ಕರಾವಳಿಶಿಕ್ಷಣಸುಳ್ಯ

ಸುಳ್ಯ : ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ನ್ಯೂಸ್ ನಾಟೌಟ್ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನ ವತಿಯಿಂದ ಅಮರಶ್ರೀ ಸಭಾಂಗಣದಲ್ಲಿ ಯೋಗ ದಿನ ಆಚರಿಸಲಾಯಿತು.

ಅಮರಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರು ಒಟ್ಟಾಗಿ ಏಕಕಾಲದಲ್ಲಿ 300 ಜನ ಸೇರಿ “ಆರೋಗ್ಯ ಯುತ ವಿಶ್ವಕ್ಕೆ ಯೋಗ” ಎಂಬುದನ್ನು ಪ್ರತಿಧ್ವನಿಸಿದ್ದಾರೆ.

ಕಾರ್ಯಕ್ರಮಕ್ಕೆ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರೇಣುಕಾಪ್ರಸಾದ್ ಕೆ.ವಿ. ಶುಭಹಾರೈಸಿದರು. ಕಾಲೇಜಿನ ಸಿಇಒ ಡಾ. ಉಜ್ವಲ್ ಯು.ಜೆ. ಮಾತನಾಡಿ, ಯೋಗವನ್ನು ವಿಶ್ವಮಾನ್ಯವಾಗುವಂತೆ ಮಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಯೋಗ ದಿನಾಚರಣೆಯ ಅಂಗವಾಗಿ “ವಸುದೈವ ಕುಟುಂಬಕಂ” ಎಂಬ ಮಾತಿನಂತೆ ಯೋಗದಿಂದ ಏಕಾಗ್ರತೆ ಸಾಧಿಸಿ ಜೀವನ, ವಿದ್ಯಾಭ್ಯಾಸವನ್ನು ಸುಂದರಗೊಳಿಸಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಸುಳ್ಯದ ಆರ್ಟ್ ಆಫ್ ಲಿವಿಂಗ್‌ನ ಉಪನ್ಯಾಸಕ ರಾಮಕೃಷ್ಣ ಭಟ್ ಪಿ. ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗದ ಪ್ರಾಮುಖ್ಯತೆ, ಮತ್ತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸುವುದರಿಂದ ಆಗುವ ಪ್ರಯೋಜನದ ಕುರಿತು ವಿವರಿಸಿದರು. ಯೋಗೇನ ಚಿತ್ತಸ್ಯ ಪದೇನಾ ವಾಚಾಂ”ಎಂಬುದರ ಪ್ರತಿಬಿಂಬವೆಂಬಂತೆ ಪ್ರಾಯೋಗಿಕ ಯೋಗಾಭ್ಯಾಸ ಮಾಡಿಸಿ ಯೋಗಾಭ್ಯಾಸದ ಅರಿವು ಮೂಡಿಸಿದರು.

ಡಾ. ಉಜ್ವಲ್ ಯು.ಜೆ. ಹಾಗೂ ಎಲ್ಲಾ ಉಪನ್ಯಾಸಕ ವೃಂದದವರು ಯೋಗದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಯೋಗ ಶಿಕ್ಷಕರಾದ ಭಾಸ್ಕರ ಬೆಳೆಗದ್ದೆ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ನಿರ್ದೇಶಿಸಿದರು. ಉಪಪ್ರಾಂಶುಪಾಲ ದೀಪಕ್ ವೈ.ಆರ್., ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

Related posts

ಸುಳ್ಯ: ನೀರಿಗೆ ಬಿದ್ದು ವೃದ್ಧ ಸಾವು..! ಕಾರಣ ನಿಗೂಢ..!

ವಿಟ್ಲ: ಅನ್ಯಕೋಮಿನ ಯುವತಿ ಜೊತೆ ಯುವಕನೋರ್ವ ಅಸಭ್ಯ ವರ್ತನೆ! ಯುವಕನ ಶೀಘ್ರ ಬಂಧನಕ್ಕೆ ಆಶಾ ತಿಮ್ಮಪ್ಪ ಆಗ್ರಹ!

ಸಂಪಾಜೆ-ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಭೀತಿ..!, ಇಂದು ರಾತ್ರಿಯಿಂದ (ಜು18) ನಾಲ್ಕು ದಿನ ವಾಹನ ಸಂಚಾರ ನಿರ್ಬಂಧ