ನ್ಯೂಸ್ ನಾಟೌಟ್: ಚಿತ್ರನಟಿಯಾಗಿ, ರಾಜಕಾರಣಿಯಾಗಿ ಜನಪ್ರೀಯರಾಗಿರುವ ಉಮಾಶ್ರೀ ಶುಕ್ರವಾರ(ಜ.17) ಯಕ್ಷಗಾನ ಕಲಾವಿದೆಯಾಗಿ ರಂಗಸಜ್ಜಿಕೆ ಏರಲಿದ್ದಾರೆ.
ಹೊನ್ನಾವರ ಪಟ್ಟಣದ ಸೆಂಟ್ ಅಂಥೋನಿ ಮೈದಾನದಲ್ಲಿ ರಾತ್ರಿ 9.30 ರಿಂದ ನಡೆಯುವ ‘ಶ್ರೀ ರಾಮ ಪಟ್ಟಾಭಿಷೇಕ’ ಯಕ್ಷಗಾನದಲ್ಲಿ ಅವರು ಮಂಥರೆಯಾಗಿ ಅಭಿನಯಿಸಲಿದ್ದಾರೆ.
ಪೆರ್ಡೂರಿನ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯು ಪ್ರದರ್ಶಿಸಲಿರುವ ಯಕ್ಷಗಾನದಲ್ಲಿ ಉಮಾಶ್ರೀ ವೇಷ ತೊಡಲಿದ್ದಾರೆ. ಇದು ಅವರ ಮೊದಲ ಯಕ್ಷಗಾನ ಪ್ರದರ್ಶನವಾಗಿದೆ.
‘ಚಿತ್ರನಟಿಯಾಗಿ ಅದ್ಭುತ ಅಭಿನಯ ಮಾಡುವ ಉಮಾಶ್ರೀ ಅವರನ್ನು ಯಕ್ಷಗಾನದಲ್ಲಿ ಅಭಿನಯಿಸುವಂತೆ ಮನವಿ ಮಾಡಲಾಗಿತ್ತು. ಹೊಸ ಸವಾಲು ಇದಾಗಿದ್ದರೂ ಅವರು ಅದನ್ನು ಖುಷಿಯಿಂದಲೇ ಒಪ್ಪಿದ್ದಾರೆ. ಶ್ರೀ ರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಮಂಥರೆಯ ಪಾತ್ರ ಪ್ರಮುಖ ಆಕರ್ಷಣೆ ಆಗಿದ್ದು, ಅದನ್ನು ಉಮಾಶ್ರೀ ನಿಭಾಯಿಸುತ್ತಿರುವುದು ಯಕ್ಷಗಾನ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿದೆ’ ಎಂದು ಯಕ್ಷಗಾನದ ಆಯೋಜಿಸುತ್ತಿರುವ ಅಪ್ಪಿ ಹೆಗಡೆ ಸಾಣ್ಮನೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜನವರಿ 12, 13 ರಂದು ಉಮಾಶ್ರೀ ಯಕ್ಷಗಾನ ವೇಷ ಧರಿಸಿ ತಾಲೀಮು ನಡೆಸಿದ್ದಾರೆ. ಶುಕ್ರವಾರ ನಸುಕಿನ ಜಾವ ಹೊನ್ನಾವರಕ್ಕೆ ತಲುಪಿದ್ದಾರೆ’ ಎಂದೂ ಹೇಳಿದರು.
Click