ಕರಾವಳಿ

ಗೇರು ಬೀಜ ಮರಕ್ಕೆ ನೇಣು ಬಿಗಿದುಕೊಂಡು ವೃದ್ಧೆ ಆತ್ಮಹತ್ಯೆ

ನ್ಯೂಸ್ ನಾಟೌಟ್: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಮನೆಯ ಸಮೀಪದ ಗೇರು ಬೀಜ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ. ಮುಳ್ಯ ದಿ|ಕೃಷ್ಣಪ್ಪ ರವರ ಪತ್ನಿ ಸುಂದರಿ (65) ಎಂಬವರು ಆತ್ಮಹತ್ಯೆಗೆ ಶರಣಾದವರು.

ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರೆಂದೂ ಹೇಳಲಾಗುತ್ತಿದೆ. ಮೇ.13 ರಂದು ಮಧ್ಯಾಹ್ನ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೇಟೆಗೆ ಹೋಗಿದ್ದ ಅವರ ಮಗ ಸತೀಶ್ ಮನೆಗೆ ಬಂದಾಗ ತಾಯಿ ಇರಲಿಲ್ಲ. ಹುಡುಕಾಡಿದಾಗ ಅವರು ನೇಣು ಹಾಕಿಕೊಂಡಿರುವುದು ಕಂಡು ಬಂತು. ಮೃತರು ಪುತ್ರ, ಪುತ್ರಿಯರಾದ ನಳಿನಾಕ್ಷಿ, ಜಯಂತಿ,ಮೀನಾಕ್ಷಿ, ಸೌಮ್ಯ ರವರನ್ನು ಅಗಲಿದ್ದಾರೆ.

Related posts

ಮಂಗಳೂರು: ಜಿಲ್ಲಾಧಿಕಾರಿಗಳ ಆವರಣ ಎದುರಲ್ಲೇ ಚುನಾವಣಾಧಿಕಾರಿ ಆತ್ಮಹತ್ಯೆಗೆ ಯತ್ನ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ

ಚೆಡಾವು: ಹೆತ್ತ ತಾಯಿಯನ್ನೇ ದೊಣ್ಣೆಯಿಂದ ಬಡಿದು ಕೊಂದ ಮಾದಕ ವ್ಯಸನಿ ಮಗನಿಗೆ ಸಂಪಾಜೆಯ ಶಾಲೆ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ ಕರ್ನಾಟಕ ಹೈಕೋರ್ಟ್..! ಏನಿದು ಸಮುದಾಯ ಸೇವೆಯ ಶಿಕ್ಷೆ..?

ನಾಳೆ ಮುಂಬೈನಲ್ಲಿ ‘ಮಕ್ಕರ್ ತಂಡ’ದಿಂದ ಕಾಮಿಡಿ ಶೋ,ಅಮರ ತರಂಗ ತಂಡದ ಇಬ್ಬರು ಸದಸ್ಯರು ಭಾಗಿ