ಕ್ರೈಂರಾಜ್ಯವೈರಲ್ ನ್ಯೂಸ್

ಕೈಕಾಲು ಕಟ್ಟಿದ ರೀತಿಯಲ್ಲಿ ಮಹಿಳೆಯ ಕೊಳೆತ ಶವ ಪತ್ತೆ..! ಆಕೆಯ ಕಿವಿಯೋಲೆ ಬಿಚ್ಚಿಟ್ಟ ಭಯಾನಕ ಸ್ಟೋರಿ ಇಲ್ಲಿದೆ

ನ್ಯೂಸ್ ನಾಟೌಟ್: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ‌ ಕಣಿವೆ ಬಿಳಚಿ ಬಳಿ ನಡೆದಿತ್ತು. ಶವದ ಕಿವಿ ಓಲೆಯಿಂದ‌ಲೇ ಕೊಲೆವೊಂದನ್ನು (Murder case) ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳೆದ ಮೇ 9ರಂದು ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಕಿವಿಯೋಲೆ ಹಂತಕರ ಸುಳಿವು ನೀಡಿದೆ.

ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆಯಾದದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಶವ ಸಂಪೂರ್ಣ ಕೊಳೆತ ಹಿನ್ನೆಲೆಯಲ್ಲಿ ಗುರುತು ಹಿಡಿಯಲು ಕಷ್ಟವಾಗಿತ್ತು. ಶವ ಸಿಕ್ಕ ಜಾಗದಲ್ಲಿ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ನಾಪತ್ತೆ ಆಗಿದ್ದಾರೆ ಎಂಬ ಪ್ರಕರಣ ದಾಖಲಿಸಿಕೊಂಡಿದ್ದದ್ದು ತಿಳಿದಿತ್ತು.

ಭದ್ರಾ ನಾಲೆಯಲ್ಲಿ ಸಿಕ್ಕ ಶವಕ್ಕೂ ಇಲ್ಲಿ ಮಿಸ್ಸಿಂಗ್‌ ಆಗಿದ್ದ ಮಹಿಳೆಗೂ ತಾಳೆ ಮಾಡಿ ನೋಡಿದ್ದರು. ಆಗ ಶವದಲ್ಲಿದ್ದ ಕಿವಿ ಓಲೆಯಿಂದ ಮೃತಳ ಗುರುತನ್ನು ಪತ್ತೆ ಮಾಡಲಾಯಿತು. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಕೆರೆ ಗ್ರಾಮದ ನಿವಾಸಿ ನೇತ್ರಾವತಿ (47) ಕೊಲೆಯಾಗಿದ್ದಾರೆ ಎನ್ನಲಾಗಿದೆ. ಕುಮಾರ ಎಚ್ ಜಿ (38) ಹಾಗೂ ಚಿದಾನಂದಪ್ಪ (54) ಎಂಬುವವರು ನೇತ್ರಾವತಿಯನ್ನು ಕೊಂದು ನಾಲೆಗೆ ಬೀಸಾಕಿ ಹೋಗಿದ್ದರು. ಆರೋಪಿಗಳ ಜಮೀನಿನಲ್ಲಿ ನೇತ್ರಾವತಿ ಅಡಿಕೆ ಮರಗಳನ್ನು ಕಡಿದು ಹಾಕಿದ್ದಳು. ಇದೇ ಸಿಟ್ಟಿನಲ್ಲಿ ನೇತ್ರಾವತಿಯನ್ನು ಕೊಲೆ‌ ಮಾಡಿ ಬಳಿಕ ಕೈ-ಕಾಲು ಕಟ್ಟಿ ಭದ್ರಾ ಕಾಲುವೆಗೆ ಎಸೆದಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/05/viral-video-and-instagram-live-car-collision
https://newsnotout.com/2024/05/husband-and-wife-gym-trainer-issue
https://newsnotout.com/2024/05/narendra-modi-and-comedian-in-varanasi

Related posts

ಮರಳು ಮಾಫಿಯಾಕ್ಕೆ ಬಿಸಿ ಮುಟ್ಟಿಸಿದ ಪೊಲೀಸರು; ಟಿಪ್ಪರ್, ಮರಳು ವಶ

ನಟ ಫಹಾದ್ ಫಾಜಿಲ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ ಮಾನವ ಹಕ್ಕುಗಳ ಆಯೋಗ..! ಅಂದು ರಾತ್ರಿ ಆಸ್ಪತ್ರೆಯಲ್ಲೇನಾಗಿತ್ತು..?

ಇಂಡಿಗೋ ವಿಮಾನದಲ್ಲಿ ಮಹಿಳೆಯ ಅನುಚಿತ ವರ್ತನೆ! ಕುಡಿದ ಮತ್ತಿನಲ್ಲಿ ಗಲಾಟೆ!