ನ್ಯೂಸ್ ನಾಟೌಟ್: ಗ್ರಾಹಕಿಯೊಬ್ಬರು ಆನ್ ಲೈನ್ ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರು, ಆಕೆಗೆ ಮಾಂಸಾಹಾರಿ ಬಿರಿಯಾನಿ ಪೂರೈಕೆ ಮಾಡಿದ ಆರೋಪದ ಮೇಲೆ ಸೋಮವಾರ (ಎ.8) ರೆಸ್ಟೋರೆಂಟ್ ಒಂದರ ಮಾಲಕನನ್ನು ನೊಯ್ಡಾ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ರವಿವಾರ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದ ಛಾಯಾ ಶರ್ಮ ಎಂಬ ಮಹಿಳೆ, “ನಾನು ಸ್ವಿಗ್ಗಿ ಆ್ಯಪ್ ಅನ್ನು ಬಳಸಿ, ಗ್ರೇಟರ್ ನೊಯ್ಡಾದಲ್ಲಿರುವ ಲಕ್ನೊವಿ ಕಬಾಬ್ ಪರಾಠ ಎಂಬ ರೆಸ್ಟೋರೆಂಟ್ ನಲ್ಲಿ ವೆಜ್ ಬಿರಿಯಾನಿಗೆ ಆರ್ಡರ್ ಮಾಡಿದ್ದೆ” ಎಂದು ಹೇಳಿಕೊಂಡಿದ್ದಾರೆ. ನಾನು ಒಂದೆರಡು ತುತ್ತು ಸೇವಿಸಿದ ನಂತರವಷ್ಟೆ, ನಾನು ಮಾಂಸಹಾರಿ ಬಿರಿಯಾನಿ ಸೇವಿಸುತ್ತಿದ್ದೇನೆ ಎಂಬ ಸಂಗತಿ ನನಗೆ ಮನವರಿಕೆಯಾಯಿತು ಎಂದೂ ಆಕೆ ತಿಳಿಸಿದ್ದಾರೆ.
“ನಾನು ಶುದ್ಧ ಸಸ್ಯಾಹಾರಿಯಾಗಿದ್ದು, ನವರಾತ್ರಿಯ ವೇಳೆ ಅವರು ನನಗೆ ಮಾಂಸಾಹಾರಿ ಬಿರಿಯಾನಿಯನ್ನು ಪೂರೈಸಿದ್ದಾರೆ” ಎಂದು ಆರೋಪಿಸಿರುವ ಆಕೆ, “ರೆಸ್ಟೋರೆಂಟ್ ಈ ಕೃತ್ಯವನ್ನು ಉದ್ದೇಶಪೂರ್ವಕವಾಗಿಯೇ ಮಾಡಿದೆ” ಎಂದೂ ದೂರಿದ್ದಾರೆ. ಆಕೆಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸೋಮವಾರ ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ನೊಯ್ಡಾದ ಉಪ ಪೊಲೀಸ್ ಆಯುಕ್ತ ಶಕ್ತಿ ಮೋಹನ್ ಅವಸ್ಥಿ, ವಿಡಿಯೊವನ್ನು ಆಧರಿಸಿ ನಾವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
“ಈ ಸಂಬಂಧ ಬಿಸ್ರಖ್ ಠಾಣೆಯ ಪೊಲೀಸರು ರೆಸ್ಟೋರೆಂಟ್ ನ ಉದ್ಯೋಗಿಯೊಬ್ಬನನ್ನು ವಶಕ್ಕೆ ಪಡೆದಿದ್ದು, ಈ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಇದಾದ ನಂತರ, ಸೋಮವಾರದಂದು ರಾಹುಲ್ ರಾಜ್ಯವಂಶಿ ಎಂಬ ಹೆಸರಿನ ರೆಸ್ಟೋರೆಂಟ್ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಈವರೆಗೆ ಯಾವುದೇ ಎಫ್ಐಆರ್ ಅನ್ನು ದಾಖಲಿಸಿಕೊಂಡಿಲ್ಲ.
17 ವರ್ಷದ ಬಾಲಕನ ಜೊತೆ 3 ಮಕ್ಕಳ ತಾಯಿಗೆ ಲವ್..! ಪ್ರೀತಿಗಾಗಿ ಪತಿ ಮತ್ತು ಮೂರು ಮಕ್ಕಳನ್ನು ಬಿಟ್ಟು ಹೋದ ಮಹಿಳೆ..!
ಗರ್ಭಿಣಿ ಪತ್ನಿಗೆ ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಭೀಕರ ಹಲ್ಲೆ..! ಸಿಸಿಟಿವಿಯಲ್ಲಿ ದೃಶ್ಯ ಸೆರೆ..!