ಕ್ರೈಂರಾಜ್ಯ

ಜಲಪಾತ ವೀಕ್ಷಣೆಗೆ ತೆರಳಿದ್ದಾತ ನಾಪತ್ತೆ..! ಜೋಗದ ಗುಂಡಿ ನೋಡಲು ಹೋದಾತನಿಗೆ ಆಗಿದ್ದೇನು..?

ನ್ಯೂಸ್‌ ನಾಟೌಟ್‌: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಹಲವಾರು ಸಾವು ನೋವುಗಳು ಸಂಭವಿಸಿವೆ. ಮಲೆನಾಡಿನಲ್ಲಿ ವರ್ಷಧಾರೆ ಮುಂದುವರಿದಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಶಿವಮೊಗ್ಗದ ವಿಶ್ವ ಪ್ರಸಿದ್ಧ ಜೋಗ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಜೋಗ ಜಲಪಾತ ವೀಕ್ಷಣೆಗೆಂದು ಆಗಮಿಸಿದ್ದ ಬೆಂಗಳೂರಿನಿಂದ ಯುವಕನೋರ್ವ ಜಲಪಾತದ ಬಳಿ ನಾಪತ್ತೆಯಾಗಿದ್ದಾನೆ.

ಮೂಲತಃ ಗದಗದ ಸದ್ಯ ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿರುವ ಆನಂದ್ (24) ಎಂಬಾತ ನಾಪತ್ತೆಯಾಗಿದ್ದಾನೆ. ಈತ ಜೋಗ ಜಲಪಾತ ವೀಕ್ಷಣೆಗೆ ಜುಲೈ 15ರಂದು ಆಗಮಿಸಿದ್ದ . ಯಾತ್ರಿ ನಿವಾಸದ ಸೀತಾಕಟ್ಟೆ ಬ್ರಿಡ್ಜ್ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿಗೆ ತೆರಳಿದ್ದಾನೆ ಬಳಿಕ ಆನಂದ್‌ ನಾಪತ್ತೆಯಾಗಿದ್ದು, ಕಳೆದ 6 ದಿನಗಳಿಂದ ಆತಗಾಗಿ ಕಾರ್ಗಲ್ ಠಾಣೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related posts

ಆಘಾತಕಾರಿ ಮಾಹಿತಿ ಹಂಚಿಕೊಂಡ ಸೀಮಾ ಹೈದರ್‌ ಮಾಜಿ ಗಂಡ..! ಪ್ರೇಮವಲ್ಲ ಆಕೆಗೆ ಪಾಕ್ ಸೇನೆಯ ಜೊತೆ ನಂಟಿದೆ ಎಂದದ್ದೇಕೆ ಆತ..?

ಕಲ್ಲುಗುಂಡಿ: ಅನಾರೋಗ್ಯದಿಂದ ಜೀಪು ಚಾಲಕ ಸಾವು

ನಟ ದರ್ಶನ್ ನ ಖೈದಿ ನಂಬರ್ 6106 ಈಗ ಟ್ರೆಂಡಿಂಗ್..! ಬೈಕ್ ಕಾರು ಆಟೋ ಮೇಲೆಲ್ಲಾ ಸ್ಟಿಕ್ಕರ್..! ಜೈಲಿನಿಂದಲೇ ದಾಸ ಅಭಿಮಾನಿಗಳಿಗೆ ಬರೆದ ಪತ್ರದಲ್ಲೇನಿದೆ..?