ನ್ಯೂಸ್ ನಾಟೌಟ್: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಮ್ಯೂನಿಟಿ ಮೆಡಿಸಿನ್ ವಿಭಾಗದ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಏ.೦೭ರಂದು ನೆರವೇರಿತು.
ವಿಶ್ವ ಆರೋಗ್ಯ ದಿನಾಚರಣೆಯ ಇತಿಹಾಸ, ಥೀಮ್ ಹಾಗೂ ಆರೋಗ್ಯದ ಕುರಿತಾದ ವಿಶೇಷ ಮಾಹಿತಿಯನ್ನು ನೀಡಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಪ್ರೊ.ಡಾ ದಿನೇಶ್ ಪಿ ವಿ, ಸಹ ಪ್ರಾಧ್ಯಾಪಕ ಡಾ. ಅಪೂರ್ವ ದೊರೆ, ಮೈಕ್ರೋ ಬಯಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ನಮೃತಾ ಕೆ.ಜಿ, ಮಕ್ಕಳ ವಿಭಾಗದ ಪ್ರೊ.ಡಾ ಸುಧಾ ರುದ್ರಪ್ಪ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ನ ಪ್ರಾಂಶುಪಾಲ ಬಿ.ಎಮ್. ಪ್ರೇಮ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.