Latestಸುಳ್ಯ

ಏ.25ರಂದು ಝೈನ್ ಎಕ್ಸಲೆನ್ಸ್ ಫಾರ್ ಮೋರಲ್ ಎಜುಕೇಶನ್ ಅಡ್ಕ-ಅಜ್ಜಾವರ 8ನೇ ವಾರ್ಷಿಕ ಹಾಗೂ 2ನೇ ಸನದುದಾನ ಸಮ್ಮೇಳನ

266

ನ್ಯೂಸ್‌ ನಾಟೌಟ್‌ : ಮಹಿಳೆಯರ ಸಮನ್ವಯ ವಿದ್ಯಾಭ್ಯಾಸ, ಉನ್ನತಿಗಾಗಿ SKSSF ಅಡ್ಕ ಇರುವಂಬಳ್ಳ ಶಾಖೆ ಆರಂಬಿಸಿದ ಝೈನ್ ಎಕ್ಸಲೆನ್ಸ್ ಫಾರ್ ಮೋರಲ್ ಎಜುಕೇಶನ್ ಅಡ್ಕ – ಅಜ್ಜಾವರ ವಿದ್ಯಾಸಂಸ್ಥೆಯ ಸನದುದಾನ ಸಮ್ಮೇಳನ ಅಜ್ಜಾವರದ ಎಜು ಗಾರ್ಡನ್‌ ನಲ್ಲಿ ಏಪ್ರಿಲ್ 25ರಂದು ಸಂಜೆ 7ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ವರ್ಕಿಂಗ್ ಕಾರ್ಯದರ್ಶಿ ಮಹಮ್ಮದ್ ಶಾಫೀ ದಾರಿಮಿ ಅಜ್ಜಾವರ ಸುಳ್ಯದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮ ಸಂಜೆ 7ಕ್ಕೆ ಮಜ್ಲಿಸುನ್ನೂರ್ ಆತ್ಮೀಯ ಸಂಗಮ ಝೈನಿಯಾ ಚೇರ್ಮನ್ ಸಯ್ಯಿದ್ ಅಕ್ರಂ ಅಲೀ ತಂಙಳ್ ನೇತೃತ್ವದಲ್ಲಿ ನಡೆಯಲಿದೆ. ಸಯ್ಯಿದ್ ಝೈನುಲ್ ಅಬಿದೀನ್ ತಂಙಳ್ ದುಗಲಡ್ಕ ಕಾರ್ಯಕ್ರಮದ ದುಆ ನೇತೃತ್ವ ವಹಿಸಲಿದ್ದಾರೆ. ಸನದುದಾನ ಸಮ್ಮೇಳನವನ್ನು ಉದ್ಘಾಟಿಸಿ ಮುಸ್ಲಿಂ ಕೈರಳಿಯ ಅಜೇಯ ನಾಯಕತ್ವ ಸಯ್ಯಿದುಲ್ ಉಲಮಾ ಸಯ್ಯಿದ್ ಜುಫ್ರೀ ಮುತ್ತುಕೋಯ ತಂಙಳ್ ಮಾತನಾಡಲಿದ್ದಾರೆ. ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸನದುದಾನ ಪ್ರಭಾಷಣ ನೆರವೇರಿಸಲಿದ್ದಾರೆ.

