ಬೆಂಗಳೂರು

ವಿದೇಶ ಪ್ರವಾಸ ಮುಗಿಸಿ ಬರುತ್ತಿದ್ದಂತೆ ಮಾಜಿ ಸಿಎಂ ಯಡಿಯೂರಪ್ಪ 1 ಕೋಟಿ ರೂ. ಕಾರು ಖರೀದಿಸಿದ್ದಾದರೂ ಏಕೆ?

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿದೇಶ ಪ್ರವಾಸ ಮುಗಿಸಿ ಇದೀಗ ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನೊಂದು ತಿಂಗಳಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಬಿಎಸ್​ವೈ ಅದಕ್ಕಾಗಿ ನೂತನ ಕಾರೊಂದನ್ನು ಖರೀದಿಸಿದ್ದಾರೆ. 1 ಕೋಟಿ ರೂಪಾಯಿ ಬೆಲೆ ಬಾಳುವ ದುಬಾರಿ ಟಯೋಟಾ ವೆಲ್​ಫೈರ್​ ಕಾರನ್ನು ಬಿಎಸ್​ ಯಡಿಯೂರಪ್ಪ ಖರೀದಿ ಮಾಡಿದ್ದಾರೆ. ಇದೇ ಕಾರಿನಲ್ಲಿ ಅವರು ಸೋಮವಾರ ಏರ್​ಪೋರ್ಟ್‌ ನಿಂದ ಕಾವೇರಿ ನಿವಾಸಕ್ಕೆ ಆಗಮಿಸಿದ್ದರು. ಬಿಳಿಯ ಬಣ್ಣದ KA -05- ND – 4545 ನೊಂದಣಿ ಸಂಖ್ಯೆಯ ಹೊಸ ಟಯೋಟಾ ವೆಲ್ ಫೈರ್ ವಾಹನ ಇದಾಗಿದೆ.

ವಿದೇಶದಿಂದ ಆಗಮಿಸಿದ ಬಿಎಸ್​ವೈ ಅವರನ್ನು ಬರಮಾಡಿಕೊಳ್ಳಲು ಅವರ ಸಿಬ್ಬಂದಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಕಾರು ತಂದಿದ್ದರು. ಕಳೆದ ಗುರುವಾರ ಬಿಎಸ್​ವೈ ತಮ್ಮ ಕುಟುಂಬದ ಜೊತೆ ಮಾಲ್ಡೀವ್ಸ್ ಗೆ ಪ್ರವಾಸಕ್ಕೆ ತೆರಳಿದ್ದರು. ಐದು ದಿನಗಳ ಪ್ರವಾಸ ಮುಗಿಸಿ ನಿನ್ನೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ರಾತ್ರಿ 8.15 ಕ್ಕೆ ಬಿಎಸ್ ವೈ ಹಾಗೂ ಕುಟುಂಬ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ರಾಜಕೀಯ ಜಂಜಾಟ ಮರೆತು ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡಿದ್ದರು.

Related posts

ಬಿಜೆಪಿ ನಾಯಕ ಪ್ರತಾಪ್ ಸಿಂಹ ನ್ಯೂ ಹೇರ್ ಸ್ಟೈಲ್..! ‘ಬೈ ಬೇಡ್ರೋ .. ಹುಣಸೂರು ಆದಿವಾಸಿ ಹೇರ್ ಆಯಿಲ್ ಜಾಹೀರಾತು..!’

ಮೋರಿ ನೀರಿನಲ್ಲಿ ಕೊಚ್ಚಿ ಹೋದ ಇಂಜಿನೀಯರ್ ಯುವಕ

ಗುದನಾಳಕ್ಕೆ ಏರ್ ಪ್ರೆಶರ್ ಪೈಪ್‍ ನಿಂದ ಗಾಳಿ ಬಿಟ್ಟ ಸ್ನೇಹಿತ..! ತಮಾಷೆ ತಂದ ಭೀಕರ ಸಾವು..!