ಕರಾವಳಿರಾಜಕೀಯಸುಳ್ಯ

ಬಿ.ಸಿ.ರೋಡ್ ನಲ್ಲಿ ಯೋಗಿ ಆದಿತ್ಯನಾಥ್ ಅದ್ದೂರಿ ರೋಡ್ ಶೋ… ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ

ನ್ಯೂಸ್ ನಾಟೌಟ್ : ಚುನಾವಣಾ ಕಣ ರಂಗೇರುತ್ತಿದೆ. ಅಭ್ಯರ್ಥಿಗಳು ಬಿರುಸಿನ ಮತಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು,ಅಲ್ಲಲ್ಲಿ ಮತಬೇಟೆ ಕಾರ್ಯಕ್ರಮಗಳು ನಡಿತಿವೆ.ಈ ಹಿನ್ನಲೆಯಲ್ಲಿ ನಾಳೆ ಬಂಟ್ವಾಳಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಬುಲ್ಡೋಜರ್ ಬಾಬಾ ಯೋಗಿ ಆದಿತ್ಯನಾಥ್ ಅವರು ಆಗಮಿಸಲಿದ್ದಾರೆ.ಈ ವೇಳೆ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆಯಿದೆ.

ಈ ಕಾರಣದಿಂದಾಗಿ ಬಂಟ್ವಾಳದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಮಂಗಳೂರು-ಬಿ.ಸಿರೋಡ್‌ ಹೆದ್ದಾರಿಯಲ್ಲಿ ಕೆಲವು ತಾಸುಗಳ ಕಾಲ ವಾಹನ ಸಂಚಾರ ನಿಷೇಧಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.ಯೋಗಿ ಅವರು ಹೆಲಿಕಾಪ್ಟರ್‌ ಮೂಲಕ ಬಂಟ್ವಾಳ ವಿದ್ಯಾಗಿರಿ ಎಸ್‌ವಿಎಸ್‌ ಕಾಲೇಜಿನ ಬಳಿಯ ಹೆಲಿಪ್ಯಾಡ್‌ಗೆ ಆಗಮಿಸಿ ಅಲ್ಲಿಂದ ಝೀರೋ ಟ್ರಾಫಿಕ್‌ ಮೂಲಕ ಕೈಕಂಬಕ್ಕೆ ತೆರಳಿ ಖಾಸಗಿ ಬಸ್‌ ನಿಲ್ದಾಣದವರೆಗೆ ರೋಡ್‌ ಶೋ ನಡೆಸಲಿದ್ದಾರೆ.

ಎಸ್‌ಪಿಜಿ ತಂಡ ಭದ್ರತೆಯ ಹಿನ್ನೆಲೆಯಲ್ಲಿ ರೋಡ್‌ ಶೋ ವಾಹನದ ಹಿಂದೆ-ಮುಂದೆ ಸುಮಾರು 500 ಮಂದಿ ವಿಶೇಷ ಸ್ವಯಂಸೇವಕರು ಬೇರೆ ಯಾರೂ ವಾಹನದತ್ತ ಆಗಮಿಸದಂತೆ ಎಚ್ಚರಿಕೆ ವಹಿಸಲಿದ್ದಾರೆ.ಜತೆಗೆ ಯೋಗಿ ಅವರ ಭದ್ರತೆಗಾಗಿ ಎಸ್‌ಪಿಜಿಯ ತಂಡ ಮಂಡ್ಯದಿಂದ ಬಂಟ್ವಾಳಕ್ಕೆ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Related posts

ದ.ಕ ಜಿಲ್ಲೆ ಉಸ್ತುವಾರಿ ವಹಿಸಿರೋದು ಹೆಮ್ಮೆಯ ವಿಚಾರ,ಇಲ್ಲಿನ ಜನರ ನಾಡಿ‌ಮಿಡಿತ ಸ್ವಲ್ಪವಾದರೂ ನನಗೆ ಗೊತ್ತಿದೆ-ದಿನೇಶ್ ಗುಂಡೂರಾವ್

ಪುತ್ತಿಲ ಪರಿವಾರದಿಂದ ಪುತ್ತೂರಲ್ಲಿ ಆ.14ರಂದು ಸೌಜನ್ಯ ನ್ಯಾಯಕ್ಕಾಗಿ ಹೋರಾಟ, ಸೌಜನ್ಯ ತಾಯಿಗೆ ಮೊದಲ ಆಮಂತ್ರಣ

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