ಕರಾವಳಿಕ್ರೈಂ

ಬಂಟ್ವಾಳ: ಮೂರನೇ ಮಹಡಿಯಿಂದ ಬಿದ್ದು ಯುವಕ ಸಾವು

304

ನ್ಯೂಸ್‌ ನಾಟೌಟ್‌: ಡಿಶ್‌ ರಿಪೇರಿ ಮಾಡಲೆಂದು ವಸತಿ ಸಮುಚ್ಚಯದ ಮೂರನೇ ಮಹಡಿಗೆ ಏರಿದ್ದ ಯುವಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಬಿಸಿ ರೋಡ್ – ಕೈಕಂಬದಲ್ಲಿ ಸಂಭವಿಸಿದೆ.  

ಮೃತ ಯುವಕನನ್ನು ಬಿಸಿ ರೋಡ್ ಬಳಿಯ ಆಚಾರಿಪಲ್ಕೆ ನಿವಾಸಿ ಯತೀಶ್(32) ಎಂದು ಗುರುತಿಸಲಾಗಿದೆ. ಯತೀಶ್ ಶುಕ್ರವಾರ ಮಧ್ಯಾಹ್ನ ಕೈಕಂಬದ ಅಪಾರ್ಟ್‌ಮೆಂಟ್ ಮೂರನೇ ಮಹಡಿಯಲ್ಲಿ ಡಿಶ್ ರಿಪೇರಿ ಮಾಡುತ್ತಿದ್ದರು. ಈ ಸಂದರ್ಭ ಆಯತಪ್ಪಿ ಕಟ್ಟಡದ ಹೊರಗೆ ಇದ್ದ ಬಾವಿಯ ಮೇಲಿನ ಕಬ್ಬಿಣದ ರಕ್ಷಣಾ ಬೇಲಿಯ ಮೇಲೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನುಆಂಬುಲೆನ್ಸ್‌ ಮೂಲಕ ಮಂಗಳೂರಿನ ಕಂಕನಾಡಿಯ ಫಾದರ್‌ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆಗೆ ಗಂಭೀರ ಗಾಯವಾಗಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

See also  ಅತ್ಯಾಚಾರ ದೃಶ್ಯದಲ್ಲಿ ನಟಿಸಿದ ಬಳಿಕ ನನ್ನ ದೇಹ ನಡುಗುತ್ತಿತ್ತು, ವಾಂತಿಯಾಗಿತ್ತು ಎಂದ ನಟಿ..! ಯಾವುದು ಆ ಸಿನಿಮಾ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget