ಕರಾವಳಿಕ್ರೈಂಸುಳ್ಯ

ಮರ್ಕಂಜ: ನಾಪತ್ತೆಯಾಗಿರುವ ವಿವಾಹಿತ ಮಹಿಳೆಗಾಗಿ ಬಾವಿಯೊಳಗೆ ಬಿದ್ದಿರುವ ಮಣ್ಣು ಅಗೆದು ಹುಡುಕಾಟ, ತರ್ಕಕ್ಕೆ ನಿಲುಕದ ಗೃಹಿಣಿಯ ನಿಗೂಢ ನಾಪತ್ತೆ ಪ್ರಕರಣ

284

ನ್ಯೂಸ್ ನಾಟೌಟ್ : ಮರ್ಕಂಜದಲ್ಲಿ ವಿವಾಹಿತ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಇನ್ನೂ ತಾರ್ಕಿಕ ಅಂತ್ಯವನ್ನು ಕಂಡಿಲ್ಲ.
ಮನೆಯ ಸುತ್ತಮುತ್ತಲಿನ ಹಲವು ಬಾವಿಗಳನ್ನು ಹುಡುಕಿದರೂ ಮಹಿಳೆ ಇರುವುದು ಖಾತ್ರಿಯಾಗಿಲ್ಲ. ಮನೆಯ ಸಮೀಪದ ಕಾಡಿನೊಳಗೂ ಹುಡುಕಾಟ ನಡೆಸಲಾಗಿತ್ತು ಇದುವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಮಹಿಳೆ ಕೌಟುಂಬಿಕ ಕಾರಣಗಳಿಂದ ನೊಂದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ಹುಡುಕಾಟ ನಡೆಯುತ್ತಿದೆ. ಇದೇ ವೇಳೆ ಬಾವಿಯೊಂದರ ಮಣ್ಣು ಕುಸಿದಿದೆ. ಅದರೊಳಗೆ ಮಹಿಳೆ ಇರುವ ಸಾಧ್ಯತೆ ಇದೆ ಎಂದು ಅಲ್ಲಿಗೆ ಜೆಸಿಬಿ ಯಂತ್ರವನ್ನು ತಂದು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸ್ಥಳಕ್ಕೆ ಸುಳ್ಯ ಪ್ರಭಾರ ತಹಶೀಲ್ದಾರ್ ಅರವಿಂದ, ಪಿಎಸ್ ಐ ಸಂತೋಷ್, ಕ್ರೈಂ ಎಸ್ ಐ ಸರಸ್ವತಿ , ಅಗ್ನಿ ‍ಶಾಮಕ ಸಿಬ್ಬಂದಿ ಆಗಮಿಸಿ ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಆಪತ್ಪಾಂಧವ ಪ್ರಗತಿ ಆಂಬ್ಯುಲೆನ್ಸ್ ಚಾಲಕ ಅಚ್ಚು , ಚಿದಾನಂದ ಮೂಡನಕಜೆ ಹಾಗೂ ಮುತ್ತಪ್ಪನ್ ಆಂಬ್ಯುಲೆನ್ಸ್ ನ ಅಭಿಲಾಷ್, ಊರಿನವರು ಕೂಡ ಕಾರ್ಯಾಚರಣೆಗೆ ಸಹಕಾರವನ್ನು ನೀಡಿದ್ದಾರೆ.

See also  ಅರಂತೋಡು: ಸಂಭ್ರಮದ ಈದ್ ಮಿಲಾದ್ ಆಚರಣೆ, ಪ್ರತಿಭಾ ಪುರಸ್ಕಾರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget