ನ್ಯೂಸ್ ನಾಟೌಟ್: ಕನ್ನಡದ ಖ್ಯಾತ ನಿರೂಪಕ , ನಟ ಸೃಜನ್ ಲೋಕೇಶ್ ಜೊತೆ ಯೋಗ ರಾಜ ಭಟ್ಟರು ನೀಡಿದ ಸಂದರ್ಶನದಲ್ಲಿ ಭಟ್ಟರು ಮದುವೆಯಾಗಬೇಕು ಎಂದಿರುವ ಹುಡುಗರಿಗೆ ಕೆಲವೊಂದು ಲವ್ ಟಿಪ್ಸ್ ನೀಡಿದ್ದಾರೆ. ಹೌದು,ಇದು ಕೇವಲ ನಾಲ್ಕು ಶಬ್ದಗಳ ಟಿಪ್ಸ್. ಹೀಗೆ ಮಾಡಿದ್ರೆ ನಿಮ್ಮ ಗರ್ಲ್ಫ್ರೆಂಡ್ ಇಂಪ್ರೆಸ್ ಆಗ್ತಾಳೆ ಜತೆಗೆ ಹೆಂಡತಿನೂ ಮಾತು ಕೇಳುತ್ತಾಳಂತೆ ಏನದು?
ಯೋಗರಾಜ್ ಭಟ್ ಮಾತನಾಡುತ್ತಾ ” ಗರ್ಲ್ಫ್ರೆಂಡ್ ಅನ್ನು ಇಂಪ್ರೆಸ್ ಮಾಡಬೇಕು, ಆಕೆ ನಿಮ್ಮ ಮಾತು ಕೇಳಬೇಕು ಅಂತಿದ್ರೆ ಎಲ್ಲಾ ಹುಡುಗರು ಮೂರು ಡೈಲಾಗ್ ಕಲಿಯಬೇಕು. ಹೂಂ, ಆಂ ಮತ್ತು ಕರೆಕ್ಟ್ ಎನ್ನೋದು. ಬೇಕಿದ್ರೆ ಒಹೋನೂ ಸೇರಿಸ್ಬೋದು. ಆರು ತಿಂಗಳು ಈ ರೀತಿ ಮಾಡಿದ್ದಕ್ಕೆ ಮದುವೆಯಾಗಿದ್ದು ಎಂದಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಅವರ ಪತ್ನಿ ರೇಣುಕಾ ಅವರು ತಮ್ಮ ಪತಿಯ ಕೆಲವೊಂದು ಗುಣಗಳನ್ನು ತೆರೆದಿಟ್ಟಿದ್ದರು. ಯೋಗರಾಜ್ ಭಟ್ ಅವರಿಗೆ ತಾವು ಮಾಡುವ ಸಿನಿಮಾ, ಹಾಡುಗಳ ಸಂಪೂರ್ಣ ಡಿಟೇಲ್ಸ್ ನೆನಪಿದ್ದರೂ, ಕನಸಿನಲ್ಲಿ ಕೂಡ ಪರ್ಫೆಕ್ಟ್ ಆಗಿ ಹೇಳಿದರೂ ತಮ್ಮ ಮದುವೆಯ ದಿನಾಂಕ ಮಾತ್ರ ನೆನಪು ಇರುವುದಿಲ್ಲ ಎಂದಿದ್ದರು. ಇವರನ್ನು ಮದ್ವೆಯಾದದ್ದು ನನ್ನ ತಂದೆಯ ಒತ್ತಾಯಕ್ಕೆ ಎಂದು ರೇಣುಕಾ ಅವರು ಓಪನ್ ಆಗಿಯೇ ಹೇಳಿಕೊಂಡಿದ್ದರು. ಕೆಲಸಕ್ಕೆ ಹೋಗುತ್ತಿದ್ದ ನನಗೆ ಕೆಲಸ ಬಿಡಿಸಿದ್ರು, ಎಲ್ಲರಿಗೂ ಕೆಲಸ ಬಿಡಿಸಿ ತಮ್ಮ ಬಳಿ ಇಟ್ಟುಕೊಳ್ಳುವುದು ಎಂದರೆ ಇವರಿಗೆ ತುಂಬಾ ಖುಷಿ ಎನ್ನುತ್ತಲೇ ಭಟ್ಟರಂಥ ಪತಿಯನ್ನು ಪಡೆದಿರುವುದು ತಮ್ಮ ಪುಣ್ಯ ಎಂದೂ ಹೇಳಿದ್ದರು.