ಕರಾವಳಿ

ಮದ್ಯ ಸೇವಿಸಿ ಕೊಳವೊಂದಕ್ಕೆ ಸ್ನಾನಕ್ಕಿಳಿದ ವ್ಯಕ್ತಿ ದುರಂತ ಅಂತ್ಯ,ಏನಿದು ಘಟನೆ?

291

ನ್ಯೂಸ್ ನಾಟೌಟ್ : ಸ್ನೇಹಿತರ ಜತೆ ಸ್ನಾನಕ್ಕೆಂದು ತೆರಳಿ ಕೊಳವೊಂದಕ್ಕೆ ಇಳಿದ ವ್ಯಕ್ತಿ ನೀರಿನಲ್ಲಿ ಮುಳುಗಿರುವ ಘಟನೆ ನಡೆದಿದೆ. ಕರ್ನಾಟಕ- ಕೇರಳ ಗಡಿ ಭಾಗದ ಕೆಳಗಿನ ತಲಪಾಡಿ ಬಳಿ ಈ ಘಟನೆ ಸಂಭವಿಸಿದೆ.ಕೇರಳದ ಹೊಸಂಗಡಿ ದುರ್ಗಿಪಳ್ಳ ನಿವಾಸಿ ಹರಿಪ್ರಸಾದ್ ಆಚಾರ್ಯ (36) ಅವರು ಕೊನೆಯುಸಿರೆಳೆದಿದ್ದಾರೆ.

ತಲಪಾಡಿಯ ನಿಸರ್ಗ ಬಾರ್ ನಲ್ಲಿ ಬೆಳಗ್ಗೆ ಮದ್ಯ ಸೇವಿಸಿದ್ದ ಹರಿಪ್ರಸಾದ್ ಗೆಳೆಯರಾದ ಯುವರಾಜ್ ಯಾನೆ ಮುನ್ನ ಲೋಹಿತ್, ನವೀನ್ ದೇವಾಡಿಗ, ನಿತೇಶ್ ಉಚ್ಚಿಲ್ ಅವರೊಂದಿಗೆ ಸಮೀಪದ ಖಾಸಗಿ ಲೇಔಟಿನ ಕೊಳವೊಂದರಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ, ಈಜು ತಿಳಿಯದ ಹರಿಪ್ರಸಾದ್ ನೀರಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದವರು ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ.ಹರಿಪ್ರಸಾದ್ ಅವರು ವೆಲ್ಡಿಂಗ್ ವೃತ್ತಿ ನಡೆಸುತ್ತಿದ್ದರು. ಇವರು ಅವಿವಾಹಿತರಾಗಿದ್ದು, ತಾಯಿ, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಹರಿಪ್ರಸಾದ್ ತಮ್ಮ ಅರುಣ್ ಕುಮಾರ್ ಬಂದಿದ್ದು, ಉಳ್ಳಾಲ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.

See also  ಉಡುಪಿಯ ಖಾಸಗಿ ಕಾಲೇಜೊಂದರ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ..!ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಅಮಾನತು‌!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget