Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಮಗುವಿನ ಎದುರೇ ಅಮ್ಮನನ್ನು ಮರಕ್ಕೆ ಕಟ್ಟಿ ಥಳಿಸಿದ ಜನ..! ಗಂಡ ಸಾಲ ತೀರಿಸದ್ದಕ್ಕೆ ಹೆಂಡತಿಗೆ ಶಿಕ್ಷೆ, ಆರೋಪಿ ಅರೆಸ್ಟ್..!

2k

ನ್ಯೂಸ್ ನಾಟೌಟ್: ಪತಿ ಸಾಲ ಮರುಪಾವತಿಸಲು ವಿಫಲನಾಗಿದ್ದಕ್ಕೆ ಹೆಂಡತಿಯನ್ನು ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತನ್ನ ಮಗುವಿನ ಪರೀಕ್ಷಾ ಪ್ರಮಾಣಪತ್ರಗಳನ್ನು ಪಡೆಯಲು ಗ್ರಾಮಕ್ಕೆ ಹಿಂತಿರುಗಿದ್ದ ಸಿರಿಶಾ ಎಂಬ ಮಹಿಳೆಯನ್ನು ಸಾಲಕೊಟ್ಟ ಮುನಿಕಣ್ಣಪ್ಪ ಗಮನಿಸಿದ್ದಾನೆ. ಸಿರಿಷಾ ಎಂಬವರ ಪತಿ ತಿಮ್ಮರಾಯಪ್ಪ ಮೂರು ವರ್ಷಗಳ ಹಿಂದೆ ಮುನಿಕಣ್ಣಪ್ಪ ಅವರಿಂದ 80,000 ರೂ. ಸಾಲ ಪಡೆದಿದ್ದರು.

ಸಾಲ ಮರುಪಾವತಿಸಲು ಸಾಧ್ಯವಾಗದೆ ದಂಪತಿ ತಮ್ಮ ಮಕ್ಕಳೊಂದಿಗೆ ಕುಪ್ಪಂ ಮಂಡಲದ ನಾರಾಯಣಪುರಂ ಗ್ರಾಮವನ್ನು ತೊರೆದಿದ್ದರು. ಅಂದಿನಿಂದ ಸಿರಿಷಾ ತನ್ನ ಕುಟುಂಬವನ್ನು ಪೋಷಿಸಲು ಮತ್ತು ಸಾಲವನ್ನು ಮರುಪಾವತಿಸಲು ದಿನಗೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದರು. ಆಕೆಯನ್ನು ನೋಡಿದ ಕೂಡಲೇ ಮುನಿಕಣ್ಣಪ್ಪ ನಿಂದಿಸಿ, ಬೇವಿನ ಮರಕ್ಕೆ ಎಳೆದು ತಂದು, ಹಗ್ಗಗಳಿಂದ ಕಟ್ಟಿ, ಥಳಿಸಿದ್ದಾನೆ. ಸಾಲ ಪಾವತಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ಘಟನೆಯನ್ನು ವೀಕ್ಷಿಸಿದವರು ವಿಡಿಯೋದಲ್ಲಿ ದಾಖಲಿಸಲು ಪ್ರಯತ್ನಿಸಿದಾಗ, ಅವರ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕುಪ್ಪಂ ಪೊಲೀಸರು ಮುನಿಕಣ್ಣಪ್ಪನನ್ನು ಬಂಧಿಸಿದ್ದಾರೆ.
ಹಲ್ಲೆ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆದೇಶಿಸಿದ್ದರು.

See also  ಅರಂತೋಡು: ಬೈಕ್ -ಕಾರು ನಡುವೆ ಡಿಕ್ಕಿ, ಸವಾರರಿಗೆ ಗಂಭೀರ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget