ನ್ಯೂಸ್ ನಾಟೌಟ್: ವಿಚಿತ್ರವಾಗಿ ಸೂಟ್ ಕೇಸ್ ವೊಂದರಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆಯಾದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಮಹಿಳೆಯ ವಯಸ್ಸು ಸುಮಾರು 25-28 ಎಂದು ಅಂದಾಜಿಸಲಾಗಿದ್ದು, ಸಿಂಧೂರ ಹಾಗೂ ಕಾಲು ಉಂಗುರ ಧರಿಸಿರುವುದು ಕಂಡುಬಂದಿದೆ.
ಗಾಜಿಯಾಬಾದ್‌ನ ಲೋನಿ ಗಡಿ ಪ್ರದೇಶದ ಕಾಲುವೆಯಲ್ಲಿ ಮಹಿಳೆಯ ಛಿದ್ರಗೊಂಡ ಮೃತದೇಹ ಸೂಟ್‌ಕೇಸ್ ವೊಂದರಲ್ಲಿ ಪತ್ತೆಯಾಗಿದೆ. ಈ ಕುರಿತು ಮಂಗಳವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸೂಟ್ ಕೇಸ್ ನಲ್ಲಿ ಕಾಲುಗಳನ್ನು ಅಡ್ಡಲಾಗಿ ಇರಿಸಲಾಗಿದ್ದು, ಕೈ ಹಾಗೂ ತಲೆಯನ್ನು ಮೂಲೆಯಲ್ಲಿ ಇರಿಲಾಗಿತ್ತು. ಸದ್ಯ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಮಹಿಳೆಯ ಗುರುತು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.
ಇದಕ್ಕೂ ಮುನ್ನ ದೆಹಲಿಯ ನೆಹರೂ ವಿಹಾರ್‌ದಲ್ಲಿ 9 ವರ್ಷದ ಬಾಲಕಿಯ ಮೃತದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಗೂಗಲ್ ಮ್ಯಾಪ್ ನಂಬಿ ಫ್ಲೈಓವರ್ ಮೇಲೆ ಅಪಾಯಕ್ಕೆ ಸಿಲುಕಿದ ಕಾರು..! ಪ್ರಾಣಾಪಾಯದಿಂದ ಪಾರಾಗಿದ್ದೇ ಪವಾಡ..!