ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಭಾರತ ವಿಶ್ವಕಪ್ ಗೆದ್ದರೆ ಬೆತ್ತಲೆಯಾಗಿ ನಡೆಯುತ್ತೇನೆ ಎಂದ ಈ ನಟಿ ಯಾರು? ಏನಿದು ನಟಿಯ ಓಪನ್ ಚಾಲೆಂಜ್?

ನ್ಯೂಸ್ ನಾಟೌಟ್: ಸೆಮಿಸ್ ಮುಗಿದರೆ ನವೆಂಬರ್ 19ರಂದು ವಿಶ್ವಕಪ್‌ ಫೈನಲ್‌ ಹೋರಾಟ ನಡೆಯಲಿದೆ. ಐಸಿಸಿ ವಿಶ್ವಕಪ್ 2023 ಅಂತಿಮ ಹಂತವನ್ನು ತಲುಪಿದೆ. ಇಂದು ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿವೆ. ಈ ಸಂಬಂಧ ತೆಲುಗು ನಟಿಯೊಬ್ಬರು ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ.

2011ರ ವಿಶ್ವಕಪ್ ವೇಳೆ ಸುದ್ದಿಯಾಗಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಬಗ್ಗೆ ಗೊತ್ತೇ ಇದೆ. ಭಾರತ ವಿಶ್ವಕಪ್ ಗೆದ್ದರೆ ಬೆತ್ತಲೆಯಾಗಿ ತಿರುಗಾಡುತ್ತೇನೆ ಎಂದು ಘೋಷಿಸಿ ಎಲ್ಲರ ಗಮನ ಸೆಳೆದಿದ್ದಳು.ವಿಶಾಖಪಟ್ಟಣಂ ಮೂಲದ ತೆಲುಗು ನಟಿ ನಟಿ ರೇಖಾ ಬೋಜ್ ಕೂಡ ಇದೇ ರೀತಿಯ ಘೋಷಣೆ ಮಾಡಿದ್ದಾರೆ. ಭಾರತ ವಿಶ್ವಕಪ್ ಗೆದ್ದರೆ ವಿಶಾಖಪಟ್ಟಣಂ ಬೀಚ್‌ನಲ್ಲಿ ಬೆತ್ತಲೆಯಾಗಿ ನಡೆಯುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ.ಇದೀಗ ಮತ್ತೊಮ್ಮೆ ಫೇಸ್‌ಬುಕ್‌ನಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಭಾರತ ವಿಶ್ವಕಪ್ ಗೆದ್ದರೆ ವಿಶಾಖಪಟ್ಟಣಂ ಬೀಚ್‌ನಲ್ಲಿ ಬೆತ್ತಲೆಯಾಗಿ ಪರೇಡ್ ಮಾಡುವುದಾಗಿ ಪೋಸ್ಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ.

Related posts

ರಾತ್ರೋರಾತ್ರಿ 400ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ..! ಮೈತ್ರಿಗೆ ಶಾಕ್ ಕೊಟ್ಟ ಡಿಕೆಶಿ

2 ವರ್ಷದಿಂದ ಪ್ರೀತಿಸಿದ್ದ ಯುವತಿಗೆ ಗ್ರಾಮಸ್ಥರ ಮುಂದೆಯೇ ಚಾಕು ಇರಿತ..! ಯುವಕ ಪರಾರಿ..!

ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಗೆ ಬೈಕ್ ಅಪಘಾತ