ಯಕ್ಷಯಾನ

ಖ್ಯಾತ ಯಕ್ಷಗಾನ ಕಲಾವಿದ ಕುಂಬಳೆ ಸುಂದರ್ ರಾವ್ ಇನ್ನಿಲ್ಲ

355

ನ್ಯೂಸ್ ನಾಟೌಟ್‌: ಯಕ್ಷರಂಗದಲ್ಲಿ ವಿಶೇಷ ಕಂಠ ಸಿರಿಯಿಂದಲೇ ಜನಮನ ಗೆದ್ದಿದ್ದ ಖ್ಯಾತ ಯಕ್ಷಗಾನ ಕಲಾವಿದ ಕುಂಬಳೆ ಸುಂದರ್ ರಾವ್ (88) ಇಂದು (ಬುಧವಾರ) ಮುಂಜಾನೆ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಇವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರವು ಗುರುವಾರ ನಡೆಯಲಿದೆ ಎಂದು ತಿಳಿದು ಬಂದಿದೆ. ಇವರ ಪಾರ್ಥೀವ ಶರೀರವನ್ನು ಮಂಗಳೂರಿನ ಪಂಪ್ ವೆಲ್ ಬಳಿ ಇರುವ ಅವರ ಸ್ವಗೃಹದಲ್ಲಿ ಇರಿಸಲಾಗಿದ್ದು ಸಾರ್ವಜನಿಕರಿಗೆ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ಸುಂದರ್ ರಾವ್ ಅವರ ನಿಧನ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಯಕ್ಷಗಾನ ದಿಗ್ಗಜರು ನೋವು ವ್ಯಕ್ತಪಡಿಸಿದ್ದಾರೆ.

See also  ಕಲ್ಲುಗುಂಡಿ :ಒತ್ತೆಕೋಲ ಗದ್ದೆಯಲ್ಲಿರುವ ರಂಗಮಂಟಪದಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ: ಸಾವಿರಾರು ಸಂಖ್ಯೆಯಲ್ಲಿ ಊರ ಹಾಗೂ ಪರವೂರ ಯಕ್ಷಾಭಿಮಾನಿಗಳು ಭಾಗಿ
  Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget