ರಾಜಕೀಯವೈರಲ್ ನ್ಯೂಸ್

ಸಿದ್ದರಾಮಯ್ಯ ಪರ ‘ಸಾಫ್ಟ್‌ ಕಾರ್ನರ್‌’ ತೋರುತ್ತಿರುವುದೇಕೆ ಬಸನಗೌಡ ಪಾಟೀಲ್‌ ಯತ್ನಾಳ್‌? ಸಿದ್ದರಾಮಯ್ಯ ರಾಜಕೀಯದ ಬಗ್ಗೆ ಭವಿಷ್ಯ ನುಡಿದ ಹಿಂದೂ ಫೈರ್ ಬ್ರ್ಯಾಂಡ್! ಏನಿದು ರಾಜಕೀಯ ವಿರೋಧಿಗಳ ಆತ್ಮೀಯತೆ?

ನ್ಯೂಸ್ ನಾಟೌಟ್: ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರ ಬಗ್ಗೆ ಆಗಾಗಾ ದೂರುತ್ತಿರುವ ಯತ್ನಾಳ್ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಆತ್ಮೀಯ ಬಗ್ಗೆ ಮಾತನಾಡಿದ್ದು ಕೆಲವು ರಾಜಕೀಯ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ ಬಹಳ ಸೈಲೆಂಟ್‌ ಆಗಿದ್ದಾರೆ. ಈ ರೀತಿ ಹೇಳುವ ಮೂಲಕ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಿದ್ದರಾಮಯ್ಯ ಸೈಲೆಂಟ್‌ ಆಗಲು ಕಾರಣವೇನು ಎಂದು ವಿವರಿಸಿದ್ದಾರೆ. ಸಿದ್ದರಾಮಯ್ಯ ನನಗೆ ಆತ್ಮೀಯರಿದ್ದಾರೆ ಎನ್ನುವ ಮೂಲಕ ಮುಖ್ಯಮಂತ್ರಿಗಳ ವಿಚಾರದಲ್ಲಿ ಸಾಫ್ಟ್‌ ಕಾರ್ನರ್‌ ಪ್ರದರ್ಶಿಸಿದ್ದಾರೆ.

ದೇವರ ಹಿಪ್ಪರಗಿ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯತ್ನಾಳ್, ಯಾಕೋ ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ ಬಹಳ‌ ಸೈಲೆಂಟ್ ಆಗಿದ್ದಾರೆ. ಈ ರೀತಿ ಯಾಕೆ ಸೈಲೆಂಟ್ ಆಗಿದ್ದೀರಾ ಎಂದು ನಾನು ಸಿದ್ದರಾಮಯ್ಯ ಅವರಿಗೆ ಕೇಳಿದ್ದೇ. ಆಗ ಏನ್‌ ಮಾಡೋದು ಯತ್ನಾಳ್ ಇದು ಕೊನೆದಿದೆ. ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳಲ್ಲ. ಜನರಿಗೆ ಉತ್ತಮ ಆಡಳಿತ ನೀಡ್ತಿನಿ ಎಂದು ಹೇಳಿದ್ದರು ಎಂದು ಹೇಳಿದ್ದಾರೆ.

ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಆತ್ಮೀಯತೆ ಇದೆ. ನಾನು ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯ ನನ್ನನ್ನು ನೋಡಲು ಬಂದಿದ್ದರು ಎಂದ ಯತ್ನಾಳ್‌, ಸಿಎಂ ಸಿದ್ದರಾಮಯ್ಯ ಏನು ಪಾಕಿಸ್ತಾನದ ಮುಖ್ಯಮಂತ್ರಿನಾ? ಅವರು ರಾಜ್ಯದ ಮುಖ್ಯಮಂತ್ರಿ.

ಆದ್ದರಿಂದ ಶಾಸಕರು ಅವರ ಬಳಿ ಹೋಗೋದು ಸಹಜ ಎಂದು ತಿಳಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರ ಬಗ್ಗೆ ಸಾಫ್ಟ್ ಕಾರ್ನರ್ ಮಾತುಗಳನ್ನು ಯತ್ನಾಳ್‌ ಆಡಿದ್ದು, ಇದೇ ವೇಳೆ, ದೇಶ, ಹಿಂದೂ ಧರ್ಮ ಉಳಿವಿಗಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವ ಕಾರ್ಯವಾಗಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಿದ ಮಹಾತ್ಮರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Related posts

ರಸ್ತೆ ಬದಿಯ ‘ಮೊಮೋಸ್’ ತಿಂದು ಮಹಿಳೆ ಸಾವು..! 22 ಮಂದಿ ಆಸ್ಪತ್ರೆಗೆ ದಾಖಲು..!

ಪರೀಕ್ಷೆ ಬರೆಯಲು ಬಂದವನನ್ನು ಕಾಲೇಜು ಆವರಣದಲ್ಲಿ ಹೊಡೆದು ಕೊಂದ ಯುವಕರು..! 1 ವರ್ಷದಿಂದ ಕೆಟ್ಟುಹೋಗಿತ್ತು ಕಾನೂನು ಕಾಲೇಜಿನ ಸಿಸಿಟಿವಿ..!

ದರ್ಶನ್ ಮೇಲೆ ಒಂದಲ್ಲ 3 ಕೇಸ್‌ ದಾಖಲು..! ದರ್ಶನ್ ಅಭಿಮಾನಿಗಳ ಜಿಲ್ಲಾಧ್ಯಕ್ಷನೂ ಅರೆಸ್ಟ್..! ಇಲ್ಲಿದೆ ಸಂಪೂರ್ಣ ಮಾಹಿತಿ