ಬಳಿಕ ಅಂತಾರಾಷ್ಟ್ರೀಯ ಖ್ಯಾತ ವಾಗ್ಮಿ ನೌಶಾದ್ ಬಾಖವಿ ತಿರುವನಂತಪುರಂ ಅವರ ಪ್ರಭಾಷಣ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಯ್ಯಿದ್ ಹಕೀಂ ತಂಙ್ಙಳ್ ಆದೂರು, ಅಬ್ದುಲ್ ಮಜೀದ್ ದಾರಿಮಿ ಪೈವಳಿಕೆ, ಇರ್ಷಾದ್ ದಾರಿಮಿ ಮಿತ್ತಬೈಲ್, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಉಸ್ತಾದ್ ಶರೀಫ್ ಪೈಝಿ ಕಡಬ , ನಸೀಹ್ ದಾರಿಮಿ, ಅಬ್ದುಲ್ಲಾ ನಿಝಾಮಿ ಸೇರಿದಂತೆ ಸುಳ್ಯ ತಾಲೂಕಿನ ಜಮಾಹತಿನ ಖತೀಬ್ ಉಸ್ತಾದರು ಗಣ್ಯ ಉಪಸ್ಥಿತರಿದ್ದಾರೆ. ಶರೀಫ್ ಹಾಜಿ ವೈಟ್ ಸ್ಟೋನ್, ಸಿಎಂ ಅಬ್ದುಲ್ ಖಾದರ್ ಹಾಜಿ ಚೆರ್ಕಲ, ಅಬ್ದುಲ್ ರಹಿಮಾನ್ ಸಂಕೇಶ್ , ಲತೀಫ್ ಹರ್ಲಡ್ಕ, ಓಮೆಗಾ ಮುಹಮ್ಮದ್, ಅಬ್ದುಲ್ ಲತೀಫ್ ಹಾಜಿ ಬೆಂಗಳೂರು, ಉಮ್ಮರ್ ಹಾಜಿ ಬೆಂಗಳೂರು, ಬಶೀರ್ ಹಾಜಿ ಕೊಡಗು, ಹಂಝ ಎಡಪಾಳಂ, ಇಕ್ಬಾಲ್ ಕೋಲ್ಪೆ, ಡಾ ನಝೀರ್ ಕಾವು, ಇಬ್ರಾಹಿಂ ಹಾಜಿ ಪುಸ್ಪಕ್, ಹಿರಾ ಖಾದರ್ ಹಾಜಿ, ಎನ್ ಎಸ್ ಅಬ್ದುಲ್ಲ ಹಾಜಿ, ಕೆ ಎಚ್ ಮುಹಮ್ಮದ್ ಈಶ್ವರಮಂಗಳ, ಇಬ್ರಾಹಿಂ ಹಾಜಿ ಸಿ ಪುಡ್, ಮಜೀದ್ ಜನತಾ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಅಬೂಬಕ್ಕರ್ ಮಂಗಳ, ಟಿ.ಎಂ ಶಹೀದ್ ತೆಕ್ಕಿಲ್ , ಹಮೀದ್ ಕುತ್ತಮೊಟ್ಟೆ , ಮುಸ್ತಾಫ ಜನತಾ ರನ್ನು ಒಳಗೊಂಡ ರಾಜಕೀಯ ನಾಯಕರು ಬಾಗವಹಿಸಲಿದ್ದಾರೆ.

ಕಾರ್ಯಕ್ರಮದ ಪ್ರಯುಕ್ತ ಸಂಜೆ 4 .30 ಕ್ಕೆ ಸ್ವಾಗತ ಸಮಿತಿ ಗೌರವಾಧ್ಯಕ್ಷ ಇಸ್ ಹಾಕ್ ಹಾಜಿ ಪಾಜಪಳ್ಳ ಧ್ವಜಾರೋಹಣ ನಡೆಸಲಿದ್ದಾರೆ. ಝೈನಿಯಾ ಪ್ರಿನ್ಸಿಪಾಲ್ ಅಬ್ದುಲ್ಲಾ ನಿಝಾಮಿ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾಗೋ‍ಷ್ಠಿಯಲ್ಲಿ ಝೈನಿಯಾ ರಕ್ಷಾಧಿಕಾರಿಗಳಾದ ಸಯ್ಯಿದ್ ಹಕೀಂ ತಂಙಳ್ ಅದೂರು, ಸ್ವಾಗತ ಸಮಿತಿ ಚೇರ್ಮನ್ ಕತ್ತರ್ ಇಬ್ರಾಹಿಂ ಹಾಜಿ ಮಂಡೆಕೋಲು, ವರ್ಕಿಂಗ್ ಕಾರ್ಯದರ್ಶಿ ಮಹಮ್ಮದ್ ಶಾಫೀ ದಾರಿಮಿ ಅಜ್ಜಾವರ, ಝೈನಿಯಾ ಪ್ರ ಕಾರ್ಯದರ್ಶಿ ಮೊಹಿಯ್ಯದ್ದೀನ್ ಅನ್ಸಾರಿ, ಸ್ವಾಗತ ಸಮಿತಿ ಕನ್ವೀನರ್ ಸಿದ್ದೀಕ್ ಅಡ್ಕ ಉಪಸ್ಥಿತರಿದ್ದರು.

  Ad Widget   Ad Widget   Ad Widget   Ad Widget   Ad Widget   Ad Widget