ಕ್ರೈಂರಾಜಕೀಯವೈರಲ್ ನ್ಯೂಸ್

ಯೂತ್ ಕಾಂಗ್ರೆಸ್ ಮುಖಂಡ ನಲಪಾಡ್ ಕಡೆಯವರು ಎಂದು ಹೇಳಿ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿ ಕಿರುಕುಳ..! 9 ಮಂದಿ ವಿರುದ್ಧ ಎಫ್​.ಐ.ಆರ್..! ಯುವಕ ನೀಡಿದ ದೂರಿನಲ್ಲೇನಿದೆ..?

258

ನ್ಯೂಸ್ ನಾಟೌಟ್: ನಲಪಾಡ್ ಯೂತ್ ಕಾಂಗ್ರೆಸ್ (Youth Congress) ಹೆಸರು ಹೇಳಿಕೊಂಡು ವಿದ್ಯಾರ್ಥಿಯನ್ನು ಅಪಹರಿಸಿ ಕಿರಿಕುಳ ನೀಡಿರುವ ಆರೋಪ ಕೇಳಿ ಬಂದಿದ್ದು ಕೆಂಗೇರಿ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.
ಕೆಲ ಕಿಡಿಗೇಡಿಗಳು ನಾವು ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಕಡೆಯ ಹುಡುಗರು ಎಂದು ಹೇಳಿಕೊಂಡು ವಿದ್ಯಾರ್ಥಿಯೊಬ್ಬನನ್ನು ಕಿಡ್ನಾಪ್ ಮಾಡಿ, ಆತನ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ. ಸದ್ಯ ಈಗ ಈ ಕುರಿತು ವಿದ್ಯಾರ್ಥಿ ದೂರು ನೀಡಿದ್ದಾನೆ.

ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿರುವ ಜೀವನ್‌ ಜೈನ್‌ ಎಂಬ ವಿದ್ಯಾರ್ಥಿ ಕಳೆದ ವರ್ಷ ಆಯುಷ್ ಶ್ರೀನಿವಾಸ್ ಎಂಬಾತನಿಂದ ಮೂರು ಲಕ್ಷ ಸಾಲ ಪಡೆದಿದ್ದ. ಇವೆಂಟ್ ಒಂದರ ವಿಚಾರವಾಗಿ ಹಣ ಪಡೆದಿದ್ದ. ಆದರೆ ಕಾರಣಾಂತರಗಳಿಂದಾಗಿ ಜೀವನ್​ಗೆ ಹೇಳಿದ ಸಮಯಕ್ಕೆ ಹಣ ನೀಡಲು ಆಗಿರಲಿಲ್ಲ. ತಡವಾಗಿ ಸಾಲ ತೀರಿಸಿದ್ದ. ಆದರೆ ಕಿಡಿಗೇಡಿಗಳು ಸಾಲ ತೀರಿಸಿದರೂ ಆತನನ್ನು ಬಿಡದೆ ಮತ್ತಷ್ಟು ಹಣಕ್ಕಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜೀವನ್ ​ನನ್ನು ಬಲವಂತವಾಗಿ ಬೆಟ್ಟಿಂಗ್ ಬಲೆಗೆ ಬೀಳಿಸಿದ್ದಾರೆ ಎಂಬ ಆರೋಪ‌ ಕೇಳಿ ಬಂದಿದೆ. ಜೊತೆಗೆ ಕಿಡ್ನ್ಯಾಪ್​ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಬೆತ್ತಲೆಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಬೆತ್ತಲೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆ ಬಳಿಕ 6 ಲಕ್ಷಕ್ಕೆ ಡಿಮ್ಯಾಂಡ್ ಮಾಡಿ ಹಣ ಪಡೆದಿದ್ದಾರೆ. ಅದಾದ ಬಳಿಕವೂ ಮನೆಗೆ ಬಂದು ಸಾಲ ಪಡೆಯುವಂತೆ ಬೆದರಿಕೆ ಹಾಕಿದ್ದಾರೆ. ಸಾಲ ಕೊಟ್ಟು ಹೆಚ್ಚು ಬಡ್ಡಿ ಹಾಕಿ ಕಿರುಕುಳ ನೀಡಿದ್ದಾರೆ ಎಂದು ಯುವಕ ಜೀವನ್ ದೂರಿನಲ್ಲಿ ತಿಳಿಸಿದ್ದಾನೆ.

ದೂರಿನಲ್ಲಿ ಒಂಬತ್ತು ಜನರ ವಿರುದ್ಧ ಕಿಡ್ನಾಪ್ ಹಾಗೂ ಸುಲಿಗೆ ಮಾಡಿರೋ ಆರೋಪ ಮಾಡಿ ಯುವಕ ದೂರು ನೀಡಿದ್ದಾನೆ. ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

Click

https://newsnotout.com/2024/08/viral-video-village-west-bengal-elephant-kannada-news/
https://newsnotout.com/2024/08/indira-gandhi-mamatha-banarji-kannada-news-protest-insta-video/
https://newsnotout.com/2024/08/mangaluru-mooda-case-cm-siddaramayya-issue-bus-damage/
https://newsnotout.com/2024/08/press-meet-heart-attack-kannada-news-viral-news-kuruba/
https://newsnotout.com/2024/08/benngaluru-issue-dance-choreographer-arrest-kannada-news/
See also  ಚೈನ್, ಬ್ರಾಂಡೆಡ್ ಟಿ-ಶರ್ಟ್, ಸನ್ ಗ್ಲಾಸ್, ಕೈ ಯಲ್ಲಿ ಕಡಗ ಧರಿಸಿ ಬಳ್ಳಾರಿಗೆ ಬಂದಿದ್ದ ದಾಸನಿಗೆ ಶಾಕ್..! ದರ್ಶನ್ ಗ್ಯಾಂಗ್ ನ ಇತರ ಆರೋಪಿಗಳು ಧಾರವಾಡ ಮತ್ತು ಶಿವಮೊಗ್ಗ ಜೈಲಿಗೆ ಸ್ಥಳಾಂತರ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget