ದೇಶ-ವಿದೇಶವೈರಲ್ ನ್ಯೂಸ್

ರಾತ್ರೋರಾತ್ರಿ ಕೋಟ್ಯಧಿಪತಿಯಾದ ವಾಚ್‌ ಮೆನ್..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ದುಬೈನಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್​ ಮೂಲದ ವಾಚ್‌ ಮೆನ್ ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದಾರೆ. ಆ ಅದೃಷ್ಟವಂತನ ಹೆಸರು ನಾಂಪಲ್ಲಿ ರಾಚಮಲ್ಲಯ್ಯ ಎಂದು ಗುರುತಿಸಲಾಗಿದೆ. ಇವರಿಗೆ 60 ವರ್ಷ ವಯಸ್ಸು. ಕಳೆದ ಮೂರು ದಶಕಗಳಿಂದ ದುಬೈನ ಅಬುಧಾಬಿಯಲ್ಲಿ ಕಟ್ಟಡದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಬಿಗ್​ ಟಿಕೆಟ್​ ಹೆಸರಿನ ಲಾಟರಿ ಟಿಕೆಟ್ ​ಗಳನ್ನು ಖರೀದಿಸುವ ಅಭ್ಯಾಸ ಅವರಿಗಿತ್ತು ಎನ್ನಲಾಗಿದೆ. ಎಂದಿನಂತೆ ಗೆಳೆಯರ ಜೊತೆ ಸೇರಿ ಬಿಗ್​ ಟಿಕೆಟ್ ಖರೀದಿಸಿದ್ದರು.

ಈ ಬಾರಿ ಅನಿರೀಕ್ಷಿತವಾಗಿ ಖರೀದಿಸಿದ ಲಾಟರಿ ಟಿಕೆಟ್ ​ಗೆ ಬಹುಮಾನ ಒಲಿದುಬಂದಿದ್ದು, ರಾಚಮಲ್ಲಯ್ಯನವರ ಆನಂದಕ್ಕೆ ಮಿತಿಯೇ ಇರದಂತಾಗಿದೆ. ಇತ್ತೀಚೆಗೆ ಘೋಷಿಸಲಾದ ಬಿಗ್ ಟಿಕೆಟ್ ಮಿಲಿಯನೇರ್ ಎಲೆಕ್ಟ್ರಾನಿಕ್ ಲಕ್ಕಿ ಡ್ರಾದಲ್ಲಿ ರಾಚಮಲ್ಲಯ್ಯ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಲಕ್ಕಿ ಡ್ರಾದಲ್ಲಿ ರಾಚಮಲ್ಲಯ್ಯ ಅಂದಾಜು ಎರಡು ಕೋಟಿ ರೂ. ಬಹುಮಾನ ಗೆದ್ದಿದ್ದಾರೆ.

ಕಳೆದ ಮೂವತ್ತು ವರ್ಷಗಳಿಂದ ಈ ರೀತಿ ಲಾಟರಿ ಟಿಕೆಟ್ ಖರೀದಿಸುತ್ತಿದ್ದೇನೆ. ಕೊನೆಗೂ ಅದೃಷ್ಟ ಒಲಿದು ಬಂದಿದೆ ಎಂದು ರಾಚಮಲ್ಲಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

Click

https://newsnotout.com/2024/12/women-nomore-fire-issue-husband-and-wife-conflict/
https://newsnotout.com/2024/12/181-people-issue-airplane-crash-while-landing-in-south-koria/
https://newsnotout.com/2024/12/1984-bhopal-incident-kannada-news-highcourt-d/
https://newsnotout.com/2024/12/ayyappa-mala-shabarimale-muslim-kannada-news-s/

Related posts

ಮಾನವನ ಮೂಳೆಯಿಂದ ಮಾದಕ ಪದಾರ್ಥ ತಯಾರಿ..! ಈ ದೇಶದಲ್ಲಿ ಸ್ಮಶಾನಗಳಿಗೆ ಕಾವಲು, ತುರ್ತುಪರಿಸ್ಥಿತಿ ಘೋಷಣೆ..!

ಸರ್ಕಾರಿ ಶಾಲೆಯ ಹಾಲಿನ ಪುಡಿ ಮನೆಗೆ ಕದ್ದೊಯ್ಯುತ್ತಿದ್ದ ಮುಖ್ಯ ಶಿಕ್ಷಕ..! ಹಾಲಿನ ಪ್ಯಾಕೆಟ್‌ ಗಳ ಸಮೇತ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಶಿಕ್ಷಕ..!

ಮೋದಿ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್..! ಮತ್ತೆ ಜಿಗಿದ ಷೇರು ಮಾರುಕಟ್ಟೆ..!