ನ್ಯೂಸ್ ನಾಟೌಟ್: ಕೊಡಗು-ಮೈಸೂರು ಸಂಸದ ಹಾಗೂ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರ ಎರಡನೇ ಪುತ್ರನ ಹೆಸರು ಕೊನೆಗೂ ರಿವೀಲ್ ಆಗಿದೆ.ಮಗು ಹುಟ್ಟಿ ನಾಲ್ಕು ತಿಂಗಳ ಬಳಿಕ ನಾಮಕರಣ ಮಾಡಲಾಗಿದೆ.
ಮೊದಲ ಪುತ್ರನಿಗೆ ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ಹೆಸರಿಡಲಾಗಿತ್ತು.ಇದೀಗ ಎರಡನೇ ಪುತ್ರನಿಗೆ ಯುಗಾಧ್ಯಕ್ಷ ಒಡೆಯರ್ ಎಂದು ಹೆಸರಿಡಲಾಗಿದೆ.
ಕಳೆದ ವರ್ಷದ ಅ.11ರಂದು ಜನಿಸಿದ ದ್ವಿತೀಯ ಪುತ್ರನಿಗೆ ಫೆ.19ರಂದು ಅರಮನೆಯ ಕನ್ನಡಿತೊಟ್ಟಿಯಲ್ಲಿ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ರಾಜಪುರೋಹಿತರು ನಾಮಕರಣ ಕಾರ್ಯವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.