ನ್ಯೂಸ್ ನಾಟೌಟ್: ಯೂಟ್ಯೂಬ್ (YouTube)ನಂತಹ ಸಾಮಾಜಿಕ ಜಾಲತಾಣಗಳು ಮತ್ತು ವಿಡಿಯೋ ವೇದಿಕೆಗಳು ಅನೇಕ ವ್ಯಕ್ತಿಗಳಿಗೆ ಆದಾಯದ ಮೂಲಗಳಾಗಿವೆ. ಅಂತಹ ಒಂದು ಗಮನಾರ್ಹವಾದ ಯಶಸ್ಸಿನ ಕಥೆ ಇಲ್ಲಿದೆ. ಡಿಸೆಂಬರ್ 19, 2011 ರಂದು ಜನಿಸಿದ ಶ್ಫಾ, ಸರಿಸುಮಾರು 11 ವರ್ಷ ವಯಸ್ಸಿನ ಯೂಟ್ಯೂಬರ್ ಆಗಿದ್ದಾರೆ ಮತ್ತು ಅತ್ಯಧಿಕ ಆದಾಯ ಗಳಿಸುತ್ತಿದ್ದಾರೆ.
ಈ 11 ವರ್ಷದ ಬಾಲಕಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಇರುವ ಹಲವಾರು ವಿಡಿಯೋಗಳು ಜನಪ್ರಿಯವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಶ್ಫಾ ವೀಡಿಯೊಗಳು ಅರೇಬಿಕ್ ಭಾಷೆಯಲ್ಲಿ ಇರುತ್ತದೆ ಮತ್ತು ಮಕ್ಕಳ ವಿವಿಧ ಬಗೆಯ ಮನೋರಂಜನಾ ವಿಡಿಯೋಗಳಾಗಿವೆ.ಶ್ಫಾ ಳ ಯೂಟ್ಯೂಬ್ ಚಾನೆಲ್ ಅನ್ನು ಆಕೆಯ ತಾಯಿ ನಿರ್ವಹಣೆ ಮಾಡುತ್ತಿದ್ದು, ಅದೀಗ ಒಂದು ಉದ್ಯಮವಾಗಿಯೇ ಬದಲಾವಣೆಯಾಗಿದೆ. 2015ರ ಮಾರ್ಚ್ 29ರಿಂದ ಈವರೆಗೂ ಶ್ಫಾ ಅತೀ ಜನಪ್ರಿಯ ಯೂಟ್ಯೂಬರ್ ಎಂದು ಗುರುತಿಸಿಕೊಂಡಿದ್ದಾಳೆ.
ಸರಿಸುಮಾರು 40 ಮಿಲಿಯನ್ ಚಂದಾದಾರರು ಶ್ಫಾ ಯೂಟ್ಯೂಬ್ ಚಾನೆಲ್‌ನಲ್ಲಿ ಇದ್ದಾರೆ. ಶ್ಫಾ ಯೂಟ್ಯೂಬ್ ಮೂಲಕವೇ ಅಧಿಕ ಗಳಿಕೆಯನ್ನು ಪಡೆಯುತ್ತಿದ್ದು, ಚಾನಲ್‌ನ ವೀಡಿಯೊಗಳು 22 ಶತಕೋಟಿ ವೀಕ್ಷಣೆಗಳನ್ನು ಪಡೆದಿದೆ.ಇದರಿಂದಾಗಿ ಗಮನಾರ್ಹ ಆದಾಯವು ಪಡೆಯುತ್ತಿದ್ದು, ಯೂಟ್ಯೂಬ್ ಡೇಟಾ ವಿಶ್ಲೇಷಣೆ ಮತ್ತು ಎಬಿಪಿಲೈವ್ ವರದಿಯ ಪ್ರಕಾರ ಶ್ಫಾ ಪ್ರತಿ 1000 ವೀವ್ಸ್ ಗಳಿಗೆ 1.21 ಡಾಲರ್ ಗಳಿಸುತ್ತಾರೆ. ಇನ್ನು ಇತ್ತೀಚಿನ ವರದಿಯ ಪ್ರಕಾರ, ಶ್ಫಾ ಇತ್ತೀಚಿನ ದಿನಗಳಲ್ಲಿ ಸುಮಾರು ಭಾರತೀಯ ರೂಪಾಯಿಯಲ್ಲಿ ನೋಡಿದಾಗ ಪ್ರತಿ 1000 ವೀವ್ಸ್‌ಗೆ 100 ರೂಪಾಯಿ ಪಡೆಯುತ್ತಾರೆ. ಮೇ 2023 ರಲ್ಲಿ ಶ್ಫಾ ಯೂಟ್ಯೂಬ್‌ನಿಂದ 200,000 ಡಾಲರ್ ಗಳಿಸಿದ್ದಾರೆ.
ಇನ್ನು ಹಲವಾರು ಬಾರಿ ಶ್ಫಾ ಆದಾಯವು 300,000 ಡಾಲರ್ ಮೀರಿದೆ. ಕಳೆದ ಏಳು ದಿನಗಳಲ್ಲಿ, ಶ್ಫಾ 77.4 ಸಾವಿರ ಡಾಲರ್ ಅನ್ನು ಪಡೆದಿದ್ದಾರೆ. ಆಕೆಯ ಗಳಿಕೆಯು ಕಳೆದ 30 ದಿನಗಳಲ್ಲಿ 1.27 ಲಕ್ಷ ಡಾಲರ್ ಆಗಿದೆ. ಕಳೆದ 90 ದಿನಗಳಲ್ಲಿ 6.76 ಲಕ್ಷ ಡಾಲರ್ ಆಗಿದೆ.ಎಂಟು ವರ್ಷಗಳ ಅವಧಿಯಲ್ಲಿ 984 ವಿಡಿಯೋಗಳನ್ನು ಶ್ಫಾ ಅಪ್‌ಲೋಡ್ ಮಾಡಿದ್ದಾರೆ. ಈ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಶ್ಫಾಳ ಒಟ್ಟು ಗಳಿಕೆಯು ಬಿಲಿಯನ್ ಡಾಲರ್ ಮಾರ್ಕ್ ಅನ್ನು ತಲುಪಿದೆ ಎಂದು ವರದಿ ತಿಳಿಸಿದೆ. ಪ್ರಸ್ತುತ, ಶ್ಫಾ ಅಂದಾಜು ನಿವ್ವಳ ಮೌಲ್ಯವು ಸರಿಸುಮಾರು 50 ಮಿಲಿಯನ್ ಡಾಲರ್ ಆಗಿದೆ. ಭಾರತೀಯ ರೂಪಾಯಿಯಲ್ಲಿ ನಾವು ನೋಡಿದಾಗ 410 ಕೋಟಿ ರೂಪಾಯಿ ಆಗಿದೆ. ಯೂಟ್ಯೂಬ್‌ನಲ್ಲಿ ಶ್ಫಾ ಯಶಸ್ಸಿನ ಕಥೆಯು ಸ್ಪೂರ್ತಿದಾಯಕವಾಗಿದೆ.