Latestಕ್ರೈಂವೈರಲ್ ನ್ಯೂಸ್

ಯೂಟ್ಯೂಬ್‌ ನೋಡಿ ಹೊಟ್ಟೆ ಆಪರೇಷನ್‌ ಮಾಡಿಕೊಂಡ ವ್ಯಕ್ತಿ ಬದುಕಿದ್ದೇ ಪವಾಡ..! ಆತನ ಕಿರುಚಾಟ ಕೇಳಿ ಓಡಿ ಬಂದ ಜನ..!

669

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿ ವಾಸಿಸುವ 32 ವರ್ಷದ ವ್ಯಕ್ತಿಯೊಬ್ಬ ತನ್ನ ಹೊಟ್ಟೆ ನೋವಿನಿಂದ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಯೂಟ್ಯೂಬ್‌ ನಲ್ಲಿ ಶಸ್ತ್ರಚಿಕಿತ್ಸೆಯ ವಿಡಿಯೋಗಳನ್ನು ನೋಡಿ, ತನಗೆ ತಾನೇ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭದಲ್ಲಿ ಆತ ತನ್ನ ಹೊಟ್ಟೆಯನ್ನು ಕತ್ತರಿಸಲು ಹೋಗಿ ಆಪತ್ತಿಗೆ ಸಿಲುಕಿದ್ದಾನೆ. ಆ ನಂತರ ತೀವ್ರ ನೋವು ಮತ್ತು ರಕ್ತಸ್ರಾವದಿಂದ ಬಳಲಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ರಾಜಾ ಬಾಬು ಎಂಬ ವ್ಯಕ್ತಿ ಸುನ್‌ ರಾಖ್ ಗ್ರಾಮದ ನಿವಾಸಿಯಾಗಿದ್ದು, ಕಳೆದ ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಅವನು ಈ ಹಿಂದೆ 18 ವರ್ಷಗಳ ಹಿಂದೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನು. ಆದರೆ, ಇತ್ತೀಚೆಗೆ ಮತ್ತೆ ಆರಂಭವಾದ ನೋವಿಗೆ ವೈದ್ಯರ ಬಳಿ ಚಿಕಿತ್ಸೆ ಪಡೆದರೂ ಪರಿಹಾರ ಸಿಗಲಿಲ್ಲ. ಇದರಿಂದ ಕೊನೆಗೆ ತಾನೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಿರ್ಧರಿಸಿ, ಯೂಟ್ಯೂಬ್‌ ನೋಡಿ ಆಪರೇಷನ್‌ ಮಾಡಲು ಮುಂದಾಗಿದ್ದಾನೆ.

ರಾಜಾ ಬಾಬು ಎಂಬಾತ ಯೂಟ್ಯೂಬ್‌ ನಲ್ಲಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ವಿಡಿಯೋಗಳನ್ನು ವೀಕ್ಷಿಸಿದ ನಂತರ, ಮಾರುಕಟ್ಟೆಯಿಂದ ಶಸ್ತ್ರಚಿಕಿತ್ಸೆಗೆ ಬೇಕಾದ ಸಾಮಗ್ರಿಗಳಾದ ಬ್ಲೇಡ್, ಸೂಜಿ, ಸ್ಟಿಚ್‌ ಹಾಕುವ ದಾರ ಮತ್ತು ನೋವು ನಿವಾರಕ ಇಂಜೆಕ್ಷನ್‌ಗಳನ್ನು ಖರೀದಿಸಿದನು. ಬುಧವಾರ ಬೆಳಿಗ್ಗೆ ತನ್ನ ಮನೆಯ ಕೊಠಡಿಯೊಳಗೆ ಬೀಗ ಹಾಕಿಕೊಂಡು, ಮೊದಲು ತನಗೆ ತಾನೇ ನೋವು ನಿವಾರಕ ಇಂಜೆಕ್ಷನ್ ಚುಚ್ಚಿಕೊಂಡನು. ನಂತರ ಬ್ಲೇಡ್ ಬಳಸಿ ತನ್ನ ಹೊಟ್ಟೆಯ ಕೆಳಭಾಗದಲ್ಲಿ ಸುಮಾರು 7 ಇಂಚು ಉದ್ದದ ಕತ್ತರಿ ಹಾಕಿದನು. ತನ್ನ ನೋವಿನ ಮೂಲವನ್ನು ಹುಡುಕಲು ಪ್ರಯತ್ನಿಸಿದ ಅವನು, ಯಾವುದೇ ಪರಿಹಾರ ಕಂಡುಕೊಳ್ಳದೆ, ನಂತರ ತಾನೇ 11 ಹೊಲಿಗೆ ಹಾಕಿಕೊಂಡಿದ್ದಾನೆ.

ಆರಂಭದಲ್ಲಿ ಇಂಜೆಕ್ಷನ್‌ ನಿಂದ ನೋವು ಕಡಿಮೆಯಾಗಿತ್ತು. ಆದರೆ, ಔಷಧದ ಪರಿಣಾಮ ಕಡಿಮೆಯಾದಾಗ ತೀವ್ರ ನೋವು ಆರಂಭವಾಗಿ, ಅವನು ಕಿರುಚಾಡತೊಡಗಿದನು. ಅವನ ಕೂಗು ಕೇಳಿ ಕುಟುಂಬದವರು ಆತಂಕಗೊಂಡು ತಕ್ಷಣ ಅವನನ್ನು ವೃಂದಾವನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು.

ಅಲ್ಲಿ ವೈದ್ಯರು ಅವನ ಸ್ಥಿತಿಯ ಗಂಭೀರತೆಯನ್ನು ಗಮನಿಸಿ ಪ್ರಥಮ ಚಿಕಿತ್ಸೆ ನೀಡಿದರು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವನನ್ನು ಆಗ್ರಾದ ಎಸ್‌ಎನ್ ಮೆಡಿಕಲ್ ಕಾಲೇಜ್‌ಗೆ ಕಳುಹಿಸಲಾಯಿತು.

ಜಿಲ್ಲಾ ಆಸ್ಪತ್ರೆಯ ಹಿರಿಯ ವೈದ್ಯರು ಮಾತನಾಡಿ, “ರಾಜಾ ಬಾಬು ತನ್ನ ಹೊಟ್ಟೆಗೆ 7 ಇಂಚು ಉದ್ದದ ಕತ್ತರಿ ಹಾಕಿದ್ದಾನೆ ಮತ್ತು ತಾನೇ 11 ಹೊಲಿಗೆಗಳನ್ನು ಹಾಕಿಕೊಂಡಿದ್ದಾನೆ. ಆದರೆ, ಆತ ಹೊಲಿಗೆಗಳನ್ನ ಸರಿಯಾಗಿ ಹಾಕಲಾಗಿರಲಿಲ್ಲ. ಸದ್ಯ ಸರಿಯಾದ ಚಿಕಿತ್ಸೆ ನೀಡಿ, ಮುಂದಿನ ಚಿಕಿತ್ಸೆಗಾಗಿ ಆಗ್ರಾಕ್ಕೆ ಕಳುಹಿಸಿದ್ದೇವೆ,” ಎಂದು ತಿಳಿಸಿದರು.

ಇದನ್ನೂ ಓದಿಹುಲ್ಲಿನ ಗುಡಿಸಲಿಗೆ ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಒಳಗೆ ಓಡಿ ಪುಸ್ತಕಗಳನ್ನು ಹೊರತಂದ ಪುಟ್ಟ ಬಾಲಕಿ..! ವಿಡಿಯೋ ಕಂಡು ಎಲ್ಲರ ಮೆಚ್ಚುಗೆ

  Ad Widget   Ad Widget   Ad Widget   Ad Widget   Ad Widget   Ad Widget   Ad Widget