ಕರಾವಳಿ

ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಜಾಥ  ಮತ್ತು  ಕಿರು ನಾಟಕ,ಕ್ಯಾನ್ಸರ್ ಕಾಯಿಲೆ ಬಗ್ಗೆ ಜಾಗೃತಿ ಹಾಗು ಅರಿವು ಕಾರ್ಯಕ್ರಮ

ನ್ಯೂಸ್ ನಾಟೌಟ್: ಕೆ.ವಿ.ಜಿ. ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವತಿಯಿಂದ ಇಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಆಯೋಜಿಸಲಾಯಿತು. ಕೆ.ವಿ.ಜಿ  ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕರು ಹಾಗು ಎ.ಓ.ಎಲ್.ಇ(R)  ಅಧ್ಯಕ್ಷರಾದ  ಡಾ| ಕೆ.ವಿ. ಚಿದಾನಂದ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕ್ಯಾನ್ಸರ್ ರೋಗದ ದುಷ್ಪರಿಣಾಮಗಳು ಹಾಗು  ಚಿಕಿತ್ಸೆ ಬಗ್ಗೆ ವಿಶ್ಲೇಷಣೆ ನೀಡಿದರು.

ಈ ಸಂದರ್ಭ  ಎ.ಓ.ಎಲ್.ಇ(R) ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಆಸ್ಪತ್ರೆಯ ಡೀನ್ ಡಾ| ನೀಲಾಂಬಿಕೈ ನಟರಾಜನ್, ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಹಾಗು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ| ಲೀಲಾಧರ್ ಡಿ.ವಿ. ಹಾಗು ನರ್ಸಿಂಗ್ ಮತ್ತು ಬಿಪಿಟಿ ಕಾಲೇಜಿನ ಪ್ರಾಂಶುಪಾಲರು ಚಿಕಿತ್ಸಾ ವಿಭಾಗದ ಮುಖ್ಯಸ್ಥರು, ಹಾಗು ತಾಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕೆ.ವಿ.ಜಿ ಮೆಡಿಕಲ್ ಕಾಲೇಜು, ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗು ಶುಶ್ರುತ ವಿಭಾಗದ ವಿದ್ಯಾರ್ಥಿಗಳು ಜಾಥ  ಮತ್ತು  ಕಿರು ನಾಟಕದ ಮೂಲಕ ಜನ ಸಾಮಾನ್ಯರಲ್ಲಿ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಜಾಗೃತಿ ಹಾಗು ಅರಿವು ಮೂಡಿಸಿದರು.

Related posts

ಮಕ್ಕಳ ರಸ್ತೆ ರಿಪೇರಿ ವಿಡಿಯೋ ವೈರಲ್ ಹಿನ್ನೆಲೆ: ಜಾಲತಾಣದಲ್ಲಿ ಹರಿಯಬಿಟ್ಟವರ ವಿರುದ್ಧ ಶಿಕ್ಷಣಾಧಿಕಾರಿಗಳಿಗೆ ದೂರು

ಬಂಟ್ವಾಳ : ಕೋಟ್ಯಂತರ ರೂ. ಮೌಲ್ಯದ ಅಕ್ಕಿ ಮಾಯ..!,ಭಾರೀ ಗೋಲ್ ಮಾಲ್ ಬಯಲಾಗಿದ್ದು ಹೇಗೆ?

ಕರಾವಳಿಯ ಕೃಷಿಕನಿಗೆ ಒಲಿದು ಬಂತು ಕೇಂದ್ರ ಸರ್ಕಾರದ ಪ್ರಶಸ್ತಿ..!ಅಷ್ಟಕ್ಕೂ ‘ಕೋಟ್ಯಾಧಿಪತಿ ರೈತ ಪ್ರಶಸ್ತಿ’ಗೆ ಈ ವ್ಯಕ್ತಿ ಆಯ್ಕೆಯಾಗಿದ್ದೇಕೆ?ಏನಿದರ ವಿಶೇಷತೆ?