ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಹೆಣ್ಣಿನ ಮೇಲೆ ಆಸೆಯಾದರೆ ನಮ್ಮ ಬಳಿ ಬನ್ನಿ, ದುಡಿದು ಬದುಕೋ ಮಹಿಳೆಯರ ಜೀವನ ಹಾಳು ಮಾಡ್ಬೇಡಿ ಎಂದ ಮಹಿಳೆ..! ಇಲ್ಲಿದೆ ವೈರಲ್ ವಿಡಿಯೋ

188

ನ್ಯೂಸ್ ನಾಟೌಟ್: ಕೋಲ್ಕತಾದ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ 31 ವರ್ಷದ ವೈದ್ಯೆಯ ಕ್ರೂರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ರೆಡ್ ಲೈಟ್ ಏರಿಯಾದ ಮಹಿಳೆಯೊಬ್ಬರು ಮಾತನಾಡಿರುವ ವಿಡಿಯೋ ಇತ್ತೀಚೆಗೆ ಭಾರೀ ವೈರಲ್ ಆಗುತ್ತಿದೆ.

ಈ ವಿಡಿಯೊದಲ್ಲಿ ಕೋಲ್ಕತ್ತಾದ ಸೋನಾಗಚಿ ‘ರೆಡ್ ಲೈಟ್ ಏರಿಯಾದ’ ಮಹಿಳೆಯೊಬ್ಬರು ಕಾಮುಕರಲ್ಲಿ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ.
ನಿಮಗೆ ಹೆಣ್ಣಿನ ಮೇಲೆ ಅಷ್ಟೊಂದು ವ್ಯಾಮೋಹವಿದ್ದರೆ ನಮ್ಮ ಬಳಿಗೆ ಬನ್ನಿ. ದಯವಿಟ್ಟು ಮಹಿಳೆಯರ ಜೀವನವನ್ನು ಹಾಳು ಮಾಡಬೇಡಿ. ಅತ್ಯಾಚಾರವನ್ನು ಮಾಡುವ ಮೂಲಕ ಅವರ ಜೀವನವನ್ನು ನಾಶಪಡಿಸಬೇಡಿ ಎಂದು ಅವರು ವಿಡಿಯೊ ಮೂಲಕ ಕರೆ ನೀಡಿದ್ದಾರೆ.

ಆಕೆಯ ಹೇಳಿಕೆಯ ವಿಡಿಯೋ ಈಗ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಅವಳನ್ನು ಹೀರೋ ಎಂದು ಹೊಗಳಿದ್ದಾರೆ ಮತ್ತು ‘ಅತ್ಯಾಚಾರಿಗಳು’ ಅವಳಿಂದ ಮಾನವೀಯತೆಯನ್ನು ಕಲಿಯಬೇಕೆಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
“ನಾವು ಇಲ್ಲಿ ದೊಡ್ಡ ರೆಡ್ ಲೈಟ್ ಏರಿಯಾವನ್ನು ಹೊಂದಿದ್ದೇವೆ. ಇಲ್ಲಿ ಮಹಿಳೆಯರು 20-50 ರೂಪಾಯಿಗಳಿಗೂ ಸಿಗುತ್ತಾರೆ. ನಿಮಗೆ ಕಾಮ ಕೆರಳಿದಾಗ ಅತ್ಯಾಚಾರ ಮಾಡುವ ಬದಲು ಇಲ್ಲಿಗೆ ಬನ್ನಿ. ಆದರೆ ದಯವಿಟ್ಟು, ಕೇವಲ ಜೀವನೋಪಾಯಕ್ಕಾಗಿ ಕಷ್ಟಪಡುತ್ತಿರುವ ಮಹಿಳೆಯರನ್ನು ಗುರಿಯಾಗಿಸಬೇಡಿ. ಈ ಮನಸ್ಥಿತಿಯನ್ನು ಬದಲಾಯಿಸುವ ಸಮಯ ಬಂದಿದೆ” ಎಂದು ಲೈಂಗಿಕ ಕಾರ್ಯಕರ್ತೆ ಹೇಳಿದ್ದಾಳೆ.

See also  ಓವರ್ ಟೇಕ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬೈಕ್ ಸವಾರ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget