Uncategorized

ಯೂಟ್ಯೂಬ್ ನೋಡುತ್ತಾ ಪತ್ನಿಗೆ ಹೆರಿಗೆ ಮಾಡಿಸಿದ ಪತಿ,ಮಹಿಳೆಗೆ ತೀವ್ರ ರಕ್ತಸ್ರಾವ:ಪತಿ-ಪತ್ನಿ ಇಬ್ಬರೂ ಪದವೀಧರರಾದರೂ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲಿಲ್ಲವೇಕೆ?

ನ್ಯೂಸ್ ನಾಟೌಟ್:ಹೆರಿಗೆ ಅನ್ನೋದು ತುಂಬಾ ಸೂಕ್ಷ್ಮವಾದ ವಿಚಾರ.ಕೆಲವೊಂದು ಸಲ ಡಾಕ್ಟರ್‌ಗಳಿಗೂ ಇದು ಸವಾಲಾಗಿರುತ್ತದೆ.ಆದರೆ ಇಲ್ಲೊಬ್ಬ ಪತಿ ಮಹಾಶಯನೊಬ್ಬ ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಿ ಪತ್ನಿಯ ಜೀವವನ್ನೇ ಮುಗಿಸಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.

ಲೋಕನಾಯಕಿ ಆತನ ಪತ್ನಿ.ಲೋಕನಾಯಕಿ  ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಈತನೇ ಹೆರಿಗೆ ಮಾಡಿಸಲು ಮುಂದಾಗಿದ್ದಾನೆ.ಮೊದಲೇ ಯುಟ್ಯೂಬ್‌ನಲ್ಲಿ ಮನೆಯಲ್ಲೇ ಹೇಗೆ ನಾರ್ಮಲ್‌ ಡೆಲಿವರಿ ಮಾಡಿಸಬೇಕು ಎಂದು ಕೆಲವು ವಿಡಿಯೋಗಳನ್ನು ನೋಡಿದ್ದ ಆಕೆಯ ಪತಿ ಹೆರಿಗೆ ಮಾಡಿಸಲು ಮುಂದಾಗಿದ್ದಾನೆ.

ಮಾದೇಶ ಆಸ್ಪತ್ರೆಗೆ ಕರೆದೊಯ್ಯದೆ ಮನೆಯಲ್ಲಿ ತಾನೇ ಹೆರಿಗೆ ಮಾಡಲು ಯತ್ನಿಸಿದ್ದಾನೆ.ಮಗು ಸುರಕ್ಷಿತವಾಗಿ ಜನಿಸಿದರೂ ಹೊಕ್ಕುಳ ಬಳ್ಳಿ ಸರಿಯಾಗಿ ಕತ್ತರಿಸದ ಹಿನ್ನೆಲೆ ತೀವ್ರ ರಕ್ತಸ್ರಾವ ಉಂಟಾಗಿದೆ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಆ ವೇಳೆಗಾಗಲೇ ಮಹಿಳೆ ಅಂತ್ಯ ಕಂಡಿದ್ದಾಳೆ.

ಪತಿ-ಪತ್ನಿ ಇಬ್ಬರೂ ಪದವೀಧರರಾದರೂ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಸಿದ್ಧರಿರಲಿಲ್ಲ ಎಂದು ಗ್ರಾಮದ ಆರೋಗ್ಯ ಸಿಬ್ಬಂದಿ ತಿಳಿಸಿದ್ದಾರೆ.ಈ ಬಗ್ಗೆ ಪತಿ ಮಾದೇಶ್‌ ವಿರುದ್ಧ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯೆ ರಾಧಿಕಾ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

https://www.youtube.com/watch?v=jSafzs4BB_c

Related posts

ನಿದ್ರೆಗೆಟ್ಟು ರಾತ್ರಿ ಇಡೀ ಸೊಳ್ಳೆ ಕಚ್ಚಿಸಿಕೊಳ್ಳುವ ಪೊಲೀಸರಿಗೆ ಮಾತ್ರ ಏನಿಲ್ಲ..! ಬೆಳಗ್ಗಿನಿಂದ ಸಂಜೆ ತನಕ ದುಡಿಯುವ ವಿಎ, ಪಿಡಿಓಗಳಿಂದ ನಾಳೆ ಪ್ರತಿಭಟನೆ, ಏನಿದು ವಿಚಾರ..?

ಹಿಜಾಬ್ ಕುರಿತ ತೀರ್ಪು ಪ್ರಕಟಕ್ಕೆ ಕ್ಷಣಗಣನೆ

‘ಉತ್ತರಕಾಂಡ’ ಸಿನಿಮಾದಿಂದ ರಮ್ಯಾ ಹೊರಬಂದಿದ್ದೇಕೆ? ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆಯೇ?