ಕರಾವಳಿಪುತ್ತೂರು

ಪುತ್ತೂರು : ಫಲಿಸಲಿಲ್ಲ ಚಿಕಿತ್ಸೆ , ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಕೊನೆಯುಸಿರು

ನ್ಯೂಸ್‌ ನಾಟೌಟ್ : ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆ ಜ. ೨೪ ರಂದು ವರದಿಯಾಗಿದೆ.ಪುತ್ತೂರು ನೆಹರೂ ನಗರದ ದಿ.ಆನಂದ ನಾಯ್ಕ ಅವರ ಪುತ್ರಿ ಐಶ್ವರ್ಯ(೨೯) ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಇಂಜಿನಿಯರಿಂಗ್ ಪದವೀಧರೆಯಾಗಿದ್ದ ಈಕೆ ಲಿವರ್ ಸಮಸ್ಯೆಯಿಂದಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲಿವರ್ ಬದಲಾವಣೆಯಿಂದ ಮಾತ್ರ ಐಶ್ವರ್ಯಳ ಜೀವ ಉಳಿಸಲು ಸಾಧ್ಯ ಎಂದು ವೈದ್ಯರು ತಿಳಿಸಿದ್ದರು.

ಈ ನಿಟ್ಟಿನಲ್ಲಿ ಸಾರ್ವಜನಿಕ ಸಹಾಯ ಯಾಚಿಸಿ ಸಾಮಾಜಿಕ ಜಾಲತಾಣಗಳಲ್ಲೂ ಹಾಕಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಐಶ್ವರ್ಯ ಉಸಿರು ಚೆಲ್ಲಿದ್ದಾರೆ .ಮೃತರು ತಾಯಿ ವಿಮಲ, ತಂಗಿ ಅನುಷಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Related posts

ಅಪಾಯದಲ್ಲಿ ಕೈಪಡ್ಕ ಸೇತುವೆ

ಸೌಜನ್ಯಳಿಗೆ ನ್ಯಾಯ ಸಿಗಬೇಕೆಂದು ಸುಳ್ಯ, ಮಂಗಳೂರಿನಲ್ಲಿ ಬಜರಂಗದಳ, ವಿಹೆಚ್‌ಪಿ ಯಿಂದ ದೇವರಿಗೆ ಸಾಮೂಹಿಕ ಪ್ರಾರ್ಥನೆ

ಸಂಪಾಜೆ : ಶ್ರೀ ಪಂಚಲಿಂಗೇಶ್ವರ ಕಾಲಾವಧಿ ಜಾತ್ರೆ ಪ್ರಯುಕ್ತ ಹಸಿರುವಾಣಿ ಮೆರವಣಿಗೆ