ವೈರಲ್ ನ್ಯೂಸ್

ಮಹಿಳೆಯರ ‘ಶಕ್ತಿ’ಗೆ ಸುಸ್ತಾದ ಬಸ್ ಕಂಡೆಕ್ಟರ್‌, ಟಿಕೆಟ್‌ ನೀಡಲು ದಾರಿ ಕಾಣದೆ ಸೀಟು ಏರಿದ ವಿಡಿಯೋ ವೈರಲ್‌

ನ್ಯೂಸ್ ನಾಟೌಟ್: CM ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆ ಜಾರಿಗೆ ತಂದಿದ್ದೇ ತಡ ಮಹಿಳೆಯರು ಈ ಯೋಜನೆಯನ್ನು ಭರ್ಜರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಯಾವ ಬಸ್ ನೋಡಿದರೂ ಈಗ ರಶೋ..ರಶೋ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಮಜಾ ಸಿಗಬಹುದು. ಆದರೆ ಹೀಗೆ ಮಹಿಳೆಯರ ಭಾರಿ ಸಂಖ್ಯೆಯ ಪ್ರಯಾಣದಿಂದಾಗಿ ಬಸ್ ಚಾಲಕ ಹಾಗೂ ಬಸ್ ಕಂಡೆಕ್ಟರ್ ಹೈರಾಣಾಗಿ ಹೋಗಿದ್ದಾರೆ.
ಅದಕ್ಕೆ ಸಾಕ್ಷಿ ಎಂಬ ಇಲ್ಲೊಬ್ಬ ತುಂಬಿದ ಬಸ್​ ಒಳಗೆ ಕಂಡಕ್ಟರ್​ ಟಿಕೆಟ್​ ಕೊಡಲು ಹರಸಾಹಸಪಡುತ್ತಿದ್ದು, ಕೊನೆಗೆ ಸೀಟ್​ ಮೇಲೆ ಹತ್ತಿ ಕುಳಿತ ಘಟನೆ ಬೆಳಕಿಗೆ ಬಂದಿದೆ.
ಬಸ್​ ಸೀಟಿನ ಮೇಲೆ ಕಂಡಕ್ಟರ್​ ಏರಿ ಕುಳಿತ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಸ್ ನಲ್ಲಿ ಮಹಿಳೆಯರೇ ತುಂಬಿ ತುಳುಕಿದ್ದ ಕಾರಣ ನಿರ್ವಾಹಕ ಪರದಾಡಿದ್ದಾನೆ.

ಅಫಜಲಫುರದಿಂದ ದೇವರ ಹಿಪ್ಪರಗಿ, ಭೈರವಾಡಗಿ, ಹೂವಿನ ಹಿಪ್ಪರಗಿ, ಮುದ್ದೇಬಿಹಾಳ ಮಾರ್ಗವಾಗಿ ಹಾವೇರಿ ಜಿಲ್ಲೆಯ ಮೂಲಕ ಬ್ಯಾಡಗಿಗೆ ತೆರಳುವ ಬಸ್​ನಲ್ಲಿ ಈ ದೃಶ್ಯ ಕಂಡುಬಂದಿದೆ. ಮಂಗಳವಾರ ಬೆಳಗ್ಗೆ ನಡೆದ ಘಟನೆ ಇದಾಗಿದೆ. ಬಸ್ ಹತ್ತಿದವರಿಗೆ ಟಿಕೆಟ್ ಕೊಡುವ ಸಲುವಾಗಿ ನಿರ್ವಾಹಕ ಸೀಟ್ ಮೇಲೆ ಹತ್ತಿ ಕುಳಿತಿದ್ದಾನೆ.

Related posts

ನಮ್ಮ ಸುತ್ತ ನಕಲಿ, ಬ್ಲ್ಯಾಕ್ ಮೇಲ್ ಪತ್ರಕರ್ತರೇ ತುಂಬಿದ್ದಾರೆ..! ವಿಜಯ ಲಕ್ಷ್ಮೀ ಶಿಬರೂರು ಹೇಳಿದ್ದು ನಿಜವೇ..?

ಭ್ರಷ್ಟಾಚಾರಿಗಳನ್ನು ಬಂಧಿಸಬೇಕಿದ್ದ ಇ.ಡಿ ಅಧಿಕಾರಿಯೇ 20 ಲಕ್ಷ ಲಂಚ ಸ್ವೀಕರಿಸಿದ್ದ..! ಅಧಿಕಾರಿಯನ್ನು ಬಂಧಿಸಿದ ಸಿಬಿಐ..!

ಥಕ ಥೈ ಎಂದು ಕುಣಿದಾಡಿದ ಮರ,ಅಚ್ಚರಿ ಮೂಡಿಸಿದ ವಿಡಿಯೋ ಎಲ್ಲೆಡೆ ವೈರಲ್