ಕರಾವಳಿಕ್ರೈಂವಿಡಿಯೋವೈರಲ್ ನ್ಯೂಸ್

‘ನನ್ನಿಂದ ತಪ್ಪಾಗಿದೆ… ಮದುವೆಯಾದವರನ್ನು ಬಿಟ್ಟು ನನ್ನ ಜೊತೆ ಬಾ ಎಂದು ನಾನ್ ಹೇಳಿಲ್ಲ’ ಸಪ್ತಮಿ ಗೌಡ ಯುವರಾಜ್ ಕುಮಾರ್ ಜೊತೆಗಿನ ಸಂಬಂಧವನ್ನು ಒಪ್ಪಿಕೊಂಡ್ರಾ..? ಇಲ್ಲಿದೆ ವೈರಲ್ ಆಡಿಯೋ

252

ನ್ಯೂಸ್‌ ನಾಟೌಟ್‌: ನಟ ಯುವರಾಜ್‌ ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಗೆ ವಿಚ್ಚೇದನ ನೋಟಿಸ್‌ ನೀಡಿದ ಬಳಿಕ ಎರಡೂ ಕಡೆಯಿಂದ ಗಂಭೀರವಾದ ಆರೋಪ- ಪ್ರತ್ಯಾರೋಪಗಳು ಕೇಳಿ ಬಂದಿತ್ತು.

ಜೊತೆಗೆ ವಿಚ್ಚೇದನ ನೋಟಿಸ್‌ ನೀಡಿದ ಬಳಿಕ ಯುವರಾಜ್‌ ಕುಮಾರ್‌ ಅವರ ಪರ ವಕೀಲ ಸುದ್ದಿಗೋಷ್ಠಿ ನಡೆಸಿ ಶ್ರೀದೇವಿ ಭೈರಪ್ಪ ಅವರಿಗೆ ರಾಧಯ್ಯ ಎಂಬ ವ್ಯಕ್ತಿ ಜತೆ ಅಕ್ರಮ ಸಂಬಂಧ ಇದೆ ಎಂದು ಶ್ರೀದೇವಿ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡಿದ್ದರು. ಆ ಬಳಿಕ ಯುವ ವಿರುದ್ಧ ಶ್ರೀದೇವಿ ಸಪ್ತಮಿ ಗೌಡ ಜತೆ ಯುವ ಸಂಬಂಧ ಹೊಂದಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಮಾಡಿದ್ದರು.

ಇದಾದ ನಂತರ ಶ್ರೀದೇವಿ ವಿರುದ್ಧ ಸಪ್ತಮಿ ಗೌಡ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ಯುವರಾಜ್‌ ಬಗ್ಗೆ ಸಪ್ತಮಿ ಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗುತ್ತಿದ್ದು, ಈ ಆಡಿಯೋದಲ್ಲಿ ಅವರು ತನ್ನ ಮತ್ತು ಯುವರಾಜ್ ಕುಮಾರ್ ಸಂಬಂಧ ಇದ್ದ ಬಗ್ಗೆ ಸುಳಿವು ನೀಡಿದ್ದು, ನಾನು ಹೆಂಡತಿಯನ್ನು ಬಿಟ್ಟು ನನ್ನ ಜೊತೆ ಇರಿ ಎಂದು ನಾನು ಹೇಳಿಲ್ಲ ಎಂದು ಹೇಳಿಕೊಂಡ ಆಡಿಯೋ ವೈರಲ್ ಆಗುತ್ತಿದೆ.

See also  ಶಬರಿಮಲೆ ದೇಗುಲದ ಸ್ಕೈ ವಾಕ್ ಮೇಲಿಂದ ಜಿಗಿದು ಅಯ್ಯಪ್ಪ ಮಾಲಾಧಾರಿ ಆತ್ಮಹತ್ಯೆ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget