ಕರಾವಳಿ

ಸರಕಾರಿ ಜಾಗದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ : ಹಿಂದೂ ಜಾಗರಣ ವೇದಿಕೆ ಕಿಡಿ…ಕಿಡಿ

ನ್ಯೂಸ್ ನಾಟೌಟ್: ಸರ್ಕಾರಿ ಜಾಗದಲ್ಲಿ ರಾತ್ರೋರಾತ್ರಿ ಏಸುವಿನ ಪ್ರತಿಮೆ ನಿರ್ಮಿಸಿದ್ದು, ಇದು ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಸರಪಾಡಿ ಹಾಗೂ ನಾವೂರು ಗ್ರಾಮಕ್ಕೆ ಹೊಂದಿಕೊಂಡಿರುವ ಅಲ್ಲಿಪಾದೆ ಎಂಬಲ್ಲಿ ಸಂತ ಜೋನ್ ಚರ್ಚ್ ನ ಎದುರು ಸರಕಾರಿ ಜಾಗ ಇದೆ. ಈ ಸರಕಾರಿ ಜಾಗದಲ್ಲಿ ರಾತ್ರಿಯು ಏಸುವಿನ ಪ್ರತಿಮೆ ನಿರ್ಮಿಸಲಾಗಿದೆ. ಇದರ ವಿರುದ್ಧ ಆರೋಪ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಏಸುವಿನ ಪ್ರತಿಮೆ ನಿರ್ಮಿಸಿದ್ದು ಕಾನೂನು ಬಾಹಿರವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅಲ್ಲದೆ ಈ ಪ್ರತಿಮೆಯ ಸುತ್ತಲೂ ಅನಧಿಕೃತ ಆವರಣವನ್ನು ನಿರ್ಮಿಣ ಮಾಡಿಲಾಗಿದೆ. ಹಾಗಾಗಿ ಈ ಪ್ರದೇಶದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗಿರುತ್ತದೆ. ಅನಧಿಕೃತ ಏಸುವಿನ ಪ್ರತಿಮೆಯನ್ನು ತೆರವುಗೊಳಿಸದೆ ಇದ್ದರೆ ಅಲ್ಲಿ ಉಂಟಾಗುವ ಕೋಮು ಸಂಘರ್ಷಕ್ಕೆ ಚರ್ಚ್ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಷಯದ ಕುರಿತು ಬಂಟ್ವಾಳ ತಾಲೂಕಿನ ಸರಪಾಡಿ ವಲಯದ ಹಿಂದೂ ಜಾಗರಣ ವೆದಿಕೆಯ ಸಿಬ್ಬಂದಿ ಬಂಟ್ವಾಳ ತಹಶೀಲ್ದಾರರಿಗೆ ದೂರು ನೀಡಿದ್ದಾರೆ.

Related posts

ಸುಳ್ಯ : ಪರವಾನಿಗೆ ಇಲ್ಲದ ಖಾಸಗಿ ಬಸ್ ಗಳಿಗೆ ಬಿಗ್ ಬ್ರೇಕ್ !

ಉಪ್ಪಿನಂಗಡಿ: ಕುದುರೆಗೆ ಬಸ್ ಡಿಕ್ಕಿ, ಕುದುರೆ ಸವಾರ ಗಂಭೀರ

ಮಡಿಕೇರಿ: ರೂಬಿಕ್ಸ್ ಕ್ಯೂಬ್‍ನಲ್ಲಿ ಶ್ರೀರಾಮನ ಚಿತ್ರ ಅರಳಿಸಿದ ಬಾಲಕ..!..!ಭಾರಿ ಮೆಚ್ಚುಗೆಗೆ ಪಾತ್ರವಾದ 12ರ ಈ ಬಾಲಕ ಯಾರು ಗೊತ್ತಾ?