ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮಹಿಳಾ ವಕೀಲರು ಬುರ್ಖಾ ಧರಿಸಿ ವಾದ ಮಾಡುವಂತಿಲ್ಲ ಎಂದು ಆದೇಶಿಸಿದ ಹೈಕೋರ್ಟ್, ಬುರ್ಖಾ ತೆಗೆಯಲು ನಿರಾಕರಿಸಿದ ವಕೀಲೆ..!

ನ್ಯೂಸ್ ನಾಟೌಟ್ : ಬಾರ್ ಕೌನ್ಸಿಲ್ ಆಫ್ ಇಂಡಿಯಾದ ವಸ್ತ್ರ ಸಂಹಿತೆ ನಿಯಮಗಳ ಪ್ರಕಾರ ಮಹಿಳಾ ವಕೀಲರು ಬುರ್ಖಾ ಧರಿಸಿ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಜಮ್ಮು- ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಆದೇಶಿಸಿದೆ.

ಡಿ.13ರಂದು ಸೈಯದ್ ಐನೈನ್ ಖಾದ್ರಿ ಎಂದು ಪರಿಚಯಿಸಿಕೊಂಡ ಮಹಿಳಾ ವಕೀಲರೊಬ್ಬರು ಮುಖ ಮುಚ್ಚಿಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸಲು ಹಾಜರಾಗಿದ್ದರು. ಇದನ್ನು ಗಮನಿಸಿದ ನ್ಯಾಯಾಲಯ, ಬುರ್ಖಾ ಧರಿಸಿ ನ್ಯಾಯಾಲಯದಲ್ಲಿ ಹಾಜರಾಗುವಂತಿಲ್ಲ ಎಂದು ಹೇಳಿತು.

ಕೌಟುಂಬಿಕ ಹಿಂಸಾಚಾರದ ದೂರು ರದ್ದುಗೊಳಿಸುವಂತೆ ಕೋರಿದ ಪ್ರಕರಣದಲ್ಲಿ ತಾನು ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ಅವರು ನ್ಯಾಯಾಲಯಕ್ಕೆ ಹೇಳಿ ವಾದಕ್ಕೆ ಮುಂದಾಗಿದ್ದರು. ಆದರೆ ಬುರ್ಖಾ ತೆಗೆದು ವಾದ ಮಂಡಿಸುವಂತೆ ನ್ಯಾಯಮೂರ್ತಿ ರಾಹುಲ್ ಭಾರತಿ ಸೂಚಿಸಿದಾಗ, ಅದು ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿ ಬುರ್ಖಾ ತೆಗೆಯಲು ನಿರಾಕರಿಸಿದ್ದರು. ಹೀಗಾಗಿ ಮಹಿಳಾ ವಕೀಲರ ಗುರುತು ಪರಿಚಯಗಳನ್ನು ಖಾತರಿಪಡಿಸಿಕೊಳ್ಳಲು ಸಾಧ್ಯವಾಗದ್ದರಿಂದ ನ್ಯಾಯಾಲಯ ಆಕೆ ವಾದ ಮಂಡನೆ ಮಾಡದಂತೆ ನಿರ್ಬಂಧಿಸಿತು. ವ್ಯಕ್ತಿಯಾಗಿ ಮತ್ತು ವೃತ್ತಿಪರವಾಗಿ ಅವರ ನಿಜವಾದ ಗುರುತನ್ನು ದೃಢೀಕರಿಸಲು ಈ ನ್ಯಾಯಾಲಯಕ್ಕೆ ಸಾಧ್ಯವಾಗದಿರುವುದರಿಂದ ತನ್ನನ್ನು ವಕೀಲೆ ಸೈಯದ್ ಐನೈನ್ ಖಾದ್ರಿ ಎಂದು ಗುರುತಿಸಿಕೊಳ್ಳುವ ವ್ಯಕ್ತಿಯು ಅರ್ಜಿದಾರರ ವಕೀಲರೆಂದು ಈ ನ್ಯಾಯಾಲಯವು ಪರಿಗಣಿಸುವುದಿಲ್ಲ.” ಎಂದು ನ್ಯಾಯಮೂರ್ತಿ ಭಾರತಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಕರಣವನ್ನು ಮುಂದೂಡಿದ ನ್ಯಾಯಾಲಯ, ಬುರ್ಖಾ ಧರಿಸಿ ವಾದ ಮಾಡಲು ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ರಿಜಿಸ್ಟ್ರಾರ್ ಜನರಲ್ ​ಗೆ ಆದೇಶಿಸಿತು. ಈ ಬಗ್ಗೆ ಪರಿಶೀಲನೆ ನಡೆಸಿದ ರಿಜಿಸ್ಟ್ರಾರ್ ಜನರಲ್ ಬುರ್ಖಾ ಧರಿಸಿ ವಾದ ಮಾಡಲು ಅವಕಾಶ ನೀಡುವಂಥ ಯಾವುದೇ ನಿಬಂಧನೆ ಇಲ್ಲ ಎಂದು ಡಿಸೆಂಬರ್ 5 ರಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ರಿಜಿಸ್ಟ್ರಾರ್ ವರದಿಯನ್ನು ಪರಿಶೀಲಿಸಿದ ನಂತರ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸೂಚಿಸಿದ ನಿಯಮಗಳು ಅಂತಹ ಯಾವುದೇ ಹಕ್ಕನ್ನು ಉಲ್ಲೇಖಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೆ, ವಕೀಲರು ಮತ್ತೆ ಹಾಜರಾಗದಿರಲು ನಿರ್ಧರಿಸಿದ್ದರಿಂದ ನ್ಯಾಯಾಲಯವು ವಿಷಯಕ್ಕೆ ಹೋಗಲಿಲ್ಲ. ನಂತರ, ಮತ್ತೊಬ್ಬ ವಕೀಲರು ಅರ್ಜಿದಾರರನ್ನು ಪ್ರತಿನಿಧಿಸಲು ಮುಂದಾದರು, ಡಿಸೆಂಬರ್ 13 ರಂದು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿದೆ. ಈ ಬಗ್ಗೆ ಕೋರ್ಟ್ ನಿನ್ನೆ(ಡಿ.23) ಅಧಿಕೃತವಾಗಿ ಆದೇಶವನ್ನು ದೃಢೀಕರಿಸಿದೆ.

Click

https://newsnotout.com/2024/12/700-bore-well-kannada-news-19-hours-issue-kannada-news-d/
https://newsnotout.com/2024/12/mother-got-currect-shock-and-injured-infront-of-baby-kad/
https://newsnotout.com/2024/12/8-month-ago-shop-opened-by-friends-kannada-news-case/
https://newsnotout.com/2024/12/air-bag-blast-kannada-news-viral-news-d/
https://newsnotout.com/2024/12/udupi-man-fall-into-well-kananda-news-fire-force-helps/

Related posts

ಓಣಂ ದಿನಗಳಲ್ಲಿ ಏಕೆ ಮದ್ಯಕ್ಕಿಷ್ಟೊಂದು ಬೇಡಿಕೆ..? ಕಳೆದ 9 ದಿನಗಳಲ್ಲಿ 665 ಕೋಟಿ ರೂ. ಮದ್ಯ ಮಾರಾಟ..! ಇಲ್ಲಿದೆ ಸಂಪೂರ್ಣ ಮಾಹಿತಿ

ಕ್ರಿ.ಪೂ ಸುಮಾರು 800 ರ ದೈವಾರಾಧನೆಯ ಕುರುಹುಗಳು ಪತ್ತೆಯಾಗಿದ್ದು ಎಲ್ಲಿ? ಸುಟ್ಟ ಆವಿ ಮಣ್ಣಿನ ಶಿಲ್ಪಗಳ ರಹಸ್ಯವೇನು?

ಧರ್ಮಸ್ಥಳ ದೇಗುಲಕ್ಕೆ ಉಪ ಮುಖ್ಯಮಂತ್ರಿ ಭೇಟಿ, ಡಾ.ಡಿ ವೀರೇಂದ್ರ ಹೆಗ್ಗಡೆ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದೇನು..?