ವೈರಲ್ ನ್ಯೂಸ್ಶಿಕ್ಷಣ

6 ಸಾವಿರ ರೂ.ಗೆ ಮಹಿಳೆಯನ್ನು ಕೆಲಸಕ್ಕೆ ನೇಮಿಸಿ ಊರೂರು ಸುತ್ತಿ ಮಜಾ ಮಾಡಿದ ಸರ್ಕಾರಿ ಶಾಲಾ ಶಿಕ್ಷಕ..! ಕೊನೆಗೂ ವಂಚಕ ಶಿಕ್ಷಕ ಸಿಕ್ಕಿಬಿದ್ದದ್ದು ಹೇಗೆ?

198

ನ್ಯೂಸ್ ನಾಟೌಟ್: ಪಾಠ ಮಾಡುವ ಅಧ್ಯಾಪಕರು ಮಕ್ಕಳಿಗೆ ದೇವರಿಗೆ ಸಮಾನ ಎಂದು ಹೇಳುತ್ತೇವೆ. ಅಂತಹ ಗುರುಗಳೇ ಮಕ್ಕಳಿಗೆ ಮೋಸ ಮಾಡಿದ್ರೆ ಹೇಗಿರುತ್ತೆ ಹೇಳಿ..? ಹೌದು , ಇಲ್ಲೊಬ್ಬ ಶಿಕ್ಷಕ ನಂಬಿದ ವಿದ್ಯಾರ್ಥಿಗಳ ಮೋಸ ಮಾಡಿದ್ದಾನೆ. ತಿಂಗಳಾಗುವಾಗ ಸರ್ಕಾರಿ ಸಂಬಳ ತೆಗೆದುಕೊಂಡು ಶಾಲೆಗೆ ಬಾರದೆ ಮಕ್ಕಳಿಗೆ ಪಾಠ ಮಾಡದೆ ಊರೂರು ಸುತ್ತಾಡಿದ್ದಾನೆ. ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು ತನ್ನ ಬದಲಿಗೆ ಪಾಠ ಮಾಡಲು ಶಿಕ್ಷಕಿಯನ್ನು ನೇಮಿಸಿದ್ದಾನೆ. ಸದ್ಯ ಈತನಿಗೆ ನೋಟಿಸ್ ನೀಡಲಾಗಿದೆ.

ಇಂಥದ್ದೊಂದು ಆರೋಪ ಕೇಳಿ ಬಂದಿರುವುದು ಮಹೇಂದ್ರ ಕುಮಾರ್​ ಎಂಬ ಶಾಲಾ ಶಿಕ್ಷಕನ ಮೇಲೆ. ಈತ ಚಿತ್ತಾಪುರ ತಾಲೂಕಿನ ಬಾಳಿ ನಾಯಕ್​​​ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡೋ ಶಿಕ್ಷಕ. ಸರ್ಕಾರಿ ಸಂಬಳ ಈತನಿಗೆ, ಪಾಠ ಮಾಡುವುದು ಮಾತ್ರ ಯಾರೋ ಮಹಿಳೆ. ಹೌದು, ಮಹೇಂದ್ರ ಕುಮಾರ್​​ ಮಕ್ಕಳಿಗೆ ಪಾಠ ಮಾಡಲು ತನ್ನ ಬದಲಿಗೆ 6 ಸಾವಿರ ಸಂಬಳ ನೀಡಿ ಯಾರೋ ಮಹಿಳೆಯನ್ನು ನೇಮಿಸಿದ್ದಾನೆ.

ಕಳೆದ 6 ತಿಂಗಳಿನಿಂದ ಗುತ್ತಿಗೆ ಆಧಾರದ ಮೇರೆಗೆ ನೇಮಕವಾದ ಮಹಿಳೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾಳೆ. ಮಹೇಂದ್ರ ಕುಮಾರ್​​ ಮಾತ್ರ 2 ದಿನಕ್ಕೊಮ್ಮೆ ಬಂದು ಸಹಿ ಮಾಡಿ ಹೋಗುತ್ತಿದ್ದ ಎಂದು ತಿಳಿದು ಬಂದಿದೆ.
ಇನ್ನು, ವಿಷಯ ತಿಳಿದ ಕೂಡಲೇ ಶಿಕ್ಷಕ ಮಹೇಂದ್ರ ಕುಮಾರ್​ಗೆ ಶಿಕ್ಷಣ ಇಲಾಖೆಯ ಡಿಡಿಪಿಐ ನೋಟಿಸ್​​ ನೀಡಿದ್ದಾರೆ. ಜತೆಗೆ ಆದಷ್ಟು ಬೇಗ ಇದಕ್ಕೆ ಕಾರಣ ನೀಡಿ ಎಂದು ನೋಟಿಸ್​​ನಲ್ಲಿ ಕೇಳಲಾಗಿದೆ.

See also  ಸೈಕಲ್‌ ನಲ್ಲೇ ದೇಶ ಪರ್ಯಟನೆ ಮಾಡಿದ ರೈತ!
  Ad Widget   Ad Widget   Ad Widget   Ad Widget   Ad Widget   Ad Widget   Ad Widget