ವೈರಲ್ ನ್ಯೂಸ್

Yoga Day 2023: ಸೀರೆಯುಟ್ಟು ಯೋಗ ಮಾಡಿದ ಮಹಿಳೆಯರು..! ಹೇಗಿತ್ತು ಗೊತ್ತಾ ಚೆಂದುಳ್ಳಿ ನಾರಿಯರ ಯೋಗ? ಇಲ್ಲಿದೆ ನೋಡಿ ಕಲರ್‌ಫುಲ್ ವೈರಲ್ ವಿಡಿಯೋ..

200

ನ್ಯೂಸ್ ನಾಟೌಟ್: ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಿಳಿ ಶರ್ಟ್‌, ಟ್ರ್ಯಾಕ್ ಪ್ಯಾಂಟ್ ಹಾಕಿಕೊಂಡು ಎಲ್ಲ ಕಡೆ ಯೋಗಾಸನ ಮಾಡುತ್ತಿದ್ದರೆ ಇಲ್ಲೊಂದು ಮಹಿಳೆಯರು ಸೀರೆಯುಟ್ಟುಕೊಂಡೇ ಯೋಗಾಸನ ನಡೆಸಿದರು.

ಈ ಮಹಿಳೆಯರ ವಿಡಿಯೋ ಇದೀಗ ವೈರಲ್ ಆಗಿದೆ. ಮಹಾರಾಷ್ಟ್ರದ ಮಹಿಳೆಯರು ನೌವಾರಿ ಸೀರೆಯುಟ್ಟು ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಯೋಗಾಸನ ನಡೆಸಿದರು. ಸೀರೆಯುಟ್ಟುಕೊಂಡ ಮಹಿಳೆಯರು ಸುಖಾಸನ ಸೇರಿ ವಿವಿಧ ಆಸನಗಳನ್ನು ಮಾಡಿದರು. ಇದು ನೆರೆದಿದ್ದವರ ಗಮನ ಸೆಳೆಯಿತು. ಯೋಗ ಮಾಡುವುದು ಸೀರೆಯಲ್ಲಿ ಕಷ್ಟ ಎಂದು ಹೇಳಲಾಗಿತ್ತು. ಆದರೆ ಕಚ್ಚೆ ಸೀರೆಯಲ್ಲಿ ಮನಸ್ಸು ಮಾಡಿದರೆ ಸಲೀಸಾಗಿ ಯೋಗ ಮಾಡಬಹುದು ಅನ್ನುವುದನ್ನು ಮಹಾರಾಷ್ಟ್ರದ ಮಹಿಳೆಯರು ತೋರಿಸಿಕೊಟ್ಟಿದ್ದಾರೆ.

See also  ಕರ್ನಾಟಕದ ಐಪಿಎಸ್ ಅಧಿಕಾರಿ ತಮಿಳ್ ನಾಡಲ್ಲಿ ಅರೆಸ್ಟ್ ಆಗಿದ್ದೇಕೆ..? ಇಲ್ಲಿದೆ ಪೊಲೀಸರ ನಡುವಿನ ಹೊಡೆದಾಟದ ಕಥೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget