ಮಹಿಳೆ-ಆರೋಗ್ಯ

ಇಂದು ವಿಶ್ವ ಹೃದಯ ದಿನ: ಹೃದಯ ಕಾಳಜಿ ವಹಿಸಿ, ಹೃದಯಾಘಾತ ತಪ್ಪಿಸಿ

546
Vector illustration World Heart Day Background
Spread the love

ಬೆಂಗಳೂರು: ಇಂದು  ವಿಶ್ವ ಹೃದಯ ದಿನ. ನಮ್ಮ ಹೃದಯವನ್ನು ಕಾಳಜಿ ವಹಿಸಿ ಜೋಪಾನವಾಗಿ ನೋಡಿ ಕೊಳ್ಳಲೆಂದೇ ಇಂದು ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ಹೃದಯ ದಿನದ 24 ಗಂಟೆಯೂ ನಿಯಮಿತವಾಗಿ ಬಡಿದುಕೊಳ್ಳುವುದೇ ಜೀವಂತಿಕೆಯ ಸೆಲೆ. ಅದು ನಿರಂತರ ಬಡಿದುಕೊಳ್ಳುತ್ತಿದ್ದರೆ ನಮ್ಮ  ಜೀವನಕ್ಕೆ ಅರ್ಥ ಬರುತ್ತದೆ. 

ಇತಿಹಾಸ

1999ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದೊಂದಿಗೆ ವಿಶ್ವ ಹೃದಯ ಒಕ್ಕೂಟವು ಮೊದಲ ಬಾರಿಗೆ ಈ ದಿನವನ್ನು ಘೋಷಿಸಿತು. ಬಳಿಕ 2000ದಲ್ಲಿ ಈ ದಿನವನ್ನು ಸೆಪ್ಟೆಂಬರ್ 24ರಂದು ಆಚರಿಸಲಾಯಿತು. ಆದಾಗ್ಯೂ, 2011ರಿಂದ ವಿಶ್ವ ಹೃದಯ ದಿನವನ್ನು ಪ್ರತೀ ವರ್ಷ ಸೆಪ್ಟೆಂಬರ್ 29ರಂದು ಆಚರಿಸಲಾಗುತ್ತಿದೆ.

ಜಾಗೃತಿ ಮೂಡಿಸುವ ದಿನ

ಈ ದಿನ, ಆರೋಗ್ಯಕ್ಕೆ ಸಂಬಂಧಿಸಿದಂತೆ ಅನಾರೋಗ್ಯಕರ ಆಹಾರ, ತಂಬಾಕು ಸೇವನೆ, ಮತ್ತು ದೈಹಿಕ ದುರ್ಬಲತೆಗೆ ಸಂಬಂಧಿಸದಂತೆ ಉಂಟಾಗವ ಅಪಾಯವನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಸಾರುತ್ತದೆ. ಶೇ. 80ರಷ್ಟು ಅಕಾಲಿಕ ಮರಣಗಳಿಗೆ ಕಾರಣವಾಗುವ ಹೃದಯಾಘಾತ ಮತ್ತು ಪಾರ್ಶ್ವವಾಯುವನ್ನು ತಡೆಗಟ್ಟಲು ಜಾಗೃತಿ ಮೂಡಿಸುವ ದಿನವಾಗಿದೆ.

See also  ದರ್ಶನ್ ಪ್ರಕರಣ: ಪೊಲೀಸ್ ಕಸ್ಟಡಿಯಲ್ಲಿ ಪವಿತ್ರಾ ಗೌಡ ಅಸ್ವಸ್ಥ..! ಆಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget   Ad Widget   Ad Widget   Ad Widget