Latestಕ್ರೈಂರಾಜ್ಯವೈರಲ್ ನ್ಯೂಸ್

ಮಹಿಳೆ ಬಳಿ ಕುರಿಗಳನ್ನು ಖರೀದಿಸಿ ನಕಲಿ ನೋಟು ನೀಡಿ ಆರೋಪಿಗಳು ಪರಾರಿ..! ಮಹಿಳೆಯ ವಿರುದ್ಧವೇ ದೂರು ನೀಡಿದ ಬ್ಯಾಂಕ್ ನಿರ್ದೇಶಕರು..!

1.5k

ನ್ಯೂಸ್ ನಾಟೌಟ್: ಮಹಿಳೆಯೊಬ್ಬರು ಕುರಿ ಸಾಕಾಣಿಕೆ ಮಾಡಿ ಇದರಿಂದ ಬಂದ ಲಾಭದಲ್ಲಿ ತಮ್ಮ ಜೀವನ ನಡೆಸುತ್ತಿದ್ದರು. ಆದರೆ, ಯಾರೋ ಅಪರಿಚಿತರು ಈ ಮಹಿಳೆಯಿಂದ ಕುರಿಗಳನ್ನು ಖರೀದಿಸಿ, ಅವರಿಗೆ ಖೋಟಾ ನೀಡಿ ಪರಾರಿಯಾದ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ನಿಢಘಟ್ಟ ಗ್ರಾಮದಲ್ಲಿ ನಡೆದಿದೆ.

ಕಡೂರು ತಾಲೂಕಿನ ನಿಡಘಟ್ಟ ಗ್ರಾಮದ ಹೇಮಾವತಿ ಎಂಬವರ ಬಳಿ ಅಪರಿಚಿತರು ಕುರಿಗಳನ್ನು ಖರೀದಿಸಿ, ಅವರಿಗೆ ಖೋಟಾ ನೋಟು ನೀಡಿದ್ದಾರೆ. ಕುರಿಗಳನ್ನು ಮಾರಿ ಬಂದ ಹಣವನ್ನು ಹೇಮಾವತಿ ಎಂಬವರು ಎಸ್​ಬಿಐ ಬ್ಯಾಂಕ್ ​ನಲ್ಲಿರುವ ತಮ್ಮ ಖಾತೆಗೆ ಜಮೆ ಮಾಡಲು ಹೋಗಿದ್ದಾಗ ಖೋಟಾ ನೋಟು ಎಂದು ತಿಳಿದಿದೆ.

ಹೇಮಾವತಿ 25 ಸಾವಿರ ರೂಪಾಯಿಗೆ ಕುರಿಗಳನ್ನು ಮಾರಿದ್ದರು. ಈ ಹಣವನ್ನು ಹೇಮಾವತಿ ಬ್ಯಾಂಕ್ ​ಗೆ ಜಮೆ ಮಾಡಲು ತೆರಳಿದ್ದಾರೆ. ಈ 25 ಸಾವಿರ ರೂಪಾಯಿಯಲ್ಲಿ 14 ಸಾವಿರ ರೂಪಾಯಿಯಷ್ಟು ನೋಟುಗಳು ಖೋಟಾ ಆಗಿವೆ ಎನ್ನಲಾಗಿದೆ. 500 ರೂ. ಮುಖಬೆಲೆಯ 28 ನೋಟುಗಳು ನೋಟುಗಳು ನಕಲಿ ಎಂದು ಬ್ಯಾಂಕ್​ ಸಿಬ್ಬಂದಿ ಮಹಿಳೆಗೆ ತಿಳಿಸಿದ್ದಾರೆ.

ಬಳಿಕ, ಬ್ಯಾಂಕ್ ​ನ ವ್ಯವಸ್ಥಾಪಕ ನಿರ್ದೇಶಕರು ಎಲ್ಲ ನಕಲಿ ನೋಟುಗಳನ್ನು ವಶಕ್ಕೆ ಪಡೆದು, ಸಖರಾಯಪಟ್ಟಣ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಹೇಮಾವತಿಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ, “ಕುರಿಗಳನ್ನು ಮಾರಾಟ ಮಾಡಿ ಬಂದಿರುವ ಹಣ ಎಂದು ಹೇಳಿದ್ದಾರೆ. ನಂತರ, ಪೊಲೀಸರು ಹೇಮಾವತಿ ಅವರ ವಿರುದ್ಧ ಎಫ್ ​ಐಆರ್​ ದಾಖಲಿಸಿ ಪೊಲೀಸರು ಬಿಟ್ಟು ಕಳಿಸಿದ್ದಾರೆ. ನಕಲಿ ನೋಟು ನೀಡಿದ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

ತಾಯಿ ನಾಯಿಯ ಎದುರೇ ಐದು ನಾಯಿ ಮರಿಗಳನ್ನು ನೆಲಕ್ಕೆ ಬಡಿದು ಕಲ್ಲಿನಿಂದ ಜಜ್ಜಿ ಕೊಂದ ಕ್ರೂರಿ..! ಮನಕಲಕುವ ವಿಡಿಯೋ ವೈರಲ್

ರೀಲ್ಸ್‌ ಗಾಗಿ ನಡು ರಸ್ತೆಯಲ್ಲಿ ಟೀ ಕುಡಿಯುತ್ತಾ ವ್ಯಕ್ತಿಯ ಹುಚ್ಚಾಟ..! ವಿಡಿಯೋ ವೈರಲ್

See also  3 ವರ್ಷದ ಮಗುವಿನ ಮೇಲೆ ಮನೆ ಮಾಲೀಕನ ಮಗನಿಂದ ಅತ್ಯಾಚಾರ..! ಆ ಮಗುವಿನ ಕುಟುಂಬ ಆರೋಪಿಯ ಮನೆಯಲ್ಲಿ ಬಾಡಿಗೆಗಿದ್ದರು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget