ಕ್ರೈಂವೈರಲ್ ನ್ಯೂಸ್

ಯುವ ನಿರ್ದೇಶಕ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಮೊಬೈಲ್, ಕ್ಯಾಮರಾಗಳನ್ನು ಕದ್ದು ಓಡಿದ ಜನ! ಆತನ ಸ್ನೇಹಿತರು ನೀಡಿದ ದೂರಿನಲ್ಲೇನಿದೆ?

270

ನ್ಯೂಸ್ ನಾಟೌಟ್ : ರಸ್ತೆ ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವ ಸಿನಿಮಾ ನಿರ್ದೇಶಕನೊಬ್ಬ ಒದ್ದಾಡಿ ಪ್ರಾಣ ಬಿಡುತ್ತಿರುವಾಗಲೇ ಸಹಾಯಕ್ಕೆ ಬಾರದ ಜನರ ನಡುವೆ ಒಬ್ಬ ಮೊಬೈಲ್ ಫೋನ್ ಕದ್ದು ಓಡಿದ ಘಟನೆ ದಕ್ಷಿಣ ದೆಹಲಿಯಲ್ಲಿ ಅ.28 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪಿಯೂಷ್ ಪಾಲ್(30) ಮೃತ ನಿರ್ದೇಶಕ ಎಂದು ಗುರುತಿಸಲಾಗಿದ್ದು, ಎಂಜಿನಿಯರಿಂಗ್ ಪದವೀಧರರಾಗಿದ್ದ ಪಿಯೂಷ್‌ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಕಾರಣ ಸಾಕ್ಷ್ಯಚಿತ್ರಗಳನ್ನು ಹಾಗೂ ಪ್ರೀಲ್ಯಾನ್ಸ್‌ ಪ್ರಾಜೆಕ್ಟ್‌ ಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ.

ಅ.28 ರ ರಾತ್ರಿ 9:45 ರ ಹೊತ್ತಿಗೆ ಪಿಯೂಷ್‌ ಪಂಚಶೀಲ ಪಾರ್ಕ್ ರಸ್ತೆಯಲ್ಲಿ ಶೂಟಿಂಗ್‌ ಮುಗಿಸಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ನಿರ್ದೇಶಕನ ಬೈಕ್‌ ಗೆ ಬಿಂಬದಿಯಿಂದ ರಭಸವಾಗಿ ಬಂದ ಬೈಕ್‌ ಸವಾರನೊಬ್ಬ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.

ಬೈಕ್‌ ಸ್ಕಿಡ್‌ ಆಗಿ ಪಿಯೂಷ್‌ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ತಲೆಗೆ ತೀವ್ರವಾದ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದು, ಒದ್ದಾಡುತ್ತಿದ್ದ ವೇಳೆ ಅಪಘಾತವಾದ ಸ್ಥಳದಲ್ಲಿ ಜನ ಸೇರಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಆದರೆ ಯಾರು ಕೂಡ ಗಾಯಾಳು ಪಿಯೂಷ್‌ ಅವರನ್ನು ಆಸ್ಪತ್ರೆಗೆ ಸಾಗಿಸದೇ ಬದಲಾಗಿ ಅಪಘಾತ ದೃಶ್ಯವನ್ನು ಮೊಬೈಲ್‌ ನಲ್ಲಿ ಸೆರೆ ಹಿಡಿಯಲು ಶುರು ಮಾಡಿದ್ದರು ಎಂದು ಸಿಸಿಟಿವಿ ದೃಶ್ಯಗಳ ಮೂಲಕ ಗೊತ್ತಾಗಿದೆ.

ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಪಂಕಜ್ ಮಿಸ್ತ್ರಿ ಎನ್ನುವವರು ಜನ ಸೇರಿದ್ದನ್ನು ನೋಡಿ, ಗಂಭೀರ ಸ್ಥಿತಿಯಲ್ಲಿದ್ದ ಪಿಯೂಷ್‌ ಅವರನ್ನು ಆಟೋವೊಂದರಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತವಾದ 30 ನಿಮಿಷದ ಬಳಿಕ ಪಿಯೂಷ್‌ ನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಈ ವೇಳೆ ತೀವ್ರ ರಕ್ತಸ್ರಾವವಾಗಿದ್ದ ಅವರ ಚಿಕಿತ್ಸೆ ಆ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆ ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಜನ ಪಿಯೂಷ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡುವ ಬದಲು, ಅವರ ಬಳಿಯಿದ್ದ ಮೊಬೈಲ್‌, ಪಾರ್ಸ್‌ ಹಾಗೂ ಗೋಪ್ರೋ ಕ್ಯಾಮೆರಾಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಪೊಲೀಸರ ಬಳಿ ಪಿಯೂಷ್‌ ಸ್ನೇಹಿತರು ದೂರು ನೀಡಿದ್ದಾರೆ.

See also  ಹಳಿ ತಪ್ಪಿದ ಎಕ್ಸ್‌ಪ್ರೆಸ್‌ ರೈಲು, 4 ಮಂದಿ ಸ್ಥಳದಲ್ಲೇ ಸಾವು..! ಹಲವರಿಗೆ ಗಾಯ, ರೈಲ್ವೆ ಸಹಾಯವಾಣಿ ಬಿಡುಗಡೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget