ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮಹಿಳಾ ಹಾಸ್ಟೆಲ್‌ ನಲ್ಲಿ ರೆಫ್ರಿಜರೇಟರ್‌ ಸ್ಫೋಟ..! ಇಬ್ಬರು ವಿದ್ಯಾರ್ಥಿನಿಯರು ಸಾವು, ಹಲವರಿಗೆ ಗಾಯ..!

233

ನ್ಯೂಸ್ ನಾಟೌಟ್: ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡು ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟು ಹಲವರು ಘಾಯಗೊಂಡ ಘಟನೆ ಗುರುವಾರ(ಸೆ.12) ಮುಂಜಾನೆ ನಡೆದಿದೆ.

ಮೃತ ವಿದ್ಯಾರ್ಥಿನಿಯರನ್ನು ಪರಿಮಳಾ ಹಾಗೂ ಶರಣ್ಯಾ ಎಂದು ಗುರುತಿಸಲಾಗಿದೆ. ಸ್ಫೋಟದ ಭೀಕರತೆಗೆ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡು, ಹೊಗೆ ಆವರಿಸಿತ್ತು. ಒಳಗಿದ್ದವರನ್ನು ರಕ್ಷಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಮಧುರೈ ಜಿಲ್ಲಾಧಿಕಾರಿ ಎಂ.ಎಸ್. ಸಂಗೀತಾ ತಿಳಿಸಿದ್ದಾರೆ. ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

‘ವಿದ್ಯಾರ್ಥಿನಿಯರಿಗೆ ಪರ್ಯಾಯ ವಸತಿ ಕಲ್ಪಿಸಲಾಗುವುದು. ಘಟನೆ ಕುರಿತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪಿ. ತೈಗರಾಜನ್ ತಿಳಿಸಿದ್ದಾರೆ.
‘ಕಟ್ಟಡ ಹಳೆಯದಾಗಿದ್ದು, ಶಿಥಿಲಗೊಂಡಿತ್ತು. ಕಟ್ಟಡ ನೆಲಸಮಗೊಳಿಸಲು ನೋಟಿಸ್ ನೀಡಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿದೆ. ದಾಖಲೆಗಳನ್ನು ಪರಿಶೀಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Click

https://newsnotout.com/2024/09/namaz-and-ajad-kannada-news-bangla-govt-new-announcement-and-order-to-temples/
https://newsnotout.com/2024/09/first-night-man-ask-adhar-with-girl-jain-caste-kannada-news-viral/
https://newsnotout.com/2024/09/kannada-news-school-girl-arrest-police-rajashekar-arrested/
https://newsnotout.com/2024/09/wayanad-landslide-alive-family-facing-tragedy-kannada-news-marriage/
https://newsnotout.com/2024/09/ganesha-chathurti-conflict-kannada-news-46-are-arrested-kannada-news-d/
https://newsnotout.com/2024/09/kannada-news-ayyappa-temple-onam-celebration-kannada-news/
See also  'ನ್ಯೂಸ್ ನಾಟೌಟ್' ಹೆಸರಲ್ಲಿ 'ಸುಳ್ಳು ಸುದ್ದಿ' ಹಬ್ಬಿಸುತ್ತಿರುವ ಕಿಡಿಗೇಡಿಗಳು..! ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹುಷಾರ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget