Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮಗಳ ಮಾವನ ಜೊತೆ ನಾಲ್ಕು ಮಕ್ಕಳ ತಾಯಿ ಪರಾರಿ..! ದೂರು ದಾಖಲಿಸಿದ ಗಂಡ..!

1.1k

ನ್ಯೂಸ್‌ ನಾಟೌಟ್‌: ನಾಲ್ಕು ಮಕ್ಕಳ ತಾಯಿಯೊಬ್ಬಳು ತನ್ನ ಮಗಳ ಮಾವನ ಜತೆಯೇ ಪರಾರಿ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಯುಪಿಯ ಬದೌನ್‌ನ ಮಮತಾ(43 ವರ್ಷ) ಎಂಬ ಮಹಿಳೆ ತನ್ನ ಮಗಳ ಮಾವ ಶೈಲೇಂದ್ರ ಅಲಿಯಾಸ್ ಬಿಲ್ಲು (46 ವರ್ಷ) ಜೊತೆ ಓಡಿಹೋಗಿದ್ದಾಳೆ.

ಮಮತಾಳಿಗೆ ನಾಲ್ಕು ಮಕ್ಕಳಿದ್ದಾರೆ. ಓರ್ವ ಮಗಳಿಗೆ 2022ರಲ್ಲಿ ವಿವಾಹವಾಗಿದೆ. ಆಕೆಯ ಗಂಡ ಸುನೀಲ್‌ ಕುಮಾರ್ ವೃತ್ತಿಯಲ್ಲಿ ಟ್ರಕ್‌ ಚಾಲಕನಾಗಿದ್ದು, ಈ ಕಾರಣದಿಂದ ತಿಂಗಳಿಗೆ ಎರಡು ಸಲ ಮಾತ್ರ ಮನೆಗೆ ಬರುತ್ತಿದ್ದರು.

ಮಮತಾ ತನ್ನ ಮಗಳ ಮಾವನಾಗಿದ್ದ ಶೈಲೇಂದ್ರ ಕುಮಾರ್ ಜೊತೆ ಆತ್ಮೀಯತೆಯಿಂದ ಇರುತ್ತಿದ್ದರು. ಆಗಾಗ ಶೈಲೇಂದ್ರ ಅವರನ್ನು ತಮ್ಮ ಮನೆಗೆ ಕರೆಸುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗಷ್ಟೇ ಮಮತಾ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣದೊಂದಿಗೆ ಮಗಳ ಮಾವ ಶೈಲೇಂದ್ರ ಜತೆ ಓಡಿ ಹೋಗಿದ್ದಾರೆ.

“ಸುನೀಲ್ ಕುಮಾರ್ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮನೆಗೆ ಬರುತ್ತಿದ್ದರು. ಅವರು ಇಲ್ಲದಿದ್ದಾಗ, ಮಮತಾ ಆಗಾಗ್ಗೆ ಶೈಲೇಂದ್ರ ಅವರಿಗೆ ಕರೆ ಮಾಡುತ್ತಿದ್ದರು. ಅವರು ಸಂಬಂಧಿಯಾಗಿದ್ದರಿಂದ ಯಾರಿಗೂ ಏನೂ ಅನುಮಾನ ಬರುತ್ತಿರಲಿಲ್ಲ” ಎಂದು ನೆರೆಯ ಅವಧೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಆಕೆಯ ಗಂಡ ಸುನೀಲ್ ಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶೈಲೇಂದ್ರ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದಾರೆ.

ದೇಶದಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ರಾಜಸ್ಥಾನದಲ್ಲೂ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ತಯಾರಿ, ಈ ಬಗ್ಗೆ KMF ಹೇಳಿದ್ದೇನು..?

ಅನಧಿಕೃತ ವ್ಯವಹಾರ ನಡೆಸುತ್ತಿದ್ದ ಕಂಪನಿಗೆ ಪ್ರಚಾರ ಮಾಡಿ ಕೋಟಿಗಟ್ಟಲೆ ನಗದು ಸಂಭಾವನೆ ಪಡೆದಿದ್ದ ನಟ..! ಟಾಲಿವುಡ್ ಸೂಪರ್ ಸ್ಟಾರ್ ಗೆ ED ನೋಟಿಸ್..!

 

See also  ವಿದ್ಯಾರ್ಥಿನಿ ಆತ್ಮಹತ್ಯೆಯ ರಹಸ್ಯ ಬಯಲು..! ಈ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget