ಕ್ರೀಡೆ/ಸಿನಿಮಾಬೆಂಗಳೂರುವಿಡಿಯೋವೈರಲ್ ನ್ಯೂಸ್ಸಿನಿಮಾ

ಹೀರೋಯಿನ್ ಆಗಿ ನಟಿಸಲಿದ್ದಾರೆ ಬೆಂಗಳೂರಿನ ಖ್ಯಾತ ಯೂಟ್ಯೂಬರ್..! ನಿಹಾರಿಕಾ ನಟಿಸುತ್ತಿರುವ ಸಿನಿಮಾದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

247

ನ್ಯೂಸ್ ನಾಟೌಟ್: ಬೆಂಗಳೂರು ಮೂಲದ ಖ್ಯಾತ ಯೂಟ್ಯೂಬರ್ ನಿಹಾರಿಕಾ ಎನ್.ಎಂ ವಿಭಿನ್ನ ಕಂಟೆಂಟ್‌ಗಳ ಮೂಲಕ ಹಲವು ಹೀರೋಗಳ ಜೊತೆಯೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಗಳನ್ನು ಮಾಡಿ ಖ್ಯಾತಿಗಳಿಸಿದ್ದರು. ಇದೀಗ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಎಂಟ್ರಿ ಕೊಡಲು ನಿಹಾರಿಕಾ ರೆಡಿ ತಯಾರಾಗಿದ್ದಾರೆ ಎನ್ನಲಾಗಿದೆ.

ನಿಹಾರಿಕಾ ಈಗ ತಮಿಳು ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ನಿಹಾರಿಕಾ ನಾಯಕಿಯಾಗಿ ನಟಿಸಲಿರುವ ಸಿನಿಮಾವನ್ನು ದಕ್ಷಿಣದ ಪ್ರಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ನಿರ್ಮಾಣ ಮಾಡುತ್ತಿದೆ. ಅಥರ್ವ ಈ ಚಿತ್ರದ ನಾಯಕನಾಗಿದ್ದು, ಆಕಾಶ್ ಭಾಸ್ಕರನ್ ಈ ಚಿತ್ರವನ್ನ ನಿರ್ದೇಶಿಸಲಿದ್ದಾರೆ ಎಂದು ವರದಿ ತಿಳಿಸಿದೆ.

ಇನ್ನೂ ಹೆಸರಿಡದ ಈ ಚಿತ್ರ ಪಕ್ಕಾ ಹಾಸ್ಯ ಪ್ರಧಾನ ಸಿನಿಮಾವಾಗಿದೆ. ರೊಮ್ಯಾನ್ಸ್ ಜೊತೆಗೆ ಕಾಮಿಡಿ ಇರುವ ಚಿತ್ರವಾಗಿದೆ ಎಂದು ವರದಿ ತಿಳಿಸಿದೆ. ನಿಹಾರಿಕಾ ಬೇಡಿಕೆ ಎಷ್ಟಿದೆ ಎಂದರೆ, ನ್ಯಾಷನಲ್ ಸ್ಟಾರ್ ಯಶ್ ‘ಕೆಜಿಎಫ್ 2’ ಚಿತ್ರದ ಬಿಡುಗಡೆ ಸಮಯದಲ್ಲಿ, ನಿಹಾರಿಕಾ ಅವರನ್ನ ಚಿತ್ರದ ಪ್ರಚಾರಕ್ಕೆ ಬಳಸಿಕೊಂಡಿದ್ದರು.

Click 👇

https://newsnotout.com/2024/05/dysp-cyber-case-madikeri-bank-account
https://newsnotout.com/2024/05/bengaluru-13-year-old-sister-pregnent-by-brother
https://newsnotout.com/2024/05/harish-poonja-by-vijayendra-and-incident-in-mla-house
See also  ಈ ಎತ್ತು ದಾಖಲೆಯ ಮೊತ್ತಕ್ಕೆ ಮಾರಾಟ..! ಆರತಿ ಬೆಳಗಿ, ಪೂಜೆ ಸಲ್ಲಿಸಿ ಬೀಳ್ಕೊಟ್ಟ ಮನೆಯವರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget