ಕರಾವಳಿಕೊಡಗುಸುಳ್ಯ

‘ಸಾರಿ ಅಣ್ಣ’ ಬರೆದು ವಿದೇಶದಲ್ಲಿ ಉದ್ಯೋಗದಲ್ಲಿದ್ದ ಕಡಬದ ಯುವಕ ಆತ್ಮಹತ್ಯೆ

ನ್ಯೂಸ್ ನಾಟೌಟ್:ವಿದೇಶದಲ್ಲಿ ಉದ್ಯೋಗದಲ್ಲಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕನೋರ್ವ ವಿದೇಶದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿತ್ತು.ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ|ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತ ಸಂದೇಶ್‌ (32 ವರ್ಷ) ಆತ್ಮಹತ್ಯೆ ಮಾಡಿಕೊಂಡ ಯುವಕ.

ಇವರು ಕೊಲ್ಲಿ ರಾಷ್ಟ್ರದ ಓಮನ್‌ ದೇಶದ ಮಸ್ಕತ್‌ನಲ್ಲಿ ನೀರಿನ ಕಂಪನಿಯೊಂದರಲ್ಲಿ ಲೈನ್‌ ಸೇಲ್‌ ಉದ್ಯೋಗ ಮಾಡುತ್ತಿದ್ದರು. ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್‌ ಕೂಡಾ ಮಸ್ಕತ್‌ನಲ್ಲೇ ಉದ್ಯೋಗದಲ್ಲಿದ್ದು ಒಂದೇ ಕೊಠಡಿಯಲ್ಲಿ ವಾಸವಿದ್ದರೆಂದು ತಿಳಿದು ಬಂದಿದೆ.

ಮೇ 29 ರಂದು ಸಂದೇಶ್‌ ಎಂದಿಗಿಂತ ಬೇಗ ಕೆಲಸ ಮುಗಿಸಿ ತನ್ನವಾಸ್ತವ್ಯದ ಕೊಠಡಿಗೆ ಬಂದಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೆಲ ಹೊತ್ತಿನ ಬಳಿಕ ಚರಣ್‌ ಎಂಬುವವರು ಅಲ್ಲಿಗೆ ಬಂದಾಗ ಕೊಠಡಿ ಬಾಗಿಲು ಬಂದ್‌ ಆಗಿತ್ತು ಎನ್ನಲಾಗಿದೆ.

ಬಾಗಿಲು ಬಡಿದಾಗ ಒಳಗಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದಿದ್ದಾಗ ಚರಣ್‌ ಅವರು ಸಂದೇಶ್‌ ಸಹೋದರ ಸಂತೋಷ್‌ಗೆ ಕರೆ ಮಾಡಿ ಕೊಠಡಿ ಬಳಿ ಕರೆಸಿಕೊಂಡಿದ್ದಾರೆ. ಕೊಠಡಿಯ ಒಂದು ಕೀ ಸಂತೋಷ್‌ ಅವರಲ್ಲಿ ಇದ್ದುದರಿಂದ ಬಾಗಿಲು ತೆರೆದು ನೋಡುವಾಗ ಕೊಠಡಿಯ ಒಳಗಿನ ಫ್ಯಾನ್ ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂಸ್ಥೆಯಲ್ಲಿ ಉತ್ತಮ ವೇತನ ಹಾಗೂ ಯಾವುದೇ ಸಮಸ್ಯೆಯಿಲ್ಲದೇ ಉದ್ಯೋಗ ಇತ್ತು ಎನ್ನಲಾಗಿದೆ.ಆತ್ಮಹತ್ಯೆಗೂ ಮುನ್ನ ಸಾರಿ ಅಣ್ಣ ಎಂದು ಒಂದು ಲೈನ್‌ ನ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಕುಟುಂಬದವರಿಗೆ ಅಘಾತ ಉಂಟು ಮಾಡಿದೆ.

Related posts

ಮಡಿಕೇರಿ: ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ,ಕಣ್ಮನ ಸೆಳೆಯುತ್ತಿರುವ ಹೂಗಳ ರಾಶಿ

ಗೂನಡ್ಕ: ಅಲ್-ಬಿರ್‌ ಇಸ್ಲಾಮಿಕ್ ಪ್ರೀ ಸ್ಕೂಲ್‌ನ ನೂತನ ಕೊಠಡಿ ಉದ್ಘಾಟನೆ

ಮಡಿಕೇರಿ:ಮಗುವನ್ನು ತವರು ಮನೆಯಲ್ಲಿ ಬಿಟ್ಟು ಗಂಡನ ಮನೆಯಲ್ಲಿ ಗೃಹಿಣಿ ನೇಣಿಗೆ ಶರಣು,ಡೆತ್‌ ನೋಟ್‌ ಪತ್ತೆ..!