ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗ ಹಾಗೂ ಕಮ್ಯುನಿಟಿ ಮೆಡಿಸಿನ್ ವಿಭಾಗದ ಜಂಟಿ ಆಶ್ರಯದಲ್ಲಿ ಗುರುವಾರ (ನ. 14 ) “ನವಜಾತ ಶಿಶು ಸಪ್ತಾಹ” ಹಾಗೂ ವಿಶ್ವ ರೋಗನಿರೋಧಕ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಡೀನ್ ಡಾ| ನೀಲಾಂಬಿಕೈ ನಟರಾಜನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ| ಸುಧಾ ರುದ್ರಪ್ಪ, ಸಹಾಯಕ ಪ್ರಾಧ್ಯಾಪಕಿ ಡಾ| ಸುನೀತಾ ಒ.ಬಿ.ಜಿ ವಿಭಾಗ ಮುಖ್ಯಸ್ಥೆ ಡಾ| ಗೀತಾ ದೊಪ್ಪ, ಕಮ್ಯುನಿಟಿ ಮೆಡಿಸಿನ್ ವಿಭಾಗದ ಗೌರವ ಪ್ರಾಧ್ಯಾಪಕ ಡಾ| ನಾರಾಯಣ್ ಹೊಳ್ಳ ಹಾಗೂ ಸಹ ಪ್ರಾಧ್ಯಾಪಕಿ ಡಾ| ಅಪೂರ್ವ ದೊರೆ ಉಪಸ್ಥಿತರಿದ್ದರು.
ನ. 15ರಿಂದ 21ರವರೆಗೆ “ನವಜಾತ ಶಿಶು ಸಪ್ತಾಹ”ವೆಂದು ಆಚರಿಸಲಾಗುತ್ತದೆ ಹಾಗೂ ವಿಶ್ವ ರೋಗನಿರೋಧಕ ದಿನ ವಾರ್ಷಿಕವಾಗಿ ನವೆಂಬರ್ 10 ರಂದು ಆಚರಿಸಲಾಗುವ ಜಾಗತಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.
ಬಳಿಕ ಡಾ| ಸುಧಾ ರುದ್ರಪ್ಪ ನವಜಾತ ಶಿಶು ಸಪ್ತಾಹದ ಪ್ರಾಮುಖ್ಯತೆಯ ಕುರಿತು ಮಾಹಿತಿ ಹಂಚಿಕೊಂಡರು. ಡಾ ನಾರಾಯಣ್ ಹೊಳ್ಳ ಹಾಗೂ ಡಾ ಅಪೂರ್ವ ದೊರೆ ವಿಶ್ವ ರೋಗನಿರೋಧಕ ದಿನದ ಕುರಿತಾದ ವಿಶೇಷ ಮಾಹಿತಿಯನ್ನು ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಕಿರು ಪ್ರಹಸನ ಪ್ರದರ್ಶನ ನಡೆಯಿತು. ಸ್ನಾತ್ತಕೋತ್ತರ ವಿದ್ಯಾರ್ಥಿನಿ ಡಾ| ಮಿನಿ ರಾಜೀವನ್ ಸ್ವಾಗತಿಸಿದರು. ಡಾ| ಸುನೀತಾ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗ ಮುಖ್ಯಸ್ಥರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.