

See also  ಉಮಾಪತಿ, ಪ್ರಥಮ್‍ ಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ ಅರೆಸ್ಟ್..! ವಿಡಿಯೋ ಮಾಡಿ ಕ್ಷಮೆ ಕೇಳಿದ ಅಂಧಾಭಿಮಾನಿ..! ಬೆದರಿಕೆ ಹಾಕಿದ ಎಲ್ಲರ ವಿರುದ್ಧ ಕ್ರಮಕ್ಕೆ ಪೊಲೀಸರ ಸಿದ್ಧತೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget